ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ

ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ
ಅಂಕೋಲಾ : ಅಕ್ರಮ ಕೂಟ ಕಟ್ಟಿಕೊಂಡು ಅಂದರ ಬಾಹರ್ ಇಸ್ಪೀಟ್ ಆಟದ ಮೋಜಿನಲ್ಲಿ ತೊಡಗಿದ್ದ ತಂಡದ ಮೇಲೆ ಅಂಕೋಲಾ ಪೊಲೀಸರು ದಾಳಿ ನಡೆಸಿ 7 ಯುವಕರ ಮೇಲೆ ಎಫ್‌ಐಆರ್ ದಾಖಲಿಸಿದ ಘಟನೆ ನಡೆದಿದೆ.
ಬೆಳಂಬಾರ ಗ್ರಾಮದ ಉತ್ತರ ಖಾರ್ವಿವಾಡಾದ ಅರಣ್ಯ ಪ್ರದೇಶದಲ್ಲಿ ಇಸ್ಫೀಟ್ ಆಡದಲ್ಲಿ ತೊಡಗಿದ್ದಾಗ ಪಿಎಸಥ ಉದ್ದಪ್ಪ ಧರೆಪ್ಪನವರ್ ನೇತ್ರತ್ವದ ತಂಡ ದಾಳಿ ಕಾರ್ಯಾರಣೆ ನಡೆಸಿದೆ.
ಜೂಗಾರಿ ಆಟದಲ್ಲಿ ಪಾಲ್ಗೊಂಡ ಆರೋಪದ ಮೇಲೆ ಮಂಜಗುಣಿಯ ಬೀರಪ್ಪಾ ನಾಗಪ್ಪ ನಾಯ್ಕ, ಬೆಳಂಬಾರದ ತಾಳೆಬೈಲನ ರವಿ ಶ್ರೀಕಾಂತ ಶೆಟ್ಟಿ, ಬೆಳಂಬಾರದ ಮದ್ಯ ಖಾರ್ವಿವಾಡಾದ ಜಗಧೀಶ ರಾಮಾ ಖಾರ್ವಿ, ಬೆಳಂಬಾರದ ರವಿ ತಿಮ್ಮಪ್ಪ ಗೌಡ, ಬೆಳಂಬಾರದ ಮುಡ್ರಾಣಿಯ ರಾಜೇಶ ಕೇಶವ ಗೌಡ ಹಾಗೂ ಬೆಳಂಬಾರದ ಆನಂದ ಗಣಪತಿ ಖಾವಿ ಮತ್ತು ಸುಧಾಕರ ನಾಯ್ಕ ಬಂದಿತ ಆರೋಪಿಗಳಾದ್ದು, ನ್ಯಾಯಾಲಯದ ಅನುಮತಿಯ ಮೇಲೆ ಪೊಲೀಸರು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ಜಾಮೀನು ಕ್ರಮ ಜರುಗಿಸಿ ಬಿಡುಗಡೆಗೊಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ 7250 ರೂ ನಗದು ಹಾಗೂ ಜೂಗಾರಿ ಆಟಕ್ಕೆ ಬಳಸಿದ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಿಎಸೈ ಸುಹಾಸ ಆರ್ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ. ಸಿಪಿಐ ಚಂದ್ರಶೇಖರ ಮಠಪತಿ ಅವರ ಸೂಚನೆಯ ಮೇರೆಗೆ ಅಂಕೋಲಾ ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

