ಜೋಯಿಡಾ – ತಾಲೂಕಿನ ತಹಶೀಲ್ದಾರರ‌ ಕಚೇರಿ ಮತ್ತು ಎಲ್ಲಾ ಸರ್ಕಾರಿ ಕಚೇರಿಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

  ಜೋಯಿಡಾ ತಹಶೀಲ್ದಾರರ ಕಚೇರಿ ಆವರಣದಲ್ಲಿ ಎ.ಸಿ.ವಿಜಯಲಕ್ಷ್ಮಿ  ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಧ್ವಜಾರೋಹಣ ಮಾಡುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

   ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ‌ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಬಹಳಷ್ಟು ಯೋಧರು ಮತ್ತು ಮಹಾನ್ ವ್ಯಕ್ತಿಗಳು ಹುತಾತ್ಮರಾಗಿದ್ದಾರೆ, ಬ್ರಿಟಿಷರ ಗುಲಾಮಗಿರಿಯಿಂದ ಸ್ವತಂತ್ರರಾದ ನಾವು ಇಂದು ಸ್ವತಂತ್ರ ಜೀವನ ನಡೆಸುತ್ತಿದ್ದೇವೆ. ಜೋಯಿಡಾ ತಾಲೂಕು ಕಾಡುಗಳಿಂದ ಆವೃತ್ತವಾದ ಪ್ರದೇಶ. ಜನ ಸಂಖ್ಯೆ ಕಡಿಮೆ, ಸರ್ಕಾರಿ ಕಚೇರಿಗಳಿಗೆ ಬರಲು ಬಹಳಷ್ಟು ದೂರ ದೂರದಿಂದ ಬರಬೇಕಾಗುತ್ತದೆ, ಆದ್ದರಿಂದ ಎಲ್ಲಾ ಸರ್ಕಾರಿ ಅಧಿಕಾರಿಗಳು ಜನರಿಗೆ ಯಾವುದೇ ಕೆಲಸಕ್ಕೆ ಕಾಯಿಸದೇ ಜನರಿಗೆ ಉತ್ತಮ ಸೇವೆಯನ್ನು ನೀಡಬೇಕು ಎಂದರು‌.

     ಈ ಸಂದರ್ಭದಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಆನಂದ ಬಡಕುಂದ್ರಿ, ಜೋಯಿಡಾ ಗ್ರಾ.ಪಂ.ಅಧ್ಯಕ್ಷ ಅರುಣ ಕಾಂಬ್ರೆಕರ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಸದಾನಂದ ದಬ್ಗಾರ, ಬಿಜೆಪಿಯ ತುಕಾರಾಮ ಮಾಜ್ರೆಕರ, ಜೋಯಿಡಾ ಸಿ.ಪಿ.ಐ ನಿತ್ಯಾನಂದ ಪಂಡಿತ್ ,ಡಾ.ಸುಜಾತಾ ಉಕ್ಕಲಿ,ಲೋಕೋಪಯೋಗಿ ಇಲಾಕೆಯ ಎಇಇ ವಿಜಯಕುಮಾರ್, ಜಿ.ಪಂ.ಎಇಇ ಇಝಾನ್ ಮಹಮದ್,ಜೋಯಿಡಾ ಗ್ರಾ.ಪಂ.ಸದಸ್ಯ ಸಂತೋಷ ಮಂಥೇರೋ ಇತರರು ಉಪಸ್ಥಿತರಿದ್ದರು

ಜೊಯಿಡಾ/ರಾಮನಗರದ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…

https://chat.whatsapp.com/FwQPbtH4lkpE71sGaWxRXj