ಅಂಕೋಲಾ ; ಪತ್ರಿಕಾ ಮಾಧ್ಯಮದ ವರದಿಗಳು ಸಮಾಜದ ವಾಸ್ತವ ಸಂಗತಿಯನ್ನು ಜನರ ಮುಂದಿಡುತ್ತವೆ. ವಸ್ತುನಿಷ್ಠ ವರದಿಗಳಿಂದ ಅಭಿವೃದ್ಧಿಯ ಚಿಂತನೆಗಳು ಬದಲಾಗುತ್ತವೆ. ಪತ್ರಕರ್ತರು ತಮ್ಮ ವೈಯಕ್ತಿಕ ತೊಂದರೆಯನ್ನು ಬದಿಗಿರಿಸಿ ಸಮಾಜದ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಮಹತ್ತರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಹಸೀಲ್ದಾರ ಉದಯ ಕುಂಬಾರ ಹೇಳಿದರು.
ಅವರು ಪೂಜಗೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ,”ಪತ್ರಿಕಾ ದಿನಾಚರಣೆ ಹಾಗೂ “ಬಾರ್ಡೋಲಿ” ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.


ಬಾರ್ಡೋಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗೋಕರ್ಣದ ಪತ್ರಕರ್ತ ಗಜಾನನ ನಾಯಕ ಮಾತನಾಡಿ ಅಂಕೋಲಾ ಗಾಂಧಿ ವಿಚಾರಗಳಿಂದ ಪ್ರಭಾವಿತರಾದ, ಗಾಂಧೀಜಿಯ ಆಶಯಗಳನ್ನು ಒಪ್ಪಿಕೊಂಡ ಶ್ರೇಷ್ಠ ನೆಲ. ಇತಿಹಾಸ ಪ್ರಸಿದ್ಧ ಸ್ವಾತಂತ್ರ‍್ಯ ಸಂಗ್ರಾಮದ ಮಣ್ಣಿನ ನೆಲದಲ್ಲಿ ಪ್ರಶಸ್ತಿಗೆ ಭಾಜನರಾಗಿರುವ ನನ್ನ ಗೌರವವನ್ನು ಹೆಚ್ಚಿಸಿದೆ. ಸ್ಥಳೀಯ ಮತ್ತು ಕ್ಲಿಷ್ಟ ವಿಚಾರಗಳ ಕುರಿತು ನನ್ನ ವರದಿಯಲ್ಲಿ ಹೆಚ್ಚಿನ ಆದ್ಯತೆ ನೀಡಿದ್ದೇನೆ. ನೈಜ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನ ನಡೆಸಿದ್ದು ಇಲ್ಲಿಯವರೆಗೂ ಕೈಹಿಡಿದಿದೆ ಎಂದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ ಅಧ್ಯಕ್ಷತೆವಹಿಸಿದ್ದರು. ಹಿರಿಯ ಪತ್ರಕರ್ತ ವಿಠ್ಠಲದಾಸ ಕಾಮತ, ಸರಕಾರಿ ಪ್ರಥಮ ದರ್ಜೆ ಕಾಲಜೀನ ಪ್ರಾಚಾರ್ಯ ಎನ್.ಎಮ್. ಖಾನ್, ಸಾಹಿತಿ ಮಹಾಂತೇಶ ರೇವಡಿ, ಸಾಮಾಜಿಕ ಕಾರ್ಯಕರ್ತ ವಿನಾಯಕ ಪಡ್ತಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ಡಾ. ಪಾಟೀಲ ಪುಟ್ಟಪ್ಪ ಸಾಧನಾ ಪ್ರಶಸ್ತಿಗೆ ಭಾಜನರಾದ ತಾಲೂಕಿನ ಹಿರಿಯ ಪತ್ರಕರ್ತ ವಿಠ್ಠಲದಾಸ್ ಕಾಮತ್ ಅವರನ್ನು ಸನ್ಮಾನಿಸಲಾಯಿತು.ಪತ್ರಕರ್ತರ ಸಂಘದ ಕಾರ್ಯದರ್ಶಿ ಸುಭಾಸ್ ಕಾರೆಬೈಲ ಸ್ವಾಗತಿಸಿದರು. ವಿದ್ಯಾಧರ ಮೊರಬ ಸನ್ಮಾನ ಪತ್ರ ವಾಚಿಸಿದರು. ಕೆ ರಮೇಶ ವಂದಿಸಿದರು. ಅರುಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತರಾದ ವಾಸುದೇವ ಗುನಗಾ, ನಾಗರಾಜ ಮಂಜುಗುಣಿ, ಅಕ್ಷಯ ನಾಯ್ಕ, ಅಕ್ಷಯ ನಾಯ್ಕ, ನಾಗರಾಜ ಜಾಂಬಳೆಕರ, ಅವಿನಾಶ್ ಆಗೇರ. ಅವರ್ಸಾ, ಅಮೃತ ನಾಯ್ಕ. ಹಟ್ಟಿಕೇರಿ ಇದ್ದರು

ಕಾರವಾರ ಟೈಮ್ಸ್ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/HyQE3CIKWEICSXQCoirwQE