ಜೋಯಿಡಾ: ತಾಲೂಕಿನ ಉಳವಿಯಲ್ಲಿ ಹರ ಘರ ತಿರಂಗಾ ಅನುಷ್ಠಾನದ ಕುರಿತು 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಸರ್ಕಾರದ ಸುತ್ತೋಲೆಯಂತೆ ಕ್ರಮಕೈಗೊಳ್ಳಲು ನಿರ್ದೇಶನವನ್ನು ಜೋಯಿಡಾ ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಆನಂದ ಬಡಕುಂದ್ರಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯ ದಿನದಂದು ಸರ್ಕಾರದ ಆದೇಶದ ಪ್ರಕಾರ ಪ್ರತಿಯೊಂದು ಮನೆಯಲ್ಲಿಯೂ ನಮ್ಮ ದೇಶದ ಬಾವುಟ ಹಾರಾಡಬೇಕು ಈ ಬಗ್ಗೆ ಎಲ್ಲಾ ಗ್ರಾ. ಪಂ.ಗಳಿಗೂ ಮಾಹಿತಿ ಕಳಿಸಲಾಗಿದೆ. ನಾವೆಲ್ಲರೂ ಅದ್ದೂರಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸೋಣ ಎಂದರು. ಕೆಲ ಹಳ್ಳಿಗಳಿಂದ ಬಂದ ಸಾರ್ವಜನಿಕರಿಗೆ ಬಾವುಟವನ್ನು ನೀಡಿದರು. ಈ ಸಂದರ್ಭದಲ್ಲಿ ಅಮೃತ ಮಹೋತ್ಸವ ಯೋಜನೆಯಡಿ ದತ್ತುಗ್ರಾಮಗಳ ಸಮೀಕ್ಷೆ ಕುರಿತು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ. ಕಾರವಾರದ ಮುಖ್ಯ ಯೋಜನಾ ಅಧಿಕಾರಿ ವಿನೋದ ಅನ್ವೇಕರ , ಉಳವಿ ಗ್ರಾ. ಪಂ. ಅಧ್ಯಕ್ಷೆ ಮಂಜುಳಾ ಮಿರಾಶಿ, ಉಪಾಧ್ಯಕ್ಷ ಮಂಜುನಾಥ ಮೋಕಾಶಿ, ಹಾಗೂ ಎಲ್ಲಾ ಗ್ರಾಮ ಪಂಚಾಯತ ಸದಸ್ಯರು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಮಹಮ್ಮದ್ ಹನೀಪ್ ಇತರರು ಉಪಸ್ಥಿತರಿದ್ದರು.
ಜೊಯಿಡಾ/ರಾಮನಗರದ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/FwQPbtH4lkpE71sGaWxRXj
