ಅಂಕೋಲಾ : ಕಸ್ತೂರಿ ರಂಗನ ವರದಿ ವಾಪಸ್ಸಿಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿಯು ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗಳಿಗೆ ತಹಸೀಲ್ದಾರರ ಮುಲಕ ಮನವಿ ಸಲ್ಲಿಸಿದರು.ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಮಾತನಾಡಿ ಕಸ್ತೂರಿ ರಂಗನ ವರದಿ ಜನ ಜೀವನ ವ್ಯವಸ್ಥೆಗೆ ವ್ಯತಿರಿಕ್ತವಾಗಿದೆ. ಯಾವುದೇ ಭೂ ಸಮೀಕ್ಷೆ ಮಾಡದೇ ಕೇವಲ ಸ್ಯಾಟ್ಲೈಟ್ ಸಮೀಕ್ಷೆ ನಡೆಸಲಾಗಿದ್ದು ಹಸಿರಾಗಿ ಕಂಡ ಎಲ್ಲ ಭೂ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಹೊರಟಿದ್ದಾರೆ. ನಮ್ಮ ಜನಜೀವನ, ಪರಿಸರ ಒಟ್ಟಾಗಿದ್ದು ಹಸಿರನ್ನು ಅವಲಂಬಿಸುವವರಾಗಿದ್ದೇವೆ. ಅಡಿಕೆ, ತೆಂಗು ಅಲ್ಲದೇ ಮಾವು, ಗೇರು ಗಿಡಗಳನ್ನು ಬೆಳೆಸುತ್ತಿದ್ದು ಹಸರಿನ್ನು ಉಳಿಸಿ ಬೆಳೆಸಿದೆ. ಈ ಎಲ್ಲ ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶ ಎನ್ನುವುದು ತೀವೃ ಅವೈಜ್ಞಾನಿಕವಾದದ್ದು ಎಂದರು.
ಕಾರ್ಯದರ್ಶಿ ಶ್ಯಾಮನಾಥ ನಾಯ್ಕ ಮಾತನಾಡಿ ವರದಿ ತಯಾಸುರಿವಾಗ ಸ್ಥಳೀಯ ಗ್ರಾಮ ಪಂಚಾಯತ, ತಾಲೂಕು ಪಂಚಾಯತ ಅಭಿಪ್ರಾಯ, ಸ್ಥಳೀಯ ಜನರ ಅಭಿಪ್ರಾಯ ಪಡೆಯಲೇಬೇಕು. ಆದರೆ ಕಸ್ತೂರಿ ರಂಗನ ವರದಿ ಸಿದ್ಧಪಡಿಸುವಾಗ ಈ ಪ್ರಮುಖ ಮಾನದಂಡ ಪಾಲಿಸಿಲ್ಲ. ನೈಸರ್ಗಿಕ ಹಾಗೂ ಸಾಂಸ್ಕøತಿಕ ಭೂ ಪ್ರದೇಶವನ್ನು ಪ್ರತ್ಯೇಕವಾಗಿ ಗುರುತಿಸಲು ವರದಿಯ ವಿಚಾರಣಾ ಉಲ್ಲೇಖಗಳಿದ್ದರೂ ಅದನ್ನು ಪ್ರತ್ಯೇಕಿಸಿಲ್ಲ ಎಂದರು.
ಸಂಘದ ತಾಲೂಕಾಧ್ಯಕ್ಷ ಗೌರೀಶ ಟಿ. ನಾಯಕ, ಕಾರ್ಯದರ್ಶಿ ಸಂತೋಷ ನಾಯಕ, ಜಿಲ್ಲಾ ಸಮಿತಿ ಸದಸ್ಯ ರಮಾನಂದ ನಾಯಕ ಮಾತನಾಡಿದರು. ಪ್ರಮುಖರಾದ ಬಾಲಚಂದ್ರ ಶೆಟ್ಟಿ, ಎಚ್.ಬಿ. ನಾಯಕ, ಸುರೇಶ ನಾಯ್ಕ, ಮಹೇಶ ನಾಯ್ಕ, ಧನವಂತಿ ರೇವಣಕರ, ಶಿವರಾಮ ಪಟಗಾರ, ಶ್ರೀಪಾದ ನಾಯ್ಕ, ತಾಂಡೇಲ ಹರಿಕಂತ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರವಾರ ಟೈಮ್ಸ್ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/HyQE3CIKWEICSXQCoirwQE
