ರಾಘು ಕಾಕರಮಠ.
ಕಾರವಾರ : ಶ್ರೀ ಸಾಯಿಬಾಬಾ ಎಂದರೆ ಪವಾಡಗಳ ಸಂತ ಎಂದೇ ನಾಮಾಂಕಿತನಾದವನು. ಇದಕ್ಕೆ ಸಾಕ್ಷೀಕರಿಸುವಂತೆ ಪಟ್ಟಣದ ಕೇಣಿಯ ನದಿಯ ದಂಡೆಯ ಮೇಲೆ ನೆಲೆ ನಿಂತಿರುವ ಶ್ರೀ ಸಾಯಿಬಾಬನ ದೇವಸ್ಥಾನದಲ್ಲಿ ಪವಾಡ ಸದೃಷ್ಯವಾಗಿ ಬೆಳಗುವ ಏಳು ದೀಪ ಭಕ್ತರಲ್ಲಿ ಇನ್ನಷ್ಟು ಭಕ್ತಿಭಾವದೊಂದಿಗೆ ಅಚ್ಚರಿ ಮೂಡಿಸಿದೆ.

ನಡೆಯುವ ಅಚ್ಚರಿಯಾದರೂ ಏನು..?
ಅಂಕೋಲಾ ತಾಲೂಕು ಕೇಂದ್ರದಿಂದ ಅಂದಾಜು 3 ಕೀಮಿ ಅಂತರದಲ್ಲಿರುವ ಕೇಣಿಯ ನದಿ ತಟದಲ್ಲಿ ಭವ್ಯವಾದ ಶ್ರೀ ಸಾಯಿಬಾಬಾ ಮಂದಿರ ಕಳೆದ 4 ವರ್ಷದ ಹಿಂದೆ ಸುಂದರವಾಗಿ ನಿರ್ಮಾಣಗೊಂಡಿದ್ದು, ಅಪಾರ ಭಕ್ತಾಧಿಗಳ ಶೃದ್ದಾಭಕ್ತಿಯ ಕೇಂದ್ರವಾಗಿ ನೆಲೆನಿಂತಿದೆ. ದೇವಸ್ಥಾನ ಪ್ರತಿಷ್ಠಾಪನೆಯಾದ ದಿನದಿಂದಲೂ ಇಲ್ಲಿ ಒಂದಲ್ಲಾ ಒಂದು ಪವಾಡಗಳು ನಡೆಯುವ ಮೂಲಕ ಶೀ ಸಾಯಿಬಾಬಾನ ಅದ್ಬುತ್ ಶಕ್ತಿಯನ್ನು ಭಕ್ತಾಧಿಗಳು ಕಣ್ಣಾರೆ ಕಾಣುವಂತಾಗಿದೆ.ಪ್ರತಿ ಗುರುವಾರ ಮದ್ಯರಾತ್ರಿ 12 ಘಂಟೆಯ ಹೊತ್ತಿನಲ್ಲಿ ಮೆಟ್ಟಿಲೇರಿ ಬರುವ ದಿವ್ಯವಾದ 7 ಜ್ಯೋತಿಗಳು ಶ್ರೀ ಸಾಯಿಬಾಬಾನಿಗೆ ಆರತಿ ಎತ್ತಿ ದೇವಸ್ಥಾನವನ್ನು ಪ್ರದಕ್ಷಿಣೆ ಹಾಕುವ ರೋಮಾಂಚಕಾರಿ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಭಕ್ತರನ್ನು ಇನ್ನಷ್ಟು ಭಾವಪರವಶರನ್ನಾಗಿಸಿದೆ.

ಸೆರೆಯಾಗಿರುವ ಈ ಸಿಸಿಟಿವಿ ದೃಶ್ಯಾವಳಿಗಳನ್ನು ಹತ್ತಾರು ಭಾರಿ ವೀಕ್ಷಿಸಿ ಅಚ್ಚರಿಗೊಂಡಿರುವ ಆಡಳಿತ ಮಂಡಳಿಯವರು ಸಮಾಜದ ಸ್ವಾಮೀಜಿಯವರಲ್ಲಿ ನಡೆದ ಕೌತುಕವನ್ನು ವಿವರಿಸಿದ್ದರು. ಇದು ಬಾಬಾನ ಪವಾಡವಾಗಿದೆ. ನಡೆಯುತ್ತಿರುವ ಈ ಕೌತುಕದ ಸನ್ನಿವೇಶಗಳನ್ನು ಗೌಪ್ಯವಾಗಿ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದ್ದರು ಎನ್ನಲಾಗಿದೆ. ಕಳೆದ 4 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಶ್ರೀ ಸಾಯಿಬಾಬಾನ ಪವಾಡವನ್ನು ಆಡಳಿತ ಮಂಡಳಿಯವರು ಎಲ್ಲೂ ಪ್ರಚಾರ ಬಯಸದೇ ಶ್ರೀ ಬಾಬಾನ ಧಾರ್ಮಿಕ ಸೇವೆಯಲ್ಲಿ ತೊಡಗಿದ್ದಾರೆ.ಕೇಣಿಯಲ್ಲಿ ವಿರಾಜಮಾನನಾಗಿ ಮೈದಳೆದು ಆಶೀರ್ವದಿಸುತ್ತಿರುವ ಶ್ರೀ ಸಾಯಿಬಾಬಾನ ಮಂದಿರಕ್ಕೆ ನೂರಾರು ಭಕ್ತಾಧಿಗಳು ಆಗಮಿಸಿ ತಮ್ಮ ಇಷ್ಠಾರ್ಥಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ. ಮಾರಕ ರೋಗಗಳಿಗೆ ತುತ್ತಾದ ಅನೇಕರಿಗೆ ಶ್ರೀ ಬಾಬಾನ ವಿಭೂತಿ ಪ್ರಸಾದ ಸೇವೆನೆಯು ಸಂಜೀವಿನಿಯಂತಾಗಿದೆ ಎಂದು ತಮ್ಮ ಅನುಭವವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ಮಂದಿರ ಸ್ಥಾಪನೆಗೂ ಮುನ್ನವೆ ನಡೆದಿತ್ತು ಪವಾಡ :
ಕೇಣಿಯಲ್ಲಿ ಶೀ ಸಾಯಿಬಾಬಾನ ಮಂದಿ ನಿರ್ಮಾಣ ಮಾಡಬೇಕೆಂಬ ಕನಸನ್ನು ಶೀ ಸಾಯಿ ಬಾಬಾ ಟೆಂಪಲ್ ಟ್ರಸ್ಟನವರು ಹೊಂದಿದ್ದರು. ಆದರೆ ಅದು ಕಾಂiÀರ್iರೂಪಕ್ಕೆ ಬರಲು ಅನೇಕ ಅಡೆತಡೆಗಳು ಉಂಟಾಗಿದ್ದವು. ದೇವಸ್ಥಾನ ನಿರ್ಮಾಣದ ಮುಂಚೂಣಿಯಲ್ಲಿದ್ದ ಕಿಶೋರ ರಾಯ್ಕರ ಅವರ ಕೆಳ ಬಜಾರದ ರಸ್ತೆಯಲ್ಲಿರುವ ಲಕ್ಷ್ಮೀ ಜ್ಯುವೇಲರ್ಸ್ ಬಳಿ ಅಪರಿಚಿತ ವಯೋವೃದ್ದನೊರ್ವ ಆಗಮಿಸಿ ಶ್ರೀ ಬಾಬಾನ ಮಂದಿರವನ್ನು ತಾವು ನಿರ್ಮಾಣ ಮಾಡುವ ವಿಚಾರ ಕೇಳಲ್ಪಟ್ಟೆ. ಈ ಮಹತ್ಕಾರ್ಯಕ್ಕೆ ನನ್ನಿಂದ 5 ಸಾವಿರ ರೂಪಾಯಿ ಇಟ್ಟುಕೊಳ್ಳಿ ಎಂದು ಹಣ ನೀಡಿದ್ದನು. ಕಿಶೋರ ರಾಯ್ಕರ ಅವರು ನೀಡಿದ ಹಣಕ್ಕೆ ರಶೀದಿ ನೀಡಲು ಅಂಗಡಿಯೊಳಗೆ ಪ್ರವೇಶಿಸುತ್ತಿದ್ದಂತೆ ಅಪರಿಚಿತ ವೃಯೋವೃದ್ಧ ಏಕಾಏಕಿ ಅದೃಶ್ಯನಾಗಿದ್ದ. ಇದು ಬಾಬಾನ ಪವಾಡ ಎಂದು ಭಾವಿಸಿದ ದೇವಸ್ಥಾನದ ಸಮಿತಿಯವರು ಈ 5 ಸಾವಿರ ರೂ ಹಣವನ್ನು ಸಾಯಿಬಾಬಾನ ಹೆಸರಿನಲ್ಲಿಯೆ ರಶೀದಿ ಮಾಡಿ ಕೆಲಸ ಪ್ರಾರಂಬಿಸಿದರು. ಅನೇಕ ಭಕ್ತಾಧಿಗಳು ಶ್ರೀ ದೇವರ ಕಟ್ಟಡ ನಿರ್ಮಾಣಕ್ಕೆ ಕೈ ಜೋಡಿಸಿರುವುದು ಶ್ರೀ ಸಾಯಿಬಾಬಾನ ಪವಾಡಕ್ಕೆ ಮುನ್ನುಡಿಯಾಗಿದೆ.
ಲಕ್ಷಾಂತರ ರೂಪಾಯಿ ಮೌಲ್ಯದಲ್ಲಿ ನಿರ್ಮಾಣವಾದ ಶ್ರೀ ಸಾಯಿಬಾಬಾನ ಮೂರ್ತಿಯನ್ನು ಕಾರವಾರದ ಮೂಡಗೇರಿ ಮೂಲದವರರಾದ, ಪ್ರಸ್ತುತ ಹುಬ್ಬಳ್ಳಿಯ ದೇಶಪಾಂಡೆ ನಗರದ ನಿವಾಸಿಯಾಗಿರುವ ಲೀಲಾಬಾಯಿ ರಮಾಕಾಂತ ವೆರ್ಣೇಕರ ಅವರು ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಿಸಿಕೊಟ್ಟಿದ್ದರು.
ಶ್ರೀ ಬಾಬಾನ ಮಂದಿರ ನಿರ್ಮಾಣ ಮಾಡಲು 3 ಗುಂಟೆಯ ಸ್ಥಳವನ್ನು ತೆಂಕಣÀಕೇರಿಯ ಲಕ್ಷ್ಮೀ ಮಂಜುನಾಥ ರಾಯ್ಕರ ಕೊಡುಗೆ ನೀಡಿ ತಮ್ಮ ಆಧಾತ್ಮದ ಮೂಲಕ ಶ್ರೀ ಸಾಯಿಬಾಬಾ ಅವರನ್ನು ಕಂಡು ಕೊಂಡಿದ್ದಾರೆ. ಸಹೋದರರಾದ ಕಿಶೋರ ಮಂಜುನಾಥ ರಾಯ್ಕರ, ನಾಗರಾಜ್ ಎಮ್. ರಾಯ್ಕರ ಹಾಗೂ ವಿಘ್ನೇಶ್ವರ ಎಮ್. ರಾಯ್ಕರ ಅವರು ಸಾಯಿ ಬಾಬಾನ ಸೇವೆಯಿಂದ ಪುನೀತರಾಗಿದ್ದಾರೆ. ಧರ್ಮಸ್ಥಳದ ಶ್ರೀ ವಿರೇಂದ್ರ ಹೆಗಡೆ ಅವರು ಸೇರಿ ಅನೇಕ ಸಹೃದಯಿ ಭಕ್ತಾಧಿಗಳ ನೆರವಿನಲ್ಲಿ ಶ್ರೀ ಸಾಯಿಬಾಬಾನ ದೇವಸ್ಥಾನ ನಿರ್ಮಾಣಗೊಂಡು ಭಕ್ತರ ಆರಾಧ್ಯ ಕೇಂದ್ರವಾಗಿದೆ.
ಶ್ರೀ ಸಾಯಿಬಾಬಾನ ಮಂದಿರದ ನಿರ್ಮಾನದ ಹಿಂದೆಯೂ ಸಹ ಅನೇಕ ಪವಾಡಗಳು ನಡೆದಿದೆ. ಈ ಬಗ್ಗೆ ನಮ್ಮ ಸಮಾಜದ ಸ್ವಾಮೀಜಿಯರಲ್ಲಿಯವರ ಗಮನಕ್ಕೂ ತರಲಾಗಿತ್ತು. ಸಾಯಿಬಾಬಾ ಒಂದು ಪವಾಡದ ದಿವ್ಯಶಕ್ತಿಯಾಗಿದ್ದಾರೆ. ಆ ಬೆಳಕಿನಡೆಗೆ ನಾವು ಮುಂದೆವರೆಯುತ್ತಿದ್ದೇವೆ.
ಕಿಶೋರ ಮಂಜುನಾಥ ರಾಯ್ಕರ.

ಕಾರವಾರ ಟೈಮ್ಸ್ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…