ಮನೆಯ ಮುಂದೆ ನಿಲ್ಲಿಸಿಟ್ಟಿದ್ದ ಬೈಕ್ ಕದ್ದ ಆರೋಪಿಯನ್ನು ಅಂಕೋಲಾ ಪೊಲೀಸರು ಬಂಧಿಸಿರುವ ಘಟನೆ ಸೋಮವಾರ ನಡೆದಿದೆ. ಗಂಗಾವಳಿ, ನಾಡುಮಾಸ್ಕೇರಿಯ ದರ್ಶನ್ ಸಾರಂಗ್ ಬಂಧಿತ ಆರೋಪಿಯಾಗಿದ್ದು ಇನ್ನೊರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಘಟನೆಯ ವಿವರ ;
2 ಜುಲೈ 2022 ರ ತಡರಾತ್ರಿ ತಾಲೂಕಿನ ಕೆಳಗಿನ ಮಂಜುಗುಣಿಯ ರಾಜು ಗಣಪತಿ ತಾಂಡೇಲ್ ಅವರ ಮನೆಯ ಆವರಣದಲ್ಲಿ ನಿಲ್ಲಿಸಿಟ್ಟಿದ್ದ ಭೈಕ್ ಕಳ್ಳತನವಾಗಿತ್ತು. ಆರೋಪಿ ದರ್ಶನ್ ಸಾರಂಗ್ ತನ್ನ ಸ್ನೇಹಿತನೊಂದಿಗೆ ಸೇರಿ ಬೈಕ್‌ಕಳ್ಳತನ ಮಾಡಿ, ಬೈಕನ್ನು ಗಂಗಾವಳಿ ನದಿಗೆ ಎಸೆದು ಬಂದಿದ್ದ. ಈ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾಗ ಕಳ್ಳತನದ ಹೂರಣ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಬಳಸಿದ ಇನ್ನೊಂದು ಬೈಕ್ ಹಾಗೂ ಆರೋಪಿ ದರ್ಶನ್ ಸಾರಂಗ್‌ನನ್ನು ಪೊಲೀಸರು ಬಂಧಿಸಿದ್ದು, ಇನ್ನೊಬ್ಬ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಪಿಎಸೈ ಪ್ರವೀಣಕುಮಾರ ಆರ್. ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಪೊಲೀಸ ನಿರೀಕ್ಷಕ ಸಂತೋಷ ಶೆಟ್ಟಿ ಅವರ ನೇತೃತ್ವದಲ್ಲಿ, ಸಿಬ್ಬಂದಿಗಳಾದ ಪರಮೇಶ ಎಸ್, ಶ್ರೀಕಾಂತ ಕೆ., ಮಂಜುನಾಥ ಲಕ್ಮಾಪುರ, ವಿಜಯ್ ಟಿ. ಅವರ ತಂಡ ಕಾರ್ಯಾಚರಣೆಯಲ್ಲಿದ್ದರು.
24 ಘಂಟೆಯೊಳಗಾಗಿ ಪ್ರಕರಣವನ್ನು ಬಯಲಿಗೆ ತಂದ ಅಂಕೋಲಾ ಪೊಲೀಸರನ್ನು, ಪೊಲೀಸ ವರಿಷ್ಠಾಧಿಕಾರಿ ಡಾ. ಸುಮನಾ ಡಿ. ಪೆನ್ನೇಕರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀ ಎಸ್. ಬದ್ರಿನಾಥ ಅಭಿನಂದಿಸಿದ್ದಾರೆ.

ಕಾರವಾರ ಟೈಮ್ಸ್ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/HyQE3CIKWEICSXQCoirwQE