ಅಂಕೋಲಾ : ತಾಲೂಕಿನ ರಾಮನಗುಳಿಯಲ್ಲಿ ಅಕ್ರಮವಾಗಿ ಡಿಸೈಲ- ಪೆಟ್ರೋಲನ್ನು ಲಾರಿಗಳಿಂದ ಅಕ್ರಮವಾಗಿ ಇಳಿಸಿಕೊಂಡು ಅದಕ್ಕೆ ಮಿಕ್ಸಿಂಗ್ ಮಾಡುವ ದಂಧೆ ನಿರಾಂತಕವಾಗಿ ನಡೆಯುತ್ತಿದೆ ಎಂದು ಆರೋಪ ಬಲವಾಗಿ ಕೇಳಿ ಬಂದಿದೆ.
ರಾಮನಗುಳಿಯ ಈ ಕರಾಳ ದಂಧೆಯಿ0ದಾಗಿ ಕೋಟ್ಯಾಂತÀರ ರೂಪಾಯಿ ಬಂಡವಾಳ ಹಾಕಿ ಪೆಟ್ರೋಲ-ಡಿಸೈಲ ಬಂಕ್ ತೆರೆದ ಮಾಲಕರಿಗೆ ಸಂಕಷ್ಠ ಎದುರಾಗುವಂತಾಗಿದ್ದು, ಅಪಾರ ನಷ್ಠ ಅನುಭವಿಸುವಂತಾಗಿದೆ.
ರಾಮನಗುಳಿಯಲ್ಲಿ 20 ಅಡಿ ಎತ್ತರಕ್ಕೆ ದೊಡ್ಡ ದೊಡ್ಡ ಪರದೆಗಳನ್ನು ಹಾಗೂ ಸೀಟ್‌ಗಳನ್ನು ಅಳವಡಿಸಿಕೊಂಡು ಡಿಸೈಲ- ಪೆಟ್ರೋಲಗಳನ್ನು ಲಾರಿಗಳಿಂದ ಅಕ್ರಮವಾಗಿ ಇಳಿಸಿಕೊಳ್ಳಲಾಗುತ್ತದೆ.
ಪೊಲೀಸರ ಕಣ್ಣಿಗೆ ಮಣ್ಣೆರಚಿ ನಡೆಯುವ ಈ ದಂಧೆಯ ಹಿಂದೆ ಭಾರಿ ಪ್ರಭಾವಿ ವ್ಯಕ್ತಿಗಳ ಕೈವಾಡವಿರುವದರಿಂದ, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲು ಕೂಡ ಭಯ ಪಡುವಂಥ ಸ್ಥಿತಿ ಇದುರಾಗಿದೆ ಎಂದು ಅಸಹಾಯಕವಾಗಿ ನಾಗರಿಕರೆ ಹೇಳಿಕೊಳ್ಳುತ್ತಾರೆ.
ಅಕ್ರಮವಾಗಿ ಡಿಸೈಲ -ಪೆಟ್ರೋಲ “ಶೇಖರ” ವಾಗುತ್ತಿರುವ ಹಿಂದೆ ಕೆಲವೊಂದು ಮಾರಿಯ ಮಾಲಕರಿಗೆ ಹೆದರಿಸಿ ಪೆಟ್ರೋಲ ಪಡೆಯಲಾಗುತ್ತಿದೆ ಎಂಬ ಮಾಹಿತಿಯು ಇದೆ. ಪ್ರತಿ ದಿನ 70 ಕ್ಕೂ ಹೆಚ್ಚು ಲಾರಿಗಳಿಂದ ಡಿಸೈಲ ಮತ್ತು ಪೆಟ್ರೋಲಗಳನ್ನು ಅಕ್ರಮವಾಗಿ ಇಳಿಸಲಾಗುತ್ತಿದೆ. ಈ ದಂಧೆ ಹಗಲಿನಲ್ಲಿಯು ನಡೆಯುತ್ತಿರುವದು ಕೂಡ ಕಂಡು ಬಂದಿದೆ.
ಅಪಾರ ಪ್ರಮಾಣದಲ್ಲಿ ಡೀಸೈಲ – ಪೆಟ್ರೋಲ ಶೇಖರಿಸುತ್ತಿರುವದರಿಂದ ಏನಾದರೂ ಬೆಂಕಿ ಅವಘಡವಾದರೆ ಯಾರು ಹೊಣೆ ಎಂಬ ಪ್ರಶ್ನೆಯೂ ಇಲ್ಲಿ ಎದುರಾಗಿದೆ. ಪೆಟ್ರೋಲ ಬಂಕಗಳಲ್ಲಿ ಇರುವ ದರಗಳಿಗಿಂದ 11 ರೂಪಾಯಿ ಕಡಿಮೆ ದರದಲ್ಲಿ ಇಲ್ಲಿ ಡಿಸೈಲ ಹಾಗೂ ಪೆಟ್ರೋಲಗಳನ್ನು ಮಾರಲಾಗುತ್ತಿದೆ ಎಂಬ ಮಾಹಿತಿ ದೊರೆತಿದೆ.
ರಾಮನಗುಳಿಯ ಈ ಖತರನಾಕ್ ದಂಧೆಯ ಕಿಂಗ್‌ಪಿನ್ ಮಾತ್ರ ತನ್ಜನ 12 ಲಾರಿಗಳಿಗೆ ಇದೇ ಅಕ್ರಮ ಪೆಟ್ರೋಲನ್ನು ತನ್ನ ಲಾರಿಗಳಿಗೆ ತುಂಬಿಸಿಕೊAಡು ಮರೆಯುತ್ತಿದ್ದಾನೆ ಎಂಬ ಮಾತುಗಳು ಕೂಡ ಇದೆ.
ಸಿಪಿಐ ಚಂದ್ರಶೇಖರ ಮಠಪತಿ ಅವರು ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕಿದೆ. ದುಷ್ಠರಿಗೆ ಸಿಂಹಸ್ವಪ್ನ ಎಂದೆನಿಕೊAಡ ಪೊಲೀಸ್ ವರಿಷ್ಠಾಧಿಕಾರಿ ಎಮ್ ನಾರಾಯಣ ಅವರು ಈ ಸೂಚನೆ ಈ ಅಕ್ರಮ ಧಂಧೆಗೆ ಕಡಿವಾಣ ಹಾಕಬೇಕಿದೆ.