ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
ಗೋಕರ್ಣ : ಬೇಲೆಹಿತ್ತಲದ ಮೀನು ಮಾರುಕಟ್ಟೆಯ ಪಕ್ಕದ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಿಂತು ಮಟಕಾ ಆಟ ನಡೆಸುತ್ತಿದ್ದಾಗ ಗೋಕರ್ಣ ಠಾಣೆಯ ಪಿಸೈ ಖಾದರ ಭಾಷಾ ಅವರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಗೋಕರ್ಣದ ಚೌಡಗೇರಿಯ ನಾರಾಯಣ ಕುಸ್ಲು ಗೌಡ ಇವರ ಮೇಲೆ ಮಟಕಾ ಆಡಿಸುತ್ತಿದ್ದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಬೇಲೆಹಿತ್ತಲದ ಮೀನು ಮಾರುಕಟ್ಟೆಯ ಪಕ್ಕದ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಿಂತು ಮಟಕಾ ಬರೆಯುತ್ತಿದ್ದಾಗ ಪಿಸೈ ಖಾದರ ಭಾಷಾ ದಾಳಿ ಅವರು ಸಿಬ್ಬಂದಿಯೊAದಿಗೆ ದಾಳಿ ನಡೆಸಿದಾಗ ಮಟ್ಕಾದಿಂದ ಪಡೆದ ಅಕ್ರಮ ನಗದು ಹಣ ಮತ್ತು ಮಟಕಾ ಆಡಲು ಬಳಸಿದ್ದ ಪರಿಕರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಎಎಸೈ ಲಕ್ಷಿö್ಮÃ ರಾಮಾ ಗುನಗಾ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ. ಆರೋಪಿ ನಾರಾಯಣ ಕುಸ್ಲು ಗೌಡ ಅವರ ಮೇಲೆ ಕೆ.ಪಿ. ಆಕ್ಟ್ ಅನ್ವಯ 78(3) ಪ್ರಕರಣ ದಾಖಲಾಗಿದೆ.