ರಾಘುಕಾರಮಠ.
ಕಾರವಾರ :ಮಹಿಳೆಯರನ್ನು ಆಕರ್ಷಸಿ ಅಸಭ್ಯವಾಗಿ ವರ್ತಿಸುತ್ತಿದ್ದ ಹಾಗೂ ಹಿಂದುಧರ್ಮದ ವಿರುದ್ಧ ಅವಹೇಳನ ಕಾರಿಯಾಗಿ ಪ್ರವಚನ ನೀಡುತ್ತಿದ್ದ ನಕಲಿ ಸ್ವಾಮಿಯೊರ್ವನಿಗೆ ಘೇರಾವ ಹಾಕಿದ ಭಜರಂಗದಳದ ಕಾರ್ಯಕರ್ತರು ಸಕತ್‍ ಧರ್ಮದೂಟ ನೀಡಿ ಕಾವಿ ಕಳಚಿಸಿದ ಸ್ವಾರಸ್ಯಕರವಾದ ಘಟನೆ ಅಚವೆ ಗ್ರಾಪಂ ವ್ಯಾಪ್ತಿಯ ಬೋರಳ್ಳಿಯಲ್ಲಿ ನಡೆದಿದೆ
.

ಯಾರು ಈ ನಕಲಿ ಸ್ವಾಮೀಜಿ ;
ಉಕ ಜಿಲ್ಲೆಯ ಅಂಕೋಲಾ ತಾಲೂಕು ಕೇಂದ್ರದಿಂದ 50 ಕೀಮೀ ಅಂತರದಲ್ಲಿರುವ ಅಚವೆ ಪಂಚಾಯತ ವ್ಯಾಪ್ತಿಯ ಬೋರಳ್ಳಿ ಗ್ರಾಮದಲ್ಲಿಈ ನಕಲಿ ಸ್ವಾಮಿಜಿಯು, ನಿತ್ಯಾನಂದ ಸ್ವಾಮೀಜಿಯ ಅಪರಾವತಾರ ಎನ್ನುವಂತೆ ಮನೆ ಮಾಡಿಕೊಂಡಿದ್ದಾನೆ. ಅವಿವಾಹಿತನಾಗಿರುವ ಈ ನಕಲಿ ಸ್ವಾಮೀಯ ಹೆಸರೇ ಶೇಖರ ಸಣ್ಣಪ್ಪ ಪಟಗಾರ. ಸುರಸುಂದರಾಂಗನಾಗಿರುವ ಈತ ಕಳೆದ ಎರಡು ವರ್ಷಗಳ ಹಿಂದೆ ತನ್ನ ಪ್ಯಾಂಟು ಅಂಗಿ ಕಳಚಿ ಖಾವಿ ಬಟ್ಟೆಯನ್ನು ಧರಿಸಿಕೊಂಡಿದ್ದಾನೆ. ಗಡ್ಡವನ್ನು ನುಣ್ಣಗೆ ಬೋಳಿಸಿಕೊಂಡು, ತಲೆಗೂದಲನ್ನು ಬಿಟ್ಟುಕೊಂಡಿರುವ ಈತ ಹೆಸರನ್ನು ಸತ್ಯಾನಂದ ಪರಮಶಿವ ಶೇಖರ ಸ್ವಾಮಿಎಂದು ನಾಮಕರಣ ಮಾಡಿಕೊಂಡಿದ್ದಾನೆ. ವಿಧವೆಯರು ಹಾಗೂ ಕೌಟುಂಬಿಕ ಸಮಸ್ಯೆಗೆ ತುತ್ತಾದ ಮಹಿಳೆಯರನ್ನೆ ವಿಶೇಷವಾಗಿ ಟಾರ್ಗೆಟ್ ಮಾಡಿಕೊಂಡಿರುವ ಈ ಸತ್ಯಾನಂದ ಪರಮಶಿವ ಶೇಖರ ಸ್ವಾಮಿ ತನ್ನ ನಯವಾದ ಮಾತಿನೊಂದಿಗೆ ಮೋಡಿ ಮಾಡಿ ಹಣ ಪೀಕುವ ಕೆಲಸದಲ್ಲಿ ತೊಡಗಿಕೊಂಡಿದ್ದಾನೆ ಎಂಬ ಆರೋಪಕ್ಕೆ ಗುರಿಯಾಗಿದ್ದಾನೆ.


ಪೇಸ್ಬುಕನಲ್ಲಿ ಗಂಟೆಗಟ್ಟಲೆ ಲೈವ್:
ಮನೆಯ ಮೂಲೆಯಲ್ಲಿ ದುರ್ಗಾದೇವಿಯ ವಿಗ್ರಹವನ್ನು ಸ್ವಯಂ ಪ್ರತಿಷ್ಠಾಸಿಕೊಂಡಿರುವ ಈತ ಮುಗ್ದ ಮಹಿಳೆಯರು ವಂಚಿಸುವ ಕೇಂದ್ರ ಸ್ಥಾನ ಸ್ಥಾನವಾಗಿಸಿ ಕೊಂಡಿದ್ದಾನೆ. ಅಲ್ಲದೆ ಪೇಸ್ಬುಕ ಲೈವ್‍ನಲ್ಲಿ ಗಂಟೆಗಟ್ಟಲೆ ಪ್ರವಚನ ನೀಡುವ ಈ ಸ್ವಾಮಿ ಹಿಂದುಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತ“ದುರ್ಗೆತನ್ನ ಮಾತು ಕೇಳದಿದ್ದರೆ, ನಾನು ದುರ್ಗೆಯನ್ನೂ ಬಿಡೆನು” ಎಂದು ತನ್ನ ಪೌರಷವನ್ನು ಪ್ರದರ್ಶಿಸುತ್ತಾನೆ. ಪ್ರತಿದಿನ “ಸತ್ಯಾನಂದ ಪರಮಶಿವ ಶೇಖರ ಪೇಸ್ಬುಕಐಡಿ” ಯ ಮುಖಾಂತರ ಸಂಜೆ 6 ಗಂಟೆಯಿಂದ ಮದ್ಯರಾತ್ರಿ 2 ಗಂಟೆಯವರೆಗೆ ಮನ ಬಂದಂತೆ ಹರಟುತ್ತಾನೆ ಎನ್ನಲಾಗಿದೆ. ಶುದ್ಧ ಹವ್ಯಕ ಭಾಷೆಯನ್ನು ಕರಗತ ಮಾಡಿಕೊಂಡಿರುವ ಈ ಪರಮಶಿವ ಶೇಖರ, ತನ್ನ ಪ್ರವಚನದೊಂದಿಗೆ ಒಟ್ಟು 2800 ಪೇಸ್ಬುಕ್ ಪಾಲೋವರ್ಸ್‍ಗಳನ್ನು ಹೊಂದಿದ್ದಾನೆ.


ಅವಿಭಜಿತದಕ ಜಿಲ್ಲೆಯವರಿಂದ ಬಿತ್ತು ಧರ್ಮದೇಟು ;
ಧರ್ಮಸ್ಥಳ, ಕಟೀಲುದುರ್ಗಾ ಪರಮೇಶ್ವರಿ, ಕುಕ್ಕೆ ಸುಬ್ರಮಣ್ಯ ಸೇರಿದಂತೆ ಹೀಗೆ ಹತ್ತಾರು ದೇವರುಗಳ ಕುರಿತು ಮನಬಂದಂತೆ ಮಾತನಾಡುವ ಈತ ಅವಿಭಜಿತದಕ ಜಿಲ್ಲೆಯ ಭಜರಂಗದಳದವರ ಕೆಂಗಣ್ಣಿಗೆ ಕಾರಣನಾಗಿದ್ದ.ಈತನ ದುರ್ವತನೆಯಿಂದ ರೋಸಿ ಹೋದ ಭಜರಂಗದಳದವರು ಪರಮಶಿವ ಶೇಖರ ಸ್ವಾಮೀಜಿಯ ನಿಜ ಬಣ್ಣ ಬಯಲು ಮಾಡಲು ತಂತ್ರ ಹೂಡಿದ್ದರು.ಮಹಿಳೆಯೊರ್ವಳಿಂದ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿ, ತನ್ನ ಸಂಕಷ್ಠವನ್ನು ಪರಿಹರಿಸಿ ಕೊಡಬೇಕೆಂದು ಪರಮಶಿವ ಸ್ವಾಮಿಯಲ್ಲಿ ಬಿನ್ನಹಿಸಿ ಕೊಂಡಿದ್ದಳು.ಮಹಿಳೆಯ ಮಾತು ಕೇಳುತ್ತಿದ್ದಂತೆ, ಮೈ ಮರೆತು ಮಾತನಾಡುತ್ತಿದ್ದ ಈ ಸ್ವಾಮಿ ನನ್ನಲ್ಲಿಗೆ ಬನ್ನಿ, ನಿಮಗೆ ದುರ್ಗೆಯೊಂದಿಗೆ ನೇರವಾಗಿ ಮಾತನಾಡಿಸಿ ನಿಮ್ಮ ಸಂಕಷ್ಠವನ್ನು ನಿವಾರಿಸುತ್ತೇನೆ ಎಂದು ತನ್ನಇರುವಿಕೆಯ ಕುರಿತು ಗೂಗಲ್ ಲೋಕೆಶನ್ ಕಳುಹಿಸಿದ್ದ.ಇದರ ಜಾಡು ಹಿಡಿದು ಮಂಗಳೂರಿನಿಂದ ಬಂದ ಭಜರಂಗದಳದವರಿಗೆ ಈ ಸ್ವಾಮೀಜಿಯ ನಯ ವಂಚನೆಯ ಕಂಡು ಸಿಡಿಮಿಡಿಗೊಂಡಿದ್ದರು.ಇತ ಪ್ರತಿಷ್ಠಾಸಿದ್ದ ದುರ್ಗೆಯ ಎದುರಿನಲ್ಲಿಯೆ ಪರಮಶಿವ ಶೇಖರ ಸ್ವಾಮಿಗೆ ಸರಿಯಾಗಿ ಧರ್ಮಶಾಸ್ತ್ರ ಮಾಡಿದ್ದರು.ತಾನು ಮಾಡಿದ ತಪ್ಪನ್ನು ಕೈ ಮುಗಿದು ಪೇಸ್ಬುಕ್ ಲೈವನಲ್ಲಿ ಒಪ್ಪಿಕೊಂಡ ಈತ ಕಾವಿ ಕಳಚಿ, ಇನ್ನು ಮುಂದೆ ಇಂಥತಪ್ಪು ಮಾಡಲಾರೆಎಂದು ಮುಚ್ಚಳಿಕೆಯನ್ನು ಬರೆದುಕೊಟ್ಟಿದ್ದಾನೆ.


ಕುಗ್ರಾಮದಲ್ಲಿ ಕುಳಿತು ಮೋಸ ಮಾಡುತ್ತಿದ್ದ ವಂಚಕ..?
ಅಚವೆ ಗ್ರಾಪಂ ವ್ಯಾಪ್ತಿಯ ಬೋರಳ್ಳಿಯ ದುರ್ಗಮ ಪ್ರದೇಶದಲ್ಲಿ ಮನೆ ಮಾಡಿಕೊಂಡಿರುವ ಈತ, ತನ್ನ ಮನೆಗೆ ವೈಪೈ ಕನೆಕ್ಷನ ಮೂಲಕ ಇಡೀಜಗತ್ತನ್ನೆ ಸಾಮಾಜಿಕ ಜಾಲತಾಣ ದೊಂದಿಗೆ ಸಂಪರ್ಕವಿರಿಸಿ ಕೊಂಡಿದ್ದ.ಇತನ ದುರ್ವತನೆ ಕಂಡ ಮಂಗಳೂರಿನ ಭಜರಂಗದಳದವರು ಇತನ ವೈಪೈ ಕನೆಕ್ಷನ್‍ನ್ನು ಕೂಡಕಿತ್ತು ಹಾಕಿ ದೂರ ಸಂಪರ್ಕ ಇಲಾಖೆಗೆ ಇತನಿಗೆ ವೈಪೈ ಕನೆಕ್ಷನ್ ನೀಡದಂತೆ ಭಿನ್ನಹಿಸಿಕೊಂಡಿದ್ದಾರೆ.ವೈಫೈಯನ್ನು ದುರ್ಬಳಕೆ ಮಾಡಿಕೊಂಡು ಜನರನ್ನು ವಂಚಿಸುತ್ತಿದ್ದ ಈ ಪರಮಶಿವ ಶೇಖರ ಸ್ವಾಮೀಜಿಯ ವೈಫೈ ಸಂಪರ್ಕವನ್ನು ದೂರ ಸಂಪರ್ಕ ಇಲಾಖೆಯವರು ಕಡಿತಗೊಳಿಸಿದ್ದಾರೆ. ಹೀಗಾಗಿ ತನ್ನೆಲ್ಲಾ ಸಂಪರ್ಕದ ಕೊಂಡಿಯನ್ನು ಕಳಚಿಕೊಂಡಂತಾಗಿರುವ ಶೇಖರ ಸ್ವಾಮಿ ಮಾನಸಿಕ ಸ್ಥಿಮಿತ ಕಳೆದು ಕೊಂಡವರಂತೆ ವರ್ತಿಸುತ್ತಿದ್ದಾನೆ.


ಬ್ರಾಹ್ಮಣ ಮಹಿಳೆಯರೆ ಇತನ ಟಾರ್ಗೆಟ್ ;
ಬ್ರಾಹ್ಮಣ ಮಹಿಳೆಯರ ಮೇಲೆ ಹೆಚ್ಚಾಗಿ ಕಣ್ಣಿಟ್ಟುಕೊಂಡಿರುವ ಈ ಸ್ವಾಮಿ, ಹವ್ಯಕ ಭಾಷೆಯಲ್ಲಿ ಚೆನ್ನಾಗಿ ಮಾತನಾಡುತ್ತಾನೆ. ಬ್ರಾಹ್ಮಣ ಮಹಿಳೆಯೊಂದಿಗೆ ಮದುವೆಯಾದರೆ ತಾನು ಕೂಡ ಬ್ರಾಹ್ಮಣನಾಗಬಹುದು ಎಂಬ ಕನಸು ಪರಮಶಿವ ಶೇಖರ ಸ್ವಾಮಿಯದ್ದಾಗಿದೆ ಎಂದು ಹೇಳಲಾಗುತ್ತಿದೆ.ಈ ಹಿಂದೆ ಸ್ನಾನ ಮಾಡುತ್ತಿದ್ದ ಮಹಿಳೆಯೊರ್ವಳನ್ನು ಅತ್ಯಾಚಾರಕ್ಕೆ ಯತ್ನಿಸಿದ ಘಟನೆಯಿಂದಾಗಿ ಈ ಪರಮಶಿವ ಶೇಖರ ಸ್ವಾಮೀಜಿ ಪೊಲೀಸ್‍ ಠಾಣೆಯ ಮೆಟ್ಟಿಲನ್ನು ಏರುವಂತಾಗಿತ್ತು.ಇತನನ್ನ ಬಂಧಿಸಿದ ಪೊಲೀಸರು ಶ್ರೀ ಕೃಷ್ಣ ಜನ್ಮಸ್ಥಾನದಲ್ಲಿ ಈ ಸ್ವಾಮಿಯನ್ನು ಕೆಲ ದಿನಗಳವರೆಗೆ ಇಟ್ಟಿದ್ದರು.ನಂತರ ಜಾಮೀನು ಪಡೆದು ಹೊರ ಬಂದ ಈತ ಮತ್ತೆ ಖಾವಿ ತೊಟ್ಟು ಬ್ರಾಹ್ಮಣ ಹೆಂಗಸರನ್ನುತನ್ನ ಬಲೆಗೆ ಬೀಳಿಸಿಕೊಳ್ಳುಲು ಪ್ರಯತ್ನ ನಡೆಸಿದ್ದಾನೆ ಎಂಬ ಬಲವಾದ ಆರೋಪವು ಕೇಳಿ ಬಂದಿದೆ.


ಸ್ವಾಮೀಜಿಗೆ ಜನಪ್ರತಿನಿಧಿಯಾಗುವ ಕನಸು :
ಕಳೆದ ಗ್ರಾ ಪಂ ಚುನಾವಣೆಯಲ್ಲಿ ಅಚವೆಯ ಬೋರಳ್ಳಿ ಗ್ರಾಮದಿಂದ ಸ್ಪರ್ಧಿಸಿದ್ದ ಇತನು ಜನಪ್ರತಿನಿಧಿಯಾಗುವ ಹೊಂಗನಸು ಕಂಡಿದ್ದನು.ದುರ್ಗಾದೇವಿಯೊಂದಿಗೆ ತನಗೆನೇರ ಸಂಪರ್ಕವಿದೆ ಎಂದು ಬಿಂಬಿಸಿಕೊಳ್ಳುವ ಬ್ಯಾನರಗಳನ್ನು ಹಲವಡೆ ಅಳವಡಿಸಿ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳುವ ತಂತ್ರವನ್ನು ಕೂಡ ಇತ ನಡೆಸಿದ್ದ. ಆದರೆ ಈತನ ತಂತ್ರ ಯಶಸ್ವಿಯಾಗದೇ ಹೀನಾಯ ಸೋಲು ಕಾಣುವಂತಹ ಪರಿಸ್ಥಿತಿಯನ್ನು ಬೋರಳ್ಳಿ ಗ್ರಾಮಸ್ಥರು ತಂದಿಟ್ಟಿದ್ದರು.
ಕಾಚಿ ಕಳಚುತ್ತೇನೆ, ಇನ್ನು ಮುಂದೆ ಮೋಸ ಮಾಡಲಾರೆ ಎಂದು ಅಚವೆ ಗ್ರಾಪಂ ಗೆ ಪರಮಶಿವ ಶೇಖರ ಸಾಮಿ ನಿಡಿರುವ ಮುಚ್ಚಳಿಕೆ ಪತ್ರ.

ಕಾರವಾರ ಟೈಮ್ಸ್ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ
https://chat.whatsapp.com/HyQE3CIKWEICSXQCoirwQE