ಶಿರಸಿ: ಗ್ರಾಮೀಣ ಭಾಗದ ಪುರುಷ ಹಾಗೂ ಮಹಿಳೆಯರಿಗಾಗಿ ತಾಲೂಕಾ ಮಟ್ಟದ ಕ್ರೀಡಾಕೂಟವನ್ನು ತಾಲೂಕಿನ ಶ್ರೀ ಮಾರಿಕಾಂಭಾ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಈ ಕ್ರೀಡಾ ಕೂಟದಲ್ಲಿ 13 ಪಂಚಾಯತಿಯಿಂದ ಕಬ್ಬಡ್ಡಿ ಹಾಗು 6 ಪಂಚಾಯತಿಯಿಂದ ಖೋಖೊ ಆಟವಾಡಲು ಸುಮಾರು 4೦೦ ಕ್ಕೂ ಹೆಚ್ಚಿನ ಕ್ರೀಡಾರ್ಥಿಗಳು ಭಾಗವಹಿಸಿದ್ದರು.ಗ್ರಾಮೀಣ ಭಾಗದ ಆಟವಾದ ಕಬ್ಬಡ್ಡಿ ಮತ್ತು ಖೋಖೋ ನೋಡಲು ನೂರಾರು ಜನರು ಪಾಲ್ಗೊಂಡು ಕ್ರೀಡಾರ್ಥಿಗಳಿಗೆ ಹುರಿದುಂಬಿಸಿದರು.
ತಾಲೂಕು ಪಂಚಾಯತಿ ಕಾರ್ಯನಿರ್ವಹಣಾದಿಕಾರಿ ದೇವರಾಜ ಹಿತ್ತಲಮನೆ,ಬಿಇಒ ಎಂ ಎಸ್ ಹೆಗಡೆ,ದೈಹಿಕ ಶಿಕ್ಷಕ ಕಿರಣ ನಾಯ್ಕ ಹಾಗು ಇನ್ನಿತರರು ಗ್ರಾಮೀಣ ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದರು

ಶಿರಸಿ ತಾಲೂಕಿನ  ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7