ಅಂಕೋಲಾ : ಅವರ್ಸಾದ ಸರಕಾರಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಅಭ್ಯಸಿಸಿದ ರಕ್ಷಿತಾ ವಸಂತ ಗುನಗಾ ದ್ವಿತೀಯ ಪಿಯುಸಿಯಲ್ಲಿ 600 ಕ್ಕೆ 598 ಅಂಕಗಳಿಸಿ, ಶೇ. 98.16 ಅಂಕಗಳೊಂದಿಗೆ ರಾಜ್ಯಕ್ಕೆ 10 ನೇ ಸ್ಥಾನ ಗಳಿಸಿದ್ದಾಳೆ.

ಸಾಧನೆಗೈದ ರಕ್ಷಿತ ಗುನಗಾ ಅಂಕೋಲಾ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.

ಕಾಲೇಜಿಗೆ ಹಾಗೂ ಊರಿಗೆ ಕೀರ್ತಿ ತಂದಿರುವ ಅವರ್ಸಾ ಈ ಪ್ರತಿಭೆ, ಯಾವುದೇ ಟ್ಯೂಶನ್‌ಗೆ ಹೋಗದೆ ತನ್ನದೇ ಗ್ರಾಮದ ಸರ್ಕಾರಿ ಕಾಲೇಜಿನಲ್ಲಿ ಅಭ್ಯಸಿಸಿ ಸಾಧನೆ ಮಾಡಿದ್ದಾಳೆ.

ರಸಾಯನ ಶಾಸ್ತ್ರ, ಗಣಿತದಲ್ಲಿ 100 ಕ್ಕೆ 100 ಹಾಗೂ ಜೀವಶಾಸ್ತ್ರದಲ್ಲಿ 99, ಭೌತಶಾಸ್ತ್ರದಲ್ಲಿ 97 ಅಂಕ ಪಡೆದಿದ್ದಾಳೆ. ಪಿಸಿಎಂಬಿಯಲ್ಲಿ 400ಕ್ಕೆ 396 ಅಂಕ ಪಡೆದಿದ್ದು ಗಮನಾರ್ಹ ಸಾಧನೆಯಾಗಿದೆ.

ಈ ಗ್ರಾಮೀಣ ಪ್ರತಿಭೆಯ ಉತ್ತಮ ಸಾಧನೆಗೆ ಕಾಲೇಜು ಅಭಿವೃದ್ಧಿ ಸಮಿತಿಯವರು, ಪ್ರಾಂಶುಪಾಲರು, ಉಪನ್ಯಾಸಕ ವೃಂದ , ಊರ ನಾಗರಿಕರು ಅಭಿನಂದಿಸಿ, ಉಜ್ವಲ ಭವಿಷ್ಯಕ್ಕೆ ಹಾರೈಸಿದ್ದಾ

ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ... https://chat.whatsapp.com/HyQE3CIKWEICSXQCoirwQE