ರಾಘು ಕಾಕರಮಠ.
ಗೋಕರ್ಣ : ಅಕ್ರಮವಾಗಿ ಅಂದರ-ಬಾಹರ ಆಟದಲ್ಲಿ ತೊಡಗಿದ್ದ ವೇಳೆ ಗೋಕರ್ಣ ಪೊಲೀಸರು ದಾಳಿ ನಡೆಸಿ ಆರು ಆರೋಪಿಗಳನ್ನು ಬಂಧಿಸಿರುವ ಘಟನೆ ಹಿರೇಗುತ್ತಿಯಲ್ಲಿ ನಡೆದಿದೆ.
ಹಿರೇಗುತ್ತಿಯ ದೇವರಬೊಳೆಯ ಮಾದೇವ ಬಂಗಾರಿ ಪಡ್ತಿ, ಹಿರೇಗುತ್ತಿಯ ಕೊಂಕಣೇರಕೇರಿಯ ಮಂಜುನಾಥ ಕೃಷ್ಣ ಪಡ್ತಿ, ಕೋಳಿ ಮಂಜಗುಣಿಯ ಕೇಶವ ನೂನಾ ಪಡ್ತಿ, ಹಿರೇಗುತ್ತಿಯ ಕೊಂಕಣೇರಕೇರಿಯ ಅನಂತ ಖೇಮು ಪಡ್ತಿ, ಹಿರೇಗುತ್ತಿಯ ನವಗ್ರಾಮದ ಹೊಸಬು ಗೋವಿಂದ ಹರಿಕಾಂತ, ದೇವರಬೊಳೆಯ ಕಲ್ಮಟನ ನಿವಾಸಿ ರಮಾಕಾಂತ ಬಾಳಾ ಪಡ್ತಿ ಬಂಧಿತ ಆರೋಪಿಗಳು.
ಹಿರೇಗುತ್ತಿಯ ಸೋನಾರಕೇರಿಯ ರಸ್ತೆಗೆ ಸಾಗುವ ಪಕ್ಕದಲ್ಲಿರುವ ಖುಲ್ಲಾ ಸ್ಥಳದಲ್ಲಿ ಅಂದರ್ ಬಾಹರ್ ಆಟದಲ್ಲಿ ತೊಡಗಿದಾಗ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ 3640 ರೂ ನಗದು, ಇಸ್ಪೀಟ್ ಎಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪಿಎಸೈ ಸುಧಾ ಅಘನಾಶಿನಿ ನೇತ್ರತ್ವದಲ್ಲಿ ನಡೆದ ದಾಳಿಯಲ್ಲಿ ಸಿಬ್ಬಂದಿಗಳಾದ ರಾಜೇಶ ನಾಯ್ಕ, ಅನುರಾಜ್ ನಾಯ್ಕ, ತನೇಶ ಗೌಡಿ, ಮಹಮ್ಮದ ಅಲಿ ಕಾರ್ಯಾಚರಣೆಯಲ್ಲಿದ್ದರು. ಎಎಸೈ ಲಲಿತಾ ರಜಪೂತ ಪ್ರಕರಣ ದಾಖಲಿಸಿಕೊಂಡಿದ್ದಾರೆ.