ಕಾರವಾರಟೈಮ್ಸ್ :ಎಕ್ಸ್‍ಕ್ಲೂಸಿವ್
ರಾಘುಕಾಕರಮಠ.
ಕಾರವಾರ : ಇದು ವಿಧವೆಯೊರ್ವಳ ಕರುಣಾಜನಕ ವ್ಯಥೆಯ ಕಥೆ.ಆಶಾ ಕಾರ್ಯಕರ್ತೆಯೊಬ್ಬಳು ಸೇವಾವಧಿಯಲ್ಲಿಯೆ ಅತ್ಯಾಚಾರದ ಯತ್ನದ ಕೃತ್ಯದಿಂದ ಮಾನಸಿಕವಾಗಿ ಮನನೊಂದು ಹುದ್ದೆಯನ್ನೆ ತೊರೆದ ಹೃದಯ ವಿದ್ರಾವಕ ಘಟನೆ ಅಂಕೋಲಾದ ಗ್ರಾಮವೊಂದರಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಬಿಣಗಾ ಘಟ್ಟದಲ್ಲಿ ಅತ್ಯಾಚಾರಕ್ಕೆ ಯತ್ನ :
ಅಂಕೋಲಾದ ಗ್ರಾಮವೊಂದರ ಆಶಾ ಕಾರ್ಯಕರ್ತೆಯೊಬ್ಬಳು ತನ್ನಏರಿಯಾದ ಮಹಿಳೆಯೊಬ್ಬಳನ್ನು ಅಂಕೋಲಾದ ಸರಕಾರಿ ಆಸ್ಪತ್ರೆಗೆ ಹೆರಿಗೆಗೆಂದು ಕರೆ ತಂದಿದ್ದಳು. ಚಿಕಿತ್ಸೆ ನೀಡಿದ ವೈಧ್ಯರು, ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು. ಹೀಗಾಗಿ ಗರ್ಭಿಣಿ ಮಹಿಳೆಯೊಂದಿಗೆ ತೆರಳಿದ ಆಶಾ ಕಾರ್ಯಕರ್ತೆಯು ಜಿಲ್ಲಾಸ್ಪತ್ರೆಯಲ್ಲಿ ಅವಳನ್ನು ದಾಖಲು ಮಾಡಿದ್ದಳು.
ಆ ವೇಳೆಗಾಗಲೇ ಸಂಜೆ ಸುಮಾರು 6-30ಗಂಟೆಯಾಗಿದ್ದು ಆಶಾ ಕಾರ್ಯಕರ್ತೆ ಅಂಕೋಲಾದ ತನ್ನ ಗ್ರಾಮಕ್ಕೆ ಮರಳಲು, ಕಾರವಾರದ ಜಿಲ್ಲಾಸ್ಪತ್ರೆಯಿಂದ ನಡೆದುಕೊಂಡೆ ಕಾರವಾರದ ಬಸ್ ನಿಲ್ದಾಣದತ್ತ ಸಾಗುತ್ತಿದ್ದಳು.ಆಗ ಎರಡು ಬೈಕ್‍ನಲ್ಲಿ ಬಂದಯುವಕರು ತನ್ನೂರಿನ ಪರಿಚಯದ ಆಶಾ ಕಾರ್ಯಕತೆಯೊಂದಿಗೆ ಮಾತನಾಡಿ, ಎಲ್ಲಿಗೆ ಹೋಗುತ್ತಿರುವೆ ಎಂದು ವಿಚಾರಿಸಿದ್ದಾರೆ.ಆಗ ಅಂಕೋಲಾದ ಮನೆಗೆ ಸಾಗಬೇಕಿತ್ತು ಎಂದು ಹೇಳಿದ ಆಶಾ ಕಾರ್ಯಕರ್ತೆಯನ್ನು ಬೈಕ್‍ನಲ್ಲಿ ಬರುವಂತೆ ಹೇಳಿದ್ದಾರೆ.
ಬೇಡಾ ನಾನು ಬಸ್ಸಿನಲ್ಲಿಯೆ ತೆರಳುತ್ತೇನೆ ಎಂದ ಆಶಾ ಕಾರ್ಯಕರ್ತೆಗೆ ಇವತ್ತು ಸಾರಿಗೆ ಬಸ್ ಮುಷ್ಕರವಾಗಿದ್ದು, ಬಸ್ ಸಂಚರಿಸುತ್ತಿಲ್ಲ ಎಂದು ಮರುತ್ತರ ನೀಡಿದ್ದರು. ಹೀಗಾಗಿ ರಾತ್ರಿಯಾಗಿದ್ದರಿಂದ ಅನ್ಯದಾರಿ ಕಾಣದ ಆಶಾ ಕಾರ್ಯಕರ್ತೆ ಬೈಕ್‍ನಲ್ಲಿಅಂಕೋಲಾದತ್ತ ಪ್ರಯಾಣ ಬೆಳೆಸುವಂತಾಗಿತ್ತು.ಆದರೆ ಬರಬರುತ್ತಾ ಬಿಣಗಾಘಟ್ಟದಲ್ಲಿ ಏಕಾಏಕಿ ಅನ್ಯದಾರಿಗೆ ಬೈಕ್‍ತಿರುವಿದ ಯುವಕರು ಆಶಾ ಕಾರ್ಯಕರ್ತೆಯನ್ನುಒಮ್ಮೆ ಸಹಕರಿಸು.ವಿಧವೆಯಾಗಿರುವ ನಿನಗೆ ನಮ್ಮಿಬ್ಬರಲ್ಲಿ ಒರ್ವರುಬಾಳು ನೀಡುತ್ತೇವೆ ಎಂದು ಪುಸಲಾಯಿಸಿ ಮೈಕೈ ಮುಟ್ಟಲು ಮುಂದಾಗಿದ್ದಾರೆ ಆದರೆ ಅದಕ್ಕೊಪ್ಪದ ಆಶಾ ಕಾರ್ಯಕರ್ತೆ ತಾನು ಅಂತವಳಲ್ಲಾ ನನ್ನನ್ನು ಬಿಟ್ಟು ಬಿಡಿ ಎಂದು ಅಂಗಲಾಚಿಕೊಂಡಿದ್ದಾಳೆ.ಆದರೂ ಸಮ್ಮನಿರದ ಈ ಕಾಮಾಂಧರು ಅವಳ ಮೇಲೆ ಅತ್ಯಚಾರಕ್ಕೆ ಪ್ರಯತ್ನ ಪಟ್ಟಿದ್ದಾರೆ.ಈಕೆ ಜೋರಾಗಿ ಕಿರುಚಿಕೊಳ್ಳುತ್ತಿದ್ದಂತೆ ಹೆದರಿದ ಈ ಪಡ್ಡೆಯುವಕರು, ಅತ್ಯಾಚಾರದ ಯತ್ನವನ್ನು ಕೈ ಬಿಟ್ಟಿದ್ದಾರೆ. ಅಲ್ಲದೇ ಬೈಕ್‍ನಲ್ಲಿಆಕೆಯನ್ನು ಮನೆಯ ಸಮೀಪದಲ್ಲಿ ಬಿಟ್ಟು ತೆರಳುವ ವೇಳೆ, ಈ ಯುವಕರು ನಡೆದ ಈ ಘಟನೆಯಾರಲ್ಲಾದರೂ ಬಾಯಿ ಬಿಟ್ಟರೆ ನಿನ್ನನ್ನು ಕೊಲೆ ಮಾಡುತ್ತೇವೆ. ಎಂದು ಬೆದರಿಕೆಯೊಡ್ಡಿ ಸಾಗಿದ್ದಾರೆ.
ನಿರ್ಜನ ಪ್ರದೇಶದಲ್ಲಿ ಮತ್ತೆ ಸ್ಕೇಚ್ :
ಅಷ್ಟಕ್ಕೂ ಬಿಡದ ಈ ಕಾಮಾಂಧರು ಆಶಾ ಕಾರ್ಯಕರ್ತೆ ತನ್ನ ಕರ್ತವ್ಯಕ್ಕೆ ಕುಗ್ರಾಮಕ್ಕೆ ಸಾಗುವ ನಿರ್ಜನ ಪ್ರದೇಶದಲ್ಲಿ ನಿಂತು, ಹಿಂಬಾಲಿಸುತ್ತಿರುವದನ್ನು ಕಂಡು ಬೆದರಿದ್ದಾಳೆ. ಒಂದಲ್ಲಾಒಂದು ದಿನ ಇವರು ನನ್ನನ್ನು ಸುಮ್ಮನೆ ಬಿಡಲಾರರು ಎಂದು ಬೆದರಿದ ಈಕೆ ತನ್ನ ಆಶಾ ಕಾರ್ಯಕರ್ತೆಯ ಹುದ್ದೆಗೆ ರಾಜೀನಾಮೆ ನೀಡಿದ ವಿಲಕ್ಷಣ ವಿಧ್ಯಮಾನ ನಡೆದಿದೆ.
ಅತಂತ್ರಳಾದ ಆಶಾಕಾರ್ಯಕರ್ತೆ ;
ಚಿಕ್ಕ ವಯಸ್ಸಿನಲ್ಲಿಯೆ ಭವ್ಯವಾದ ಕನಸನ್ನು ಹೊತ್ತು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ಆದರೆ ವಿಧಿ ಆಕೆಯ ಗಂಡನನ್ನುತನ್ನತೆಕ್ಕೆಗೆ ಸೆಳೆದುಕೊಂಡು ವಿಧವೆಯನ್ನಾಗಿಸಿತ್ತು.ತನ್ನ ಮಕ್ಕಳ ಪೋಷಣೆಗಾಗಿ ಆಶಾ ಕಾರ್ಯಕರ್ತೆ ಹುದ್ದೆಗೆ ಸೇರಿದ ಈಕೆ ತನ್ನ ಚಿಕ್ಕಚಿಕ್ಕ ಮಕ್ಕಳನ್ನು ಕಷ್ಟದಿಂದಲೆ, ಸ್ವಾವಲಂಬಿ ಜೀವನದ ಜೊತೆಗೆ ಬೆಳೆಸುತ್ತಿದ್ದಳು. ಆದರೆ ಕಾರವಾರದ ಬಿಣಗಾ ಘಟ್ಟದಲ್ಲಿ ನಡೆದ ಈ ಅತ್ಯಾಚಾರ ಪ್ರಯತ್ನದ ಕಹಿ ಘಟನೆಯಿಂದ ಮನನೊಂದ ಈಕೆ ಆಶಾ ಕಾರ್ಯಕರ್ತೆಯ ಹುದ್ದೆಯನ್ನು ತ್ಯಜಿಸುವಂತಾಗಿದೆ. ನಡೆದಿರುವ ಈ ದುಷ್ಕತ್ಯದಿಂದ ಆಶಾ ಕಾರ್ಯಕರ್ತೆ ಅತಂತ್ರ ಬಾಳು ಸಾಗಿಸುವಂತಾಗಿದೆ.
ಅನೇಕ ಸವಾಲುಗಳನ್ನು ಎದುರಿಸುವ ಆಶಾ ಕಾರ್ಯಕರ್ತೆಯರು ಸರಕಾರ ನೀಡುವ ಅತ್ಯಲ್ಪ ಸಂಬಳಕ್ಕೆ ದುಡಿಯುತ್ತಿದ್ದಾರೆ.ಅನೇಕ ಕುಗ್ರಾಮಗಳಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಶ್ರೇಷ್ಠ ಸೇವೆ ನೀಡುತ್ತಿದ್ದಾರೆ. ಆಶಾ ಕಾರ್ಯಕರ್ತೆಯರೇ ಹುಷಾರಾಗಿರಿ. ಇದು ಕಾರವಾರ ಟೈಮ್ಸ್ ನ ನಮ್ರ ಕಳಕಳಿ.
ನನಗಾದ ಸ್ಥಿತಿ ಇನ್ನಾವ ಆಶಾಕಾರ್ಯಕತೆಗೂ ಬಾರದಿರಲಿ.ನನ್ನ ಮೇಲೆ ನಡೆದ ಅತ್ಯಾಚಾರ ಪ್ರಯತ್ನದ ಪ್ರಕರಣವನ್ನು ನಾನು ಮಾನಕ್ಕೆ ಹಾಗೂ ಬೆದರಿಕೆಗೆ ಅಂಜಿ ಮುಚ್ಚಿಟ್ಟಿದ್ದೇನೆ. ನಾನೀಗ ಅತಂತ್ರಳಾಗಿ ಮನೆಯಲ್ಲೆ ಕಾಲ ಕಳೆಯುವಂತಾಗಿದೆ.
ನೊಂದ ಸಂತ್ರಸ್ಥೆ.
ಕಾರವಾರ ಟೈಮ್ಸ್ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/HyQE3CIKWEICSXQCoirwQE