ಅಂಕೋಲಾ : ನಾಡಿನ ಹೆಮ್ಮೆಯ ಹಿರಿಯಸಾಹಿತಿ ವಿಷ್ಣು ನಾಯ್ಕ ಅವರ ಜನ್ಮದಿನದ ನಿಮಿತ್ತ ಶುಕ್ರವಾರ ಅವರ ನಿವಾಸದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅವರನ್ನು ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಸಾಹಿತಿ ವಿಷ್ಣು ನಾಯ್ಕಅವರಿಗೆ ಪ್ರಿಯವಾದ ಮತ್ತು ಜನಪ್ರಿಯವಾದ ನನ್ನ ಅಂಬಾರಕೊಡಲು ಎಂಬ ಕವಿತೆಯನ್ನು ಕಸಾಪದ ಕೋಶಾಧ್ಯಕ್ಷ ಸಿದ್ದ ಕವಿ ವಿಷ್ಣು ನಾಯ್ಕರಿಗೆ ಕ.ಸಾ.ಪ.ದಿಂದ ಅಭಿನಂದನೆ ಲಿಂಗಸ್ವಾಮಿ ವಸ್ತ್ರದ ವಾಚಿಸಿದರು.
ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಅಭಿನಂದನಪರ ಮಾತುಗಳನ್ನಾಡಿದರು. ಸಾಹಿತಿಗಳಾದ ಮೋಹನ ಹಬ್ಬು, ಡಾ. ರಾಮಕೃಷ್ಣ ಗುಂದಿ, ನಾಗೇಂದ್ರ ನಾಯಕ ತೊರ್ಕೆ, ಮಹಾಂತೇಶ ರೇವಡಿ, ನಿವೃತ್ತ ಪ್ರಾಚಾರ್ಯ ಆರ್.ವಿ.ಕೇಣಿ, ಅಭಿಮಾನಿಗಳಾದ ರಫೀಕ್ ಶೇಕ್, ಎಂ.ಎಂ.ಕರ್ಕಿಕರ, ಹರಿ. ಮುಂತಾದವರು ಉಪಸ್ಥಿತರಿದ್ದರು. ಕ. ಸಾ. ಪ ಕಾರ್ಯದರ್ಶಿ ಜಗದೀಶ ನಾಯಕ ವಂದಿಸಿದರು.
ಕಾರವಾರ ಟೈಮ್ಸ್ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/HyQE3CIKWEICSXQCoirwQE
