ಮೇ 7 ಕಾರವಾರ(ಉತ್ತರ ಕನ್ನಡ): ಮುಂಡಗೋಡ ತಾಲೂಕಿನ ಬಾಚಣಕಿ ಗ್ರಾಮ ಪಂಚಾಯತ್ ನ ನ್ಯಾಸರ್ಗಿ ಹಾಗೂ ಕುಂದರ್ಗಿ ಗ್ರಾಮದ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರೊಂದಿಗೆ ಸೋಮವಾರ ದುಡಿಯೋಣ ಬಾ ಅಭಿಯಾನ ನಡೆಸಲಾಯಿತು. ‌

ತಾಲೂಕು ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ ಮಾತನಾಡಿ ಕೂಲಿಕಾರರಿಗೆ ನರೇಗಾ ಯೋಜನೆಯಡಿ ನೀಡಲಾಗುವ ಅನುಕೂಲತೆಗಳ ಬಗ್ಗೆ ಮಾಹಿತಿ ನೀಡಿದರು. ಸಮಾನ ಕೆಲಸ ಸಮಾನ ಕೂಲಿ, ಫಲಾನುಭವಿಗಳ ನೇರ ಖಾತೆಗೆ ಹಣ ಪಾವತಿ, ಕೆಲಸದ ಸ್ಥಳದಲ್ಲಿ ನೀರು ಮತ್ತು ನೆರಳು, ಉದ್ಯೋಗ ಖಾತ್ರಿ ಕೆಲಸದ ವೇಳೆಯಲ್ಲಿ ಮರಣಕ್ಕೀಡಾದರೆ ಇಲ್ಲವೇ ಶಾಶ್ವತವಾಗಿ ಅಂಗ ವೈಖಲ್ಯತೆ ಕಂಡುಬಂದಲ್ಲಿ 2ಲಕ್ಷ ರೂಗಳ ಪರಿಹಾರ ಧನದ ಕುರಿತು ಮಾಹಿತಿ ನೀಡಿದರು.

ಇನ್ನೂ ಅಸಂಘಟಿತ ಕೂಲಿಕಾರರಿಗೆ ನೀಡಲಾಗುವ ಇ-ಶ್ರಮ್ ಕಾರ್ಡ್ ಪಡೆಯುವಂತೆ ತಿಳಿಸಿದರು. ಸಮುದಾಯದ ಕಾಮಗಾರಿಗಳ ಜೊತೆಗೆ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಂಡಾಗ ಗ್ರಾಮದ ಅಭಿವೃದ್ಧಿಗೆ ಸಾಧ್ಯ ಎಂದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತಲಾ 3ಲಕ್ಷ ವೆಚ್ಚದಲ್ಲಿ ನ್ಯಾಸರ್ಗಿಯಲ್ಲಿ ಟ್ರೇಂಚ್ ಕಾಮಗಾರಿ, ಕುಂದರ್ಗಿಯಲ್ಲಿ ಅರಣ್ಯದಲ್ಲಿ ಹೊಸ ಕೆರೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಕಾಯಕ ಮಿತ್ರರು ಹಾಜರಿದ್ದರು ಎಂದು ಐಇಸಿ ಸಂಯೋಜಕರು
ತಾಲೂಕು ಪಂಚಾಯತ್ ಪ್ರಕಟಣೆಯಲ್ಲಿ ತಿಳಸಿದ್ದಾರೆ.