ಅಂಕೋಲಾ : ತಾಲೂಕಿನ ಗಂಗಾವಳಿ ನದಿಯ ಮದ್ಯೆ ಪ್ರಯಾಣಿಕರ ಬೋಟ ಕೆಟ್ಟು ನಿಂತ ಪರಿಣಾಮ ಬೋಟನಲ್ಲಿದ್ದ ಐವರು ಅಪಾಯದಲ್ಲಿ ಸಿಲುಕಿರುವ ಘಟನೆ ಡೊಂಗ್ರಿ ಗುಳ್ಳಾಪುರ ಮದ್ಯೆ ನಡೆದಿದೆ.
ಐವರು ಪ್ರಯಾಣಿಕರು ಗುಳ್ಳಾಪುರದಿಂದ ಬೋಟ ಮೂಲಕ ಡೊಂಗ್ರಿ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಗಂಗಾವಳಿ ನೀರಿನ ಸೇಳೆತಕ್ಕೆ ಬೋಟ್ ಇಂಜಿನ್ ಸ್ಥಗಿತಗೊಂಡಿದೆ. ಇದರಿಂದಾಗಿ ಗಂಗಾವಳಿ ನದಿ ಮದ್ಯೆ ಬೋಟ್ ನಲ್ಲಿದ್ದವರು ಅಪಾಯಕ್ಕೆ ಸಿಲುಕಿದ್ದರು. ಇದರಲ್ಲಿ ನಾಲ್ವರಿಗೆ ಲೈಪ್ ಜಾಕೇಟ ಬಳಸಿದ್ದು ಓರ್ವನಿಗೆ ಲೈಪ್ ಜಾಕೇಟ್ ಇರಲಿಲ್ಲ.

ಒಂದು ಘಂಟೆಗಳ ಕಾಲ ಬೋಟಿನಲ್ಲೇ ಐವರು ಅತಂತ್ರ ಸ್ಥಿತಿಯಲ್ಲಿದ್ದರು.
ಕಳೆದ ಕಲ ದಿನಗಳಿಂದ ಬೋಟ ಹಾಳಾಗಿದ್ದು ಮಂಗಳವಾರವಷ್ಟೆ ಸರಿಪಡಿಸಲಾಗಿದ್ದು ಬೋಟ ಗಂಗಾವಳಿಯಲ್ಲಿ ಸಂಚರಿಸುವಾಗ ಮತ್ತೆ ಬೋಟನ ಮಶೀನನಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ.
ಬೋಟ್ ಮುಂದೆಯು ಹೋಗದೆ ಹಿಂದೆಯು ಬಾರದೆ ನದಿಯ ಮದ್ಯದಲ್ಲಿರುವ ತಾತ್ಕಾಲಿಕ ಸೇತುವೆಗೆ ಬಡಿದು ನಿಂತಿದ್ದು ಅದರಲ್ಲಿದ್ದ ಜನರು ರಕ್ಷಣೆ ಮಾಡುವಂತೆ ಗೋರೆಯುತ್ತಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಅಗ್ನಿ ಶಾಮಕದಳ ಆಗಮಿಸಿ ಹರಸಾಹಸಪಟ್ಟು ಬೋಟ್‌ನಲ್ಲಿದ್ದ ಐವರನ್ನು ರಕ್ಷಣೆ ಮಾಡಿರುತ್ತಾರೆ.
ಡೋಂಗ್ರಿ ಪಂಚಾಯತಿ ವ್ಯಾಪ್ತಿಯ ಗುಳ್ಳಾಪುರದಿಂದ ಡೋಂಗ್ರಿಗೆ ಸಂಪರ್ಕಿಸುವ ತೂಗುಸೇತುವೆ ಕಳೆದ ಎರಡು ವರ್ಷಗಳ ಹಿಂದೆ ಗಂಗಾವಳಿಯ ನೆರೆಗೆ ಕೊಚ್ಚಿ ಹೋಗಿತ್ತು. ಇದರಿಂದಾಗಿ ಸದ್ಯ ಇಲ್ಲಿ ನೂತನ ಸೇತುವೆ ನಿರ್ಮಾಣ ಕಾರ್ಯ ಕೂಡ ಪ್ರಗತಿಯಲ್ಲಿತ್ತು. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಈ ತಾತ್ಕಾಲಿಕ ಸೇತುವೆಯ ಮೇಲೂ ನೀರು ಹರಿದು ಗುಳ್ಳಾಪುರದಿಂದ ಡೋಂಗ್ರಿಗೆ ಸಂಪರ್ಕ ಕಡಿತಗೊಂಡಿದ್ದು, ಬೋಟ್ ಕೂಡ ಹಾಳಾಗಿ ನೀರಿನಲ್ಲಿ ಮುಳುಗಿದ ಸೇತುವೆಗೆ ಸಿಲುಕಿಕೊಂಡಿತ್ತು.
ಕಾರವಾರ ಟೈಮ್ಸ್ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/HyQE3CIKWEICSXQCoirwQE
