ಅಂಕೋಲಾ ; ರಾಜಸ್ಥಾನದಲ್ಲಿ ನಡೆದ ಹಿಂದೂ ಟೈಲರ್ ಕನ್ನಯ್ಯನ ಅಮಾನವೀಯ ಹತ್ಯೆ ಖಂಡಿಸಿ, ಹಾಗೂ ರಾಜ್ಯಸ್ಥಾನದ ಕಾಂಗ್ರೆಸ್ ಸರಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಿ ಜಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ, ರಾಜ್ಯಪಾಲರಿಗೆ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಿದರು.


ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಪ್ರಶಾಂತ ನಾಯ್ಕ ಮಾತನಾಡಿ, ಕಾಂಗ್ರೆಸ್ ಸರಕಾರದ ತುಷ್ಠೀಕರಣ ನೀತಿಯ ಫಲವಾಗಿ ರಾಜಸ್ಥಾನದಲ್ಲಿ ಹಿಂದೂ ಟೈಲರ್ ಕನ್ನಯ್ಯನ ಭೀಕರ ಕೊಲೆಯಾಗಿದೆ. ಇಂತಹ ಘಟನೆ ಹೇಯಕರವಾಗಿದೆ. ಕೂಡಲೇ ಮಹಾರಾಷ್ಟ್ರದ ರಾಜ್ಯ ಸರಕಾರವನ್ನು ವಜಾಗೊಳಿಸಿ ಜನತೆಗೆ ನೆಮ್ಮದಿಯ ಬದುಕಿಗೆ ಅವಕಾಶ ನೀಡುವಂತಾಗಬೇಕು ಎಂದರು.
ಬಿಜೆಪಿಯ ತಾಲೂಕಾಧ್ಯಕ್ಷ ಸಂಜಯ ನಾಯ್ಕ. ಭಾವಿಕೇರಿ ಮಾತನಾಡಿ, ದೇಶದಲ್ಲಿ ಹಿಂದು ಯುವಕರ ಹತ್ಯೆಯಾದರೆ ಕಾಂಗ್ರೆಸ್ ತುಟಿ ಬಿಚ್ಚುವದಿಲ್ಲ. ಕಾಂಗ್ರೆಸ ಬೆಂಬಲಿತ ಬುದ್ದಿ ಜೀವಿಗಳು ದೇಶಕ್ಕೆ ಮಾರಕರಾಗಿದ್ದಾರೆ ಎಂದರು.


ಈ ಸಂದರ್ಭದಲ್ಲಿ ಯುವ ಮೋರ್ಚಾದ ತಾಲೂಕಾಧ್ಯಕ್ಷ ಸಂತೋಷ ಭಾಸ್ಕರ ನಾರ್ವೆಕರ, ಪ್ರಧಾನ ಕಾರ್ಯದರ್ಶಿಗಳಾದ ನಿಲೇಶ ನಾಯ್ಕ, ನಾಗರಾಜ್ ಖಾರ್ವಿ, ಕಾರ್ಯದರ್ಶಿಗಳಾದ ಅನಿಲ ಮಹಾಲೆ. ಕನಸಿಗದ್ದೆ, ಧೀರಜ್ ಬಾನಾವಳಿಕರ. ಬೇಲೆಕೇರಿ, ಅನಿಲ ಮಹಾಲೆ ಕನಸಿಗದ್ದೆ, ಪ್ರಮುಖರಾದ ಸಂದೀಪ ಗಾಂವಕರ, ಪ್ರವೀಣ ನಾಯ್ಕ, ನಾಗರಾಜ್ ಐಗಳ, ಹೂವಾ ಖಂಡೇಕರ, ಬಾಲಕೃಷ್ಣ ನಾಯ್ಕ. ಬೊಬ್ರವಾಡ, ಲಕ್ಷ್ಮೀಕಾಂತ ನಾಯ್ಕ, ದಾಮೋದರ ರಾಯ್ಕರ, ಸುಬ್ರಮಣ್ಯ ಗಾಂವಕರ, ಕಿಶೋರ ಕೆ. ದೇವಧರ, ಪ್ರಶಾಂತ ಪಟಗಾರ, ನರೇಶ ನಾಯ್ಕ. ಅವರ್ಸಾ, ನಿಶಾನ್ ಶೇಣ್ವಿ, ಶಾಂತಾ ಹರಿಕಂತ್ರ, ವೆಂಕಟೇಶ ದುರ್ಗೆಕರ, ರಜತ್ ನಾಯ್ಕ, ಗೌರೀಶ ನಾಯ್ಕ, ಮೂರ್ತಿ ಶಶಿಕಾಂತ ನಾಯ್ಕ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಕಾರವಾರ ಟೈಮ್ಸ್ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…

https://chat.whatsapp.com/HyQE3CIKWEICSXQCoirwQE