ಅಂಕೋಲಾ :ಜೀವ ಸಂಕುಲದ ಉಳಿವಿಗೆ ಅರಣ್ಯತೀರಾ ಅವಶ್ಯವಿದ್ದು, ಮಾನವ, ಕಾಡು ಪ್ರಾಣಿಗಳ ಹಾಗೂ ಪಕ್ಷಿಗಳ ಅಳಿವು-ಉಳಿವು ಅರಣ್ಯ ಅಸ್ತಿತ್ವದ ಮೇಲೆ ಅವಲಂಭಿತವಾಗಿದೆ ಎಂದು ವಂದಿಗೆ ಗ್ರಾಮ ಪಂಚಾಯತ ಅಧ್ಯಕ್ಷೆ ಪುಷ್ಪಲತಾ ಆರ್. ನಾಯಕ ಹೇಳಿದರು.
ಅವರು ಸಾಮಾಜಿಕ ಅರಣ್ಯ ಇಲಾಖೆ ಅಂಕೋಲಾ ಹಾಗೂ ಬೊಳೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ವೃಕ್ಷಾರೋಪಣ ಕಾರ್ಯ ನೆರವೇರಿಸಿ ಮಾತನಾಡಿದರು.
ಸಾಮಾಜಿಕ ವಲಯ ಅರಣ್ಯಾಧಿಕಾರಿ ಗ್ರೀಷ್ಮಾ ಎಸ್. ಪಟಗಾರ ಮಾತನಾಡಿ, ಸಸ್ಯಗಳು ಚೆನ್ನಾಗಿ ಬೆಳೆಯುವಂತೆ, ಸುರಕ್ಷಿತವಾಗಿ ಉಳಿಯುವಂತೆ ನೋಡಿಕೊಳ್ಳ ಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.ಶಾಲಾ ಮುಖ್ಯಾಧ್ಯಾಪಕ ಜಗದೀಶ ಜಿ. ನಾಯಕ ಹೊಸ್ಕೇರಿ ಮಾತನಾಡಿ, ಜನರಿಗೆ ಅರಣ್ಯಗಳ, ಗಿಡ ಮರಗಳ ಉಪಯೋಗ, ಅವಶ್ಯಕತೆ ಇವುಗಳ ಅರಿವು ಮೂಡಿಸಲುಅರಣ್ಯ ಸಂಪತ್ತನ್ನು ಕ್ರಮಬದ್ಧವಾಗಿ ವರ್ಧಿಸಲು ವನಮಹೋತ್ಸವವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ.ಈ ಆಚರಣೆಯ ಆಶಯದಂತೆ ಮನೆಗೊಂದು ಮರ, ಊರಿಗೊಂದು ವನ ಬೆಳೆಸಿದರೆ ಕಾಡು ಬೆಳೆದು ನಾಡು ಉಳಿದೀತು ಎಂದರು.ಶಾಲಾ ಆವರಣದಲ್ಲಿ ನೂರಾರುಚೆರ್ರಿ, ಹೊಳೆದಾಸವಾಳ, ಮಹಾಘನಿ ಇತರೇ ಗಿಡಗಳನ್ನು ನೆಡಲಾಯಿತು.
ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷೆ ಶ್ವೇತಾ ಆಗೇರ, ಡಿ.ಆರ್.ಎಫ್.ಓ.ಸುಧಾ ಸಿ.ಮಾಚಕ, ಅರಣ್ಯ ಪ್ರೇರಕಿ ಸೀತಾ ಸುಕ್ರುಗೌಡ, ಅಕ್ಷರದಾಸೋಹ ಸಿಬ್ಬಂದಿ ಸುಮನಾ ನಾಯ್ಕ, ಶಾಲಾ ಎಸ್.ಡಿ.ಎಂ.ಸಿ.ಸದಸ್ಯರು, ಊರ ನಾಗರಿಕರು ಉಪಸ್ಥಿತರಿದ್ದರು.ಶಾಲಾ ಶಿಕ್ಷಕಿ ಸವಿತಾ ರಮೇಶ ನಾಯ್ಕ ಸ್ವಾಗತಿಸಿ, ವಂದಿಸಿದರು.
ಕಾರವಾರ ಟೈಮ್ಸ್ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/HyQE3CIKWEICSXQCoirwQE
