ಶಿರಸಿ: 75 ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ನಡೆಯುವ ಹರ ಘರ ತಿರಂಗ ಅಭಿಯಾನ ಶಿರಸಿಯಲ್ಲಿ ಯಶಸ್ವಿಗೊಳಿಸಲು 13 ಸಾವಿರ ರಾಷ್ಟ್ರ ಧ್ವಜವನ್ನು ನಗರದಲ್ಲಿರುವ ಮನೆಗಳಿಗೆ ಉಚಿತವಾಗಿ ವಿತರಿಸಲಾಗುವುದೆಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ತಿಳಿಸಿದರು.
ಅವರು ಸೋಮವಾರ ನಗರಸಭೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತ ರಾಷ್ಟ್ರಧ್ವಜ ವಿತರಣೆ ಅ,9ರಿಂದ ನಡೆಯಲಿದ್ದು ನಗರಸಭೆ ಸಿಬ್ಬಂದಿಗಳೇ ಆಯಾ ಭಾಗದ ವಾರ್ಡ ಸದಸ್ಯರೊಂದಿಗೆ ಸೇರಿ ಮನೆ ಮನೆಗೆ ವಿತರಿಸಲಾಗುವುದೆಂದರು. ಪ್ರತಿ ಮನೆ,ಅಂಗಡಿ ಮುಂಗಟ್ಟು, ಕಚೇರಿ,ಕಟ್ಟಡಗಳಲ್ಲಿ ಅಗಷ್ಟ 13 ರಿಂದಲೇ ಬೆಳಿಗ್ಗೆ 8 ಗಂಟೆಗೆ ರಾಷ್ಟ್ರಧ್ವಜವನ್ನು ಹಾರಿಸಿ ಅಗಷ್ಟ 15 ರ ಸಂಜೆ 6 ಗಂಟಗೆ ಇಳಿಸಬೇಕು. ವಾಣಿಜ್ಯ ಸಂಕೀರ್ಣದ ಮೇಲೆ ಹಾರಿಸಲು 4 ಸಾವಿರ ಬಾವುಟ ಖರೀದಿಸಲಾಗಿದ್ದು ಪ್ರತಿ ಬಾವುಟಕ್ಕೆ 22 ರೂ ನಿಗದಿಗೊಳಿಸಲಾಗಿದೆ.ರಾಷ್ಟ್ರ ಧ್ವಜವನ್ನು ಏರಿಸುವಾಗ ಮತ್ತು ಇಳಿಸುವಾಗ ರಾಷ್ಟ್ರಧ್ವಜಕ್ಕೆ ಯಾವುದೇ ಅಗೌರವ,ಚ್ಯುತಿ ಬಾರದಂತೆ ಎಚ್ಚರಿಕೆ ವಹಿಸಬೇಕೆಂದರು.
ಅ. 9 ರಂದು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದಂತಹ ನಾಗರಿಕರಿಗೆ ಅವರ ಮನೆಗೆ ಹೋಗಿ ಸನ್ಮಾನಿಸಿ ಗೌರವಿಸಲಾಗುವುದು.ಅ.10 ರಂದು ಸಂಜೆ 5 ಗಂಟಗೆ ಅಮರ ಜವಾನ್ ಉದ್ಯಾನವನದಲ್ಲಿ ದೇಶಭಕ್ತಿ, ಸಂಗೀತ ಕಾರ್ಯಕ್ರಮ ಹಾಗು 5 ಸೈನಿಕರಿಗೆ ಸನ್ಮಾನಿಸಿ ಗೌರವಿಸಲಾಗುವುದೆಂದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಸಾಲೇರ್, ಪೌರಾಯುಕ್ತ ಕೇಶವ ಚೌಗುಲೆ,ಸಹಾಯಕ ಕಾರ್ಯಪಾಲಕ ಅಭಿಯಂತರ ನಾರಾಯಣ ನಾಯ್ಕ,ಸದಸ್ಯರುಗಳಾದ ನಾಗಾರಜ ನಾಯ್ಕ, ಕುಮಾರ ಬೋರ್ಕರ್, ರಮಾನಂದ ಭಟ್ಟ ಉಪಸ್ಥಿತರಿದ್ದರು.
ಶಿರಸಿ ತಾಲೂಕಿನ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7
