ಜೋಯಿಡಾ:  ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ವಾರ್ಡ್ ನಂ 3 ರ ಫಾತೀಮಾ ಮುತ್ತನವರ ಎಂಬುವವರ ಮನೆಯ ಗೋಡೆ ಅತಿಯಾದ ಮಳೆಯಿಂದಾಗಿ ಕುಸಿತಗೊಂಡಿದೆ.

  ಜೋಯಿಡಾ ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ಮಳೆಯ ಪ್ರಮಾಣ ಹೆಚ್ಚಾಗಿದ್ದು ,ಅಡಿಕೆ ತೋಟಗಳಿಗೆ ,ಕೃಷಿ ಚಟುವಟಿಕೆಗೆ ಸಮಸ್ಯೆ ಉಂಟಾಗಿದೆ. ಅತಿಯಾದ ಮಳೆಯಿಂದಾಗಿ ಗುಡ್ಡ ಕುಸಿತ, ವಿದ್ಯುತ್ ಸಮಸ್ಯೆ ,ನೆಟ್ವರ್ಕ್ ಸಮಸ್ಯೆ ಹಾಗೂ ಕೆಲ ಜನರ ಮನೆಯ ಮೇಲೆ ಮರಗಳು ಬಿದ್ದು ಅನಾಹುತ ಉಂಟಾಗಿವೆ.

  ಮಳೆ ಗಾಳಿಯಿಂದ ಮನೆ ಕಳೆದುಕೊಂಡವರಿಗೆ ಮತ್ತು ನಿರಾಶ್ರಿತರಿಗೆ ಕೂಡಲೇ ತಾಲೂಕಾ ಆಡಳಿತದ ವತಿಯಿಂದ ಸರಿಯಾದ ವ್ಯವಸ್ಥೆ ಮಾಡಬೇಕಿದೆ.

ಜೊಯಿಡಾ/ರಾಮನಗರದ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…

https://chat.whatsapp.com/FwQPbtH4lkpE71sGaWxRXj