ಅಂಕೋಲಾ : ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದ ಬಳಿ ಗುಡ್ಡ ಕುಸಿದು ಹೆದ್ದಾರಿ ಸಂಚಾರಕ್ಕೆ ತೊಡಕಾಗಿದೆ.
ಸೋಮವಾರ ತಡರಾತ್ರಿಯಿಂದ ಸುರಿಯುತ್ತಿರುವ ತೀವ್ರ ಮಳೆಯಿಂದಾಗಿ ಗುಡ್ಡ ಕುಸಿಯುತ್ತಿದ್ದು ಹೆದ್ದಾರಿ ಪ್ರಯಾಣಿಕರಲ್ಲಿ ಆತಂಕವನ್ನುಂಟು ಮಾಡಿದೆ
ಅಂಕೋಲಾದಿಂದ ಕುಮಟಾಕ್ಕೆ ಸಾಗುವ ಚತುಷ್ಪಥ ಹೆದ್ದಾರಿಯ ಮಾದನಗೇರಿಯ ಘಟ್ಟದ ಎಡ ಬದಿಯ ರಸ್ತೆಯಲ್ಲಿ ಗುಡ್ಡ ಕುಸಿದ ಪರಿಣಾಮ ರಸ್ತೆಯಲ್ಲಿ ಮಣ್ಣು ಶೇಖರಣೆಯಾಗಿದೆ.

ಹೆದ್ದಾರಿಯ ಬಲ ಭಾಗದಿಂದ ವಾಹನಕ್ಕೆ ಸಾಗಲು ವ್ಯವಸ್ಥೆ ಕಲ್ಪಿಸಲಾಗಿದೆ. ಗುಡ್ಡ ಇನ್ನು ಕುಸಿಯುವ ಹಂತದಲ್ಲಿದೆ ಎಂದು ಪ್ರತ್ಯಕ್ಷದರ್ಶಿ ಸಗಡಗೇರಿ ಗ್ರಾಪಂ ಸದಸ್ಯ ಶ್ರವಣ ಮುಕುಂದ ನಾಯ್ಕ ತಿಳಿಸಿದ್ದಾರೆ.
ಕಾರವಾರ ಟೈಮ್ಸ್ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/HyQE3CIKWEICSXQCoirwQE