ಗೋಕರ್ಣದಲ್ಲಿ ಜೂಜಿಗೆ ಕಡಿವಾಣ ಹಾಕಿದ ಸಿಪಿಐ ಶ್ರೀಧರ್ ಎಸ್.ಆರ್.
ಗೋಕರ್ಣ : ಇಲ್ಲಿನ ಭಾಗಗಳಲ್ಲಿ ನಡೆಯುತ್ತಿದ್ದ ಉತ್ಸವ ಹಾಗೂ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮೋಜಿನಾಟದ ಹೆಸರನಲ್ಲಿ ನಡೆಯುತ್ತಿದ್ದ ಜೂಜಿಗೆ ಗೋಕರ್ಣ ಠಾಣೆಯ ಸಿಪಿಐ ಶ್ರಿಧರ ಎಸ್.ಆರ್. ಕಡಿವಾಣ ಹಾಕುವ ಮೂಲಕ ನಾಗರಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಗೋಕರ್ಣ ಭಾಗದಲ್ಲಿ ಜಾತ್ರೆ-ಉತ್ಸವಗಳಲ್ಲಿ ಕಲರ ಚಾಯ್ಸ್, ರಿಂಗ ಆಟ್‌ದ ಹೆಸರಲ್ಲಿ ಜೂಜು ಆಟವು ಕಂಡು ಕಾಣದಂತೆ ನಡೆಯುತ್ತಿತ್ತು. ಸಿಪಿಐ ಶ್ರೀಧರ ಎಸ್.ಆರ್. ಅವರು ತಮ್ಮ ಭಾಗದಲ್ಲಿ ಇಂತಹ ಯಾವುದೇ ಚಟುವಟಿಕೆಗಳಿಗೆ ಆಸ್ಪದ ಕೊಡುವದಿಲ್ಲ. ಒಂದಾನು ವೇಳೆ ಇಂತಹ ಕಾನೂನು ಬಾಹಿರ ಚಟುವಟಿಕೆ ಕಂಡು ಬಂದಲ್ಲಿ ನಿರ್ದಾಕ್ಷೀಣ್ಯವಾಗಿ ಕ್ರಮ ಜರುಗಿಸಲಾಗುವದು ಎಂದು ಎಚರಿಸಿದ್ದರು.
ಇತ್ತೀಚಿಗೆ ನಡೆದ ಗಂಗಾವಳಿಯ ಗಂಗೆ ಹಬ್ಬದ ಸಂದರ್ಭದಲ್ಲಿಯು ಸಹ ಮೋಜಿ ಆಟವನ್ನು ತಡೆದಿದ್ದರು. ಇದರಿಂದಾಗಿ ನಾಗರಿಕರು ಸಹ ಸಿಪಿಐ ಶ್ರೀಧರ ಎಸ್.ಆರ್. ಅವರ ದಕ್ಷತೆಯ ಕ್ರಮಕ್ಕೆ ಹರ್ಷ ವ್ಯಕ್ತಪಡಿಸಿ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದರು. ಜೂಜಿನಾಟ ಬಂದ ಆದ ಪರಿಣಾಮದಿಂದಾಗಿ ಕಾನೂನು ಸುವ್ಯಸ್ಥೆಗೆ ಯಾವುದೇ ದಕ್ಕೆ ಬಾರದೆ ಇರುವದು ಕೂಡ ಗಮನಾರ್ಹವಾಗಿ ಕಂಡು ಬಂದಿತ್ತು.
ಗೋಕರ್ಣ ಭಾಗದಲ್ಲಿ ಒಂದಲ್ಲೊAದು ವಿನೂತನ ಪ್ರಯೋಗಗಳ ಮೂಲಕ ಹೆಸರು ವಾಸಿಯಾಗಿರುವ ಪೊಲೀಸ್ ನೀರಿಕ್ಷಕ ಶ್ರೀಧರ ಎಸ್.ಆರ್. ಅವರು ಕಾರ್ಯದಕ್ಷತೆಗೆ ಕನ್ನಡಿ ಹಿಡಿದಿದ್ದಾರೆ. ಪೊಲೀಸ್ ನಿರೀಕ್ಷಕನಾಗಿ ಕೇವಲ ಕಾನೂನು ಜಾರಿ ಮಾಡುವುದಷ್ಟೇ ಅಲ್ಲ, ಸಮುದಾಯದ ಒಳಿತಿಗಾಗಿ ನವೀನ ಪ್ರಯೋಗಗಳನ್ನು ಕೈಗೊಂಡು ಸಮರ್ಪಿತ ಸೇವಾ ಮನೋಭಾವನೆ ಮೆರೆದಿರುವ ಶ್ರೀಧರ್ ಎಸ್.ಆರ್. ಅವರ ಪಾತ್ರ, ಇಂದಿನ ಪೊಲೀಸ್ ವ್ಯವಸ್ಥೆಗೆ ಒಂದು ಮಾದರಿಯಂತಾಗಿದೆ.