ಜೋಯಿಡಾ – ತಾಲೂಕಿನ ಗಾಂಗೋಡಾ ಗ್ರಾಮ ಪಂಚಾಯತದಲ್ಲಿ ಅಮೃತ ಸಮುದಾಯದ ಯೋಜನೆಯಡಿಯಲ್ಲಿ ಅಮೃತ ಸಮುದಾಯದ ದತ್ತು ಗ್ರಾಮಗಳಲ್ಲಿ ಸಮೀಕ್ಷೆಗೆ ಚಾಲನೆಯನ್ನು ನೀಡಲಾಯಿತು.
ಭಾರತದ 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಆಚರಣೆಯ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಅಮೃತ ಸಮುದಾಯ ದತ್ತು ಗ್ರಾಮ ಕಾರ್ಯಕ್ರಮವನ್ನು ಘೋಷಿಸಿರುತ್ತದೆ. ಇದರಲ್ಲಿ ಗಾಂಗೋಡಾ ಗ್ರಾಮ ಪಂಚಾಯತದ ಕುಂಬೆಲಿ ,ಚಾಪೋಲಿ ಕಾಳಸಾಯಿ,ಗಾಂಗೋಡಾ ಈ ಮೂರು ಗ್ರಾಮಗಳು ಅಮೃತ ದತ್ತು ಗ್ರಾಮಗಳ ಯೋಜನೆಯಡಿ ಆಯ್ಕೆಯಾಗಿದ್ದು ,ಗ್ರಾಮಗಳ ಸಮೀಕ್ಷೆಗೆ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರ ಮೂಲಕ ಸಮೀಕ್ಷೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಗಾಂಗೋಡಾ ಗ್ರಾಮ ಪಂಚಾಯತ ಅಧ್ಯಕ್ಷ ಸುಬ್ರಾಯ ಹೆಗಡೆ, ಮುಖ್ಯ ಯೋಜನಾಧಿಕಾರಿ ಜಿ. ಪಂ.ಕಾರವಾರ ವಿನೋದ ಅಣ್ವೇಕರ, ಜೋಯಿಡಾ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಆನಂದ ಬಡಕುಂದ್ರಿ, ಎಂ.ಬಿ.ದಳಪತಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಪ್ರೋ ಎಸ್.ಎಸ್ ಹಿರೇಮಠ ದಾಂಡೇಲಿ, ಮಂಜುನಾಥ ಚಲವಾದಿ, ಗಾಂಗೋಡಾ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ನಬಿಲಾಲ್ ಇನಾಮದಾರ ಹಾಗೂ ಎನ್.ಎಸ್,ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜೊಯಿಡಾ/ರಾಮನಗರದ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/FwQPbtH4lkpE71sGaWxRXj
