ಶಿರಸಿ :ಭಾರತದ ಮಾನವ ಸಂಪನ್ಮೂಲಕ್ಕೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎನ್ನುವ ಮಾತನ್ನು ನಾವು ಕೇಳುತ್ತಿದ್ದೇವೆ. ಶೈಕ್ಷಣಿಕ ಸಂಪನ್ಮೂಲ ಕ್ರೋಡೀಕರಣ ಭಾರತಕ್ಕೆಇಂದು ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಪರಿಸರ ವಿಜ್ಞಾನಿ ಪ್ರಭಾಕರ್ ಭಟ್ ಹೇಳಿದರು.
ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯುಎಸಿ ವಿಭಾಗ ಆಯೋಜಿಸಿದ್ದ ಪರಿಷ್ಕøತ ನ್ಯಾಕ್ಕಾರ್ಯ ಮತ್ತು ಎಕ್ಯುಎರ್, ಎಸ್ಎಸ್ಆರ್ ವರದಿ ತಯಾರಿಕೆ ಮತ್ತು ಸಮರ್ಪಣೆ ಕುರಿತಕಾರ್ಯಾಗಾರ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿ ಇಂದು ಪರಿಷ್ಕೃತ ನ್ಯಾಕ್ ಮಾರ್ಗಸೂಚಿ ಕುರಿತು ಕೂಲಂಕುಷವಾಗಿ ಅಧ್ಯಯನ ಮಾಡುವ ಅಗತ್ಯತೆ ಇದ್ದು ಶಿಕ್ಷಣ ಸಂಸ್ಥೆಯ ಎಲ್ಲಾ ಪ್ರಾಧ್ಯಾಪಕರು ತಂಡವಾಗಿ ಕೆಲಸ ನಿರ್ವಹಿಸಿ ವರದಿ ತಯಾರಿಸುವ ಕಾರ್ಯ ಮಾಡಬೇಕು ಎಂದರು.

ಡಾ ಕೇಶವ ಕೊರ್ಸೆ ಮಾತನಾಡಿ, ಎಲ್ಲಾ ಕಾಲೇಜಿನಲ್ಲಿ ಕಾರ್ಯಕ್ರಮ, ಆಂತರಿಕ ಚಟುವಟಿಕೆ ನಡೆಯುತ್ತವೆ. ಇವುಗಳನ್ನು ನ್ಯಾಕ್ ನಿರ್ದೇಶನದಂತೆ ನಡೆಸಬೇಕು. ಶಿಕ್ಷಣ ವಿದ್ಯಾರ್ಥಿಕೇಂದ್ರಿತವಾಗಿ ಇರಬೇಕು.ನಮ್ಮಕಾರ್ಯ ಚಟುವಟಿಕೆಗಳು ಸಮಾಜಕ್ಕೆ ಎಷ್ಟು ಪ್ರಭಾವಿಸುತ್ತದೆ ಎಂಬುದು ಮುಖ್ಯ ಎಂದರು.
ಕಾಲೇಜು ಉಪಸಮಿತಿ ಸದಸ್ಯ ಜಿ ಎಸ್ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಜೆಎಸ್ಎಸ್ ಕಾಲೇಜಿನ ಪ್ರಾಧ್ಯಾಪಕ ಡಾ ಜಗದೀಶ್ ಭರ್ಗಿ, ಡಾ ವೆಂಕಟೇಶ ಮುತಾಲಿಕ್ ಮಾಹಿತಿ ನೀಡಿದರು.
ಎಂಇಎಸ್ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯಡಾ ಎಸ್.ಕೆ.ಹೆಗಡೆ, ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯಡಾ.ಅಶೋಕ ಭಟ್ಕಳ ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ಕಾಲೇಜಿನ ಪ್ರಾಧ್ಯಾಪಕರು ಕಾರ್ಯಾಗಾರದಲ್ಲಿ ಪಾಲ್ಗೊಂಡರು.ಕಾಲೇಜಿನ ಪ್ರಾಚಾರ್ಯ ಡಾ.ಟಿ.ಎಸ್.ಹಳೆಮನೆ ಸ್ವಾಗತಿಸಿದರು. ಡಾ.ಎಸ್.ಎಸ್.ಭಟ್ ಪ್ರಾಸ್ತಾವಿಕ ಮಾತನಾಡಿದರು .ಕಮಲಾಕರ್ ಹೆಗಡೆ ವಂದಿಸಿದರು.ಡಾಗಣೇಶ್ ಹೆಗಡೆ ನಿರೂಪಿಸಿದರು
.
ಶಿರಸಿ ನ್ಯೂಸ್ update ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ
https://chat.whatsapp.com/GhPLlofxjaR1GYrAz8Rpi7