ಭಟ್ಕಳ: ತಾಲೂಕಿನಲ್ಲಿ ಮಳೆಯಿಂದ ಹಾನಿಯಾದ ನೆರೆ ಪ್ರದೇಶಕ್ಕೆ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಮೂಢ ಭಟ್ಕಳ ಹಾಗೂ ಮಣ್ಕುಳಿಯ ಭಾಗಕ್ಕೆ ಭೇಟಿ ನೀಡಿ 100ಕ್ಕೂ ಅಧಿಕ ಮನೆಗಳನ್ನು ಪರಿಶೀಲನೆ ಮಾಡಿದರು. ಕಳೆದ 2 ದಿನಗಳ ಹಿಂದಷ್ಟೇ ಸುರಿದ ಭಾರಿ ಮಳೆಗೆ ಇಡೀ ತಾಲೂಕು ಜಲಾವೃತಗೊಂಡು ಅಪಾರ ಹಾನಿಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಈ 2 ಸ್ಥಳಗಳಿಗೆ ಭೇಟಿ ನೀಡಿದ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಮನೆ ಮನೆಗಳಿಗೆ ತೆರಳಿ ಅಲ್ಲಿನ ನಿವಾಸಿಗಳ ಅಹವಾಲುಗಳನ್ನು ಕೇಳಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕ ಶ್ರೀಕಾಂತ ನಾಯ್ಕ , ಸುರೇಶ ನಾಯ್ಕ ಕೋಣೆಮನೆ, ಸುರೇಶ ನಾಯ್ಕ ಮಣ್ಕುಳಿ ಮುಂತಾದವರು ಉಪಸ್ಥಿತರಿದ್ದರು
ಭಟ್ಕಳ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…