ವರದಿ : ವಿಕ್ರಂ ಗೌಡ.
ಗೋಕರ್ಣ : ಇಲ್ಲಿನ ಮುಖ್ಯ ಕಡಲ ತೀರದಲ್ಲಿರುವ ಬಾಬ್ಸ್ ಬೀಚ್ ಹೌಸ್ ರೇಸಾರ್ಟನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಅಪಾರ ಪ್ರಮಾಣದ ಸಾಮಾನುಗಳು ಸುಟ್ಟು ಕರಕಲಾಗಿದೆ.

ಸೋಮವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಗಣಪು ಗೌಡ ಮಾಲಕತ್ವದ ರೆಸಾರ್ಟ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಕ್ಷಣಾರ್ಧದಲ್ಲಿ ಪ್ರೀಜ್ ಸಹಿತ ಉಪಕರಣಗಳು, ಸಾಮಗ್ರಿಗಳು ಸುಟ್ಟು ಕರಕಲಾಗಿದೆ. ಸುಮಾರು 2 ಲಕ್ಷ ರೂ ಮೌಲ್ಯದ ಪರಿಕರಗಳು ಬೆಂಕಿಗೆ ಆಹುತಿಯಾಗಿದೆ ಎಂದು ಅಂದಾಜಿಸಲಾಗಿದೆ.
ಸೇರಿದ ನಾಗರಿಕರು ಬೆಂಕಿ ನಿಂದಿಸುವಲ್ಲಿ ಶ್ರಮಪಟ್ಟಿದ್ದಾರೆ. ಸ್ಥಳಕ್ಕೆ ಗೋಕರ್ಣ ಪೊಲೀಸರು ಹಾಗೂ ಕರಾವಳಿ ಕಾವಲು ಪಡೆಯ ಪೊಲೀಸ್ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಗೋಕರ್ಣದ ನ್ಯೂಸ್ update ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/KwQAr2EktMuFhsy21c1G