ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ಚಂದ್ರು ತಾಂಡೇಲ ಅವರ ಮೇಲೆ ಹಲ್ಲೆ ನಡೆಸಿದ ಗುರುರಾಜ್ ಶ್ರೀಶೈಲ ಕೊಳ್ಳೊಂಲ್ಲಿ
ದುಷ್ಠತನ ಮೆರೆದ ಗುರುರಾಜ್ ಅವರನ್ನು ವರ್ಗಾಯಿಸುವಂತೆ ಆಗ್ರಹ
ಅಂಕೋಲಾ: ಸೀಬರ್ಡ್ ಯೂನಿಯನ್ ಮುಖಂಡ ಹಾರವಾಡದ ದೀಪಕ ಚಂದ್ರು ತಾಂಡೇಲ ಅವರ ಮೇಲೆ ಗುರುರಾಜ್ ಶ್ರೀಶೈಲ ಕೊಳ್ಳೊಂಲ್ಲಿ ಹಲ್ಲೆ ನಡೆಸಿದ ಘಟನೆಗೆ ಸೀಬರ್ಡ್ ಕಾರ್ಮಿಕ ವಲಯದಲ್ಲಿ ತೀವ್ರ ಖಂಡನೆಗೆ ವ್ಯಕ್ತವಾಗಿದೆ.ವಲಯದಲ್ಲಿ ತೀವ್ರ ಖಂಡನೆಗೆ ವ್ಯಕ್ತವಾಗಿದೆ.
ಸೀಬರ್ಡ ಉದ್ಗೋಗಿಗಳ ದುಖ: ದುಮ್ಮಾನಕ್ಕೆ ಜೊತೆಯಾಗಿ, ಯೂನಿಯನ್ ಅಧ್ಯಕ್ಷನಾಗಿ ಜನಪರವಾದ ಕೆಲಸ ಮಾಡುತ್ತಿರುವ ದೀಪಕ ತಾಂಡೇಲ ಅವರು ತಮ್ಮ ಉದ್ಯೋಗಿಗಳಿಗೆ ಯಾಕೆ ಸುಮ್ಮನೆ ತೊಂದರೆ ಕೊಡುತ್ತೀರಿ ಎಂದು ಪ್ರಶ್ನಿಸಿದ್ದಕ್ಕೆ ಗರಂ ಆದ ಗುರುರಾಜ್ ಶ್ರೀಶೈಲ ಕೊಳ್ಳೊಂಲ್ಲಿ ಹಲ್ಲೆ ನಡೆಸುವ ಮೂಲಕ ತನ್ನ ದುಷ್ಠತನ ಮೆರೆದಿದ್ದಾನೆ ಎಂದು ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಕಾರವಾರದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಾಗಿತ್ತು :
ಭಾರತೀಯ ನೌಕಾ ನೆಲೆಯಲಿ. ಸಿವಿಲಿಯನ್ ಆಗಿರುವ ದೀಪಕ ತಾಂಡೇಲ, ಸೀಬರ್ಡ ಯೂನಿಯನ್‌ನ ಅಧ್ಯಕ್ಷನಾಗಿಯೂ ಸೇವೆ ನೀಡುತ್ತಿದ್ದಾರೆ. 24-12-2025 ರಂದು ಸಂಜೆ 4 ಗಂಟೆಯ ಸುಮಾರಿಗೆ ತಮ್ಮ ಅರ್ಗಾದ YAS ವಿಭಾಗದ ಚಾರ್ಜಮ್ಯಾನ್ ಆಗಿರುವ ಗುರುರಾಜ್ ಶ್ರೀಶೈಲ ಕೊಳ್ಳೊಂಲ್ಲಿ ಅವರಿಗೆ ಪೋನ್ ಮಾಡಿ ಅರ್ಗಾ ನೌಕಾನೆಲೆ ಅಧಿಕಾರಿಗಳು ಪೋರ್ಕ ಲಿಪ್ಟ್ ಕೆಲಸ ಮಾಡುವ ಕೆಲಸಗಾರಿಗೆ ಬೈಯಿಯ್ದು, ಪೋರ್ಕ ಲಿಪ್ಟ್ ಕೆಲಸ ಬಂದ ಮಾಡಲು ಕೇಳಿಕೊಂಡಾಗ, ಅದಕ್ಕೆ ಗುರುರಾಜ್ ನೀನು ಬೇರೆ ಕೆಲಸವನ್ನು ನೋಡಿಕೊ ಅಂತಾ ಹೇಳಿದ್ದಾರೆ. ನಂತರ YAS ವಿಭಾಗದ ಅಸಿಸ್ಟೆಂಟ ಮ್ಯಾನೇಜರ ಕಚೇರಿ ಹತ್ತಿರ ಬಂದು ಇದೇವಿಷಯವಾಗಿ ಮಾತಿಗೆ ಮಾತಾಗಿದ್ದು ನಂತರ ಆಪಾದಿತ ಗುರುರಾಜ್ಮೊಬೈಲಿನಿಂದ ಯಾರಿಗೋ ಕರೆ ಮಾಡಿ ತನ್ನನ್ನು ಮುಗಿಸುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿ ತನ್ನ ಹತ್ತಿರ ಬಂದು ತನ್ನ ಶರ್ಟ ಹಿಡಿದು ಎಳೆದು ಕುತ್ತಿಗೆಯ ಎಡಭಾಗಕ್ಕೆ ಬಲಭಾಗಕ್ಕೆ ಕೈಯಿಂದ ಹೊಡೆದು ತೆರೆಚಿದ ಗಾಯಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ದೂರಿನಲ್ಲಿ ದೀಪಕ ಚಂದ್ರು ತಾಂಡೇಲ ತಿಳಿಸಿದ್ದಾರೆ.
ಕಾರ್ಮಿಕರ ಕಷ್ಟಗಳಿಗೆ ಧ್ವನಿಯಾಗಿರುವ ದೀಪಕ ತಾಂಡೇಲ ಅವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸೀಬರ್ಡ್ ನೌಕರರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. ಕಾರ್ಮಿಕರ ಸಮಸ್ಯೆ ಆಲಿಸಿ, ಸಮಸ್ಯೆಯ ಪರಿಹಾರಕ್ಕೆ ಬಂದ ದೀಪಕ ತಾಂಡೇಲ ಅವರ ಆತ್ಮಸ್ಥೆöÊರ್ಯ ಕುಗ್ಗಿಸಲು ನಡೆದ ಈ ಹಲ್ಲೆ ಪ್ರಕರಣವು ತೀವ್ರ ಜಿಜ್ಞಾಸೆಗೆ ಕಾರಣವಾಗಿದೆ. ದೀಪಕ ತಾಂಡೇಲ ಅವರ ಪರವಾಗಿ ಅನೇಕ ಸಂಘಟನೆಗಳು ಬೆಂಬಲ ಸೂಚಿಸಿ ಗುರುರಾಜ್ ಶ್ರೀಶೈಲ ಕೊಳ್ಳೊಂಲ್ಲಿ ಅವರನ್ನು ವರ್ಗಾಯಿಸುವಂತೆ ಆಗ್ರಹಿಸಿದೆ.