ಅಂಕೋಲಾದಲ್ಲಿ ಗಫ್ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು
ಮೌನವಾಗಿದ್ದ ಮದುವೆ, ಆಸ್ಪತ್ರೆಯಲ್ಲಿ ಸತ್ಯ ಬಹಿರಂಗ
ರಾಘು ಕಾಕರಮಠ.
ಅಂಕೋಲಾ:ಇನ್ನೂ ಬದುಕಿನ ಕಷ್ಟ ಸುಖಗಳ ಅರಿವೇ ಇಲ್ಲದ ವಯಸ್ಸಿನಲ್ಲಿ ಸಪ್ತಪದಿ ತುಳಿಯಬೇಕಾದ ಪರಿಸ್ಥಿತಿ ಎದುರಾದ ಘಟನೆ ತಾಲೂಕಿನಲ್ಲಿ ಆಘಾತ ಮೂಡಿಸಿದೆ. 16 ವರ್ಷದ ತರುಣಿಯೊಬ್ಬಳನ್ನು 28 ವರ್ಷದ ಯುವಕನೊಬ್ಬ ಗಫ್ಚುಪ್ ಆಗಿಮದುವೆಯಾಗಿ ತನ್ನಮನೆಯಲ್ಲಿ ಇಟ್ಟುಕೊಂಡಿದ್ದ ಪ್ರಕರಣ ಈಗ ಬೆಳಕಿಗೆ ಬಂದಿದೆ.
ಹೊಟ್ಟೆನೋವು ಎಂದು ಆಸ್ಪತ್ರೆಗೆ ಬಂದಾಗ ವೈದ್ಯಕೀಯ ಪರೀಕ್ಷೆಯಲ್ಲಿ ಆಕೆ ಗರ್ಭಿಣಿ ಎಂಬುದು ತಿಳಿದುಬಂದಿದೆ. ಅನುಮಾನಗೊಂಡ ವೈದ್ಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ತಾನು ಗೋಕರ್ಣದ ರಾಮತೀರ್ಥ ದೇವಸ್ಥಾನದಲ್ಲಿ ಮದುವೆಯಾಗಿದ್ದೇನೆ ಎಂದು ಯುವತಿ ಹೇಳಿಕೆ ನೀಡಿದಾಗ ಬಾಲ್ಯ ವಿವಾಹದ ಸಂಗತಿ ಬಹಿರಂಗವಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವಕನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ. ಈ ಪ್ರಕರಣದಲ್ಲಿ ಇನ್ಯಾರು ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ಪೊಲೀಸರು ಆಳವಾಗಿ ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಸಮಾಜಕ್ಕೆ ಎಚ್ಚರಿಕೆಯ ಘಂಟೆಯಾಗಿ ಪರಿಣಮಿಸಿದ್ದು, ಬಾಲ್ಯ ವಿವಾಹದ ವಿರುದ್ಧಕಟ್ಟುನಿಟ್ಟಿನ ಕ್ರಮ ಹಾಗೂ ಜಾಗೃತಿ ಅಭಿಯಾನಗಳು ಇನ್ನಷ್ಟು ಬಲಪಡಿಸುವ ಅಗತ್ಯತೆ ಮತ್ತೊಮ್ಮೆ ಮನವರಿಕೆಯಾಗಿಸಿದೆ.
ಕಾನೂನು ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳಿಗೆ ಮದುವೆ ಮಾಡುವುದು ಅಪರಾಧ. “ಪ್ರೊಹಿಬಿಷನ್ ಆಫ್ಚೈ ಲ್ಡ್ಮ್ಯಾರೇಜ್ ಆಕ್ಟ್” ಪ್ರಕಾರ ಇಂಥ ಮದುವೆಗಳು ಗಂಭೀರ ಅಫರಾಧವಾಗಿದ್ದು, ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸುವ ಕಾನೂನು ಇದೆ. ಇದರ ಜೊತೆಗೆ ಅಪ್ರಾಪ್ತ ವಯಸ್ಸಿನ ಬಾಲಕಿಯೊಂದಿಗೆ ಶಾರೀರಿಕ ಸಂಬ0ಧ ಹೊಂದಿರುವುದು ಪೊಕ್ಸೋಕಾಯ್ದೆ ಅಡಿಯಲ್ಲಿ ಗಂಭೀರ ಅಪರಾಧವಾಗಿದೆ.
ವಿಲಕ್ಷಣ ಬಾಲ್ಯ ವಿವಾಹದಿಂದತ ರುಣಿಯರು ಮಾನಸಿಕ ಹಾಗೂ ಶಾರೀರಿಕವಾಗಿ ಸಿದ್ಧರಾಗುವ ಮುನ್ನಮದುವೆಯ ಹೊರೆ ಹೊರುವಂತಾಗುತ್ತದೆ ಎಂದು ಮಾನಸಿಕ ತಜರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಪ್ರಾಪ್ತೆಂiÀiನ್ನು ಪುಸಲಾಯಿಸಿ ಬಾಲ್ಯ ಮದುವೆಯಾಗಿರುವ ಹಾಗೂ ಲೈಂಗಿಕ್ದೌರ್ಜನ್ಯ ಎಸೆಗಿರುವ ಬಗ್ಗೆ ಪೊಕ್ಸೋಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ.
ಚಂದ್ರಶೇಖರ ಮಠಪತಿ.
ಸಿಪಿಐ ಅಂಕೋಲಾ ಪೊಲೀಸ್ ಠಾಣೆ.

ಸಂತ್ರಸ್ತ ಯವತಿಯೊಂದಿಗೆ ಆಪ್ತ ಸಮಾಲೋಚನೆ ನಡೆಸಿದಾಗ ಈ ಘಟನೆ ಸಮಾಜದಲ್ಲಿ ಇನ್ನೂ ಜಾಗೃತಿ ಕೊರತೆಯಿರುವುದನ್ನು ತೋರಿಸುತ್ತದೆ. ಶಿಕ್ಷಣ, ಅರಿವು ಹಾಗೂ ಪೋಷಕರ ಜವಾಬ್ದಾರಿಯಿಂದ ಇಂಥ ಘಟನೆಗಳನ್ನು ತಡೆಗಟ್ಟಲು ಅಗತ್ಯ. ಬಾಲ್ಯ ವಿವಾಹವು ಬಾಲಕಿಯ ಶಿಕ್ಷಣ, ಆರೋಗ್ಯ ಹಾಗೂ ಭವಿಷ್ಯವನ್ನುಕತ್ತಲೆಗೆತಳ್ಳುತ್ತದೆ.
ಪಲ್ಲವಿ ನಾಯ್ಕ.
ಮಹಿಳಾ ಸಾಂತ್ವನ ಕೇಂದ್ರ ಅಂಕೋಲಾ.
