ಶಿರಸಿ: ಹಿಂದು ಸಂಘಟನೆ ಹಿಂದೂಗಳ ರಕ್ಷಣೆಗಾಗಿ ಟೊಂಕ ಕಟ್ಟಿ ನಿಂತಿರುವಾಗ ಆ ಸಂಘಟನೆಗೆ ಆರ್ಥಿಕವಾಗಿ ಸಹಾಯ ಮಾಡುವ ಜವಾಬ್ದಾರಿ ಹಿಂದುಗಳ ಮೇಲಿದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.
ಅವರು ಭಾನುವಾರ ಶಿರಸಿಯ ಅಂಜನಾದ್ರಿಯ ದೇವಸ್ಥಾನದಲ್ಲಿ ಜಾಗೃತ ನಾಗರಿಕ ವೇದಿಕೆ ಹಾಗು ಹಿಂದೂ ಜಾಗರಣ ವೇದಿಕೆಯಿಂದ ಏರ್ಪಡಿಸಲಾಗಿದ್ದ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಹಿಂದುಗಳ ರಕ್ಷಣೆಗಾಗಿ ಎಷ್ಟೂ ಹಿಂದುಗಳು ಜೈಲು ಪಾಲಾಗುತ್ತಿದ್ದು ಅವರನ್ನು ಬಿಡಿಸಿಕೊಂಡು ಬರಲು ಅವರಲ್ಲಿ ಹಣವಿಲ್ಲ. ಇಂತಹ ಹಿಂದುಗಳಾದ ನಾವು ಅವರನ್ನು ಹೊರಗೆ ತರಲು ಕೈ ಜೋಡಿಸಬೇಕು. ಅದರಂತೆ ಪೋಲಿಸರು ವಕೀಲರು ಕೂಡಾ ಹಿಂದುಗಳ ರಕ್ಷಣೆಗೆ ಬರಬೇಕೆಂದು ಹೇಳಿದರು. ಹಿಂದುಗಳಾದ ನಾವು ಇನ್ನು ಮುಂದೆ ಒಂದಿಂಚು ಜಾಗ ಯಾರಿಗೂ ಬಿಟ್ಟು ಕೊಡುವುದಿಲ್ಲ. ಈಗಾಗಲೇ ನಾವು ಎಲ್ಲವನ್ನೂ ಕೊಟ್ಟು ಮುಗಿಸಿದ್ದೇವೆ. ಇರುವಷ್ಟಾದರೂ ಜಾಗವನ್ನು ಕಾಪಾಡಿಕೊಳ್ಳಲು ಈ ಸಂಕಲ್ಪ ದಿನದಲ್ಲಿ ಪಣ ತೊಡಬೇಕೆಂದು ಹೇಳಿದರು.
ಬಿಜೆಪಿ ಅಧಿಕಾರ ಅನುಭವಿಸುತ್ತಿದೆ ಎಂದರೆ ಅದಕ್ಕೆ ಕಾರಣ ಹಿಂದುಗಳು. ಆದರೆ ಹಿಂದುಗಳ ರಕ್ಷಣೆ ಕೇಳಿದರೆ ಅವರು ಮುಂದೆ ಬರುವುದಿಲ್ಲ. ನಮ್ಮ ರಕ್ಷಣೆ ಕೇಳುವ ಹಕ್ಕು ನಮಗಿದೆ. ಬಿಜೆಪಿ ನಂಬಿ ಕೂತರೆ ಹಿಂದುಗಳಿಗೆ ಪ್ರಯೋಜನವಿಲ್ಲ. ದೇಶ ರಕ್ಷಣೆಯಲ್ಲಿ ಬಿಜೆಪಿ ನಮಗೆ ಕೈ ಜೋಡಿಸಬೇಕು. ಬರೇ ಬೊಗಳೆ ಬಿಟ್ಟರೆ ನಾವು ನಂಬಲು ತಯಾರಿಲ್ಲ. ನಮಗೆ ಸಾತ್ ಕೊಟ್ಟರೆ ಕೊಡಿ ಇಲ್ಲವಾದರೆ ನಾವೇ ನಿಮ್ಮನ್ನು ಬಗ್ಗು ಬಡಿದು ಮುನ್ನಡೆಯುತ್ತೇವೆಂದು ಹೇಳಿದರು. ಹಿಂದುಗಳು ಪ್ರತಿಯೊಬ್ಬರ ಮನೆಯಲ್ಲಿಯೂ ತಲವಾರ ಇಟ್ಟುಕೊಳ್ಳಬೇಕು.ತಲವಾರ ಇಟ್ಟುಕೊಳ್ಳುವುದು ನಮ್ಮ ರಕ್ಷಣೆಗಾಗಿ. ತಲವಾರ ಇಟ್ಟುಕೊಳ್ಳುವುದು ಕ್ಷತ್ರೀಯ ಗುಣ. ನಾವು ಹಬ್ಬದ ಸಂಧರ್ಭದಲ್ಲಿ ಪೂಜೆ ಕೂಡಾ ಮಾಡುತ್ತೇವೆಂದರು. ನಾವು ಸ್ವದೇಶಿ ವಸ್ತುವನ್ನು ಬಳಸಬೇಕು.ಇವತ್ತು ಧ್ವಜದ ಬಟ್ಟೆಯನ್ನು ಚೀನಾದಿಂದ ತರಿಸಲಾಗಿದೆ. ಆದರೆ ಚೀನಾ ನಮ್ಮ ಮನೆಗೆ ಬಂದು ಬೊಂಬ್ ಹಾಕುತ್ತಿದೆ ಎನ್ನುವದನ್ನು ಯಾರೂ ಮರೆಯಬಾರದು. ಆದ್ದರಿಂದ ನಾವು ಎಚ್ಚರಿಕೆಯಿಂದ ಇರಬೇಕೆಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದರೂ ಈ ಪ್ರಮೋದ ಮುತಾಲಿಕ್ ಗೆ ಸ್ವಾತಂತ್ರ್ಯವಿಲ್ಲ. ನೆರೆಯ ಗೋವಾ ರಾಜ್ಯ ಅಷ್ಟೇ ಏಕೆ ಗದಗ ಜಿಲ್ಲೆ ಸೇರಿದಂತೆ 21 ಜಿಲ್ಲೆಗಳಲ್ಲಿ ನನಗೆ ನಿರ್ಬಂಧ ಹೇರಲಾಗಿದೆ. ಗೋವಾದಲ್ಲಿ ವಿದೇಶಿಗರು ಬರುತ್ತಾರೆ, ನಾನೇಕೆ ಅಲ್ಲಿಗೆ ಹೋಗಬಾರದೆಂದು ಪ್ರಶ್ನಿಸಿದ ಅವರು ನನಗೆ ಅಲ್ಲಿ ಕಳೆದ ಎಂಟು ವರ್ಷಗಳಿಂದ ನಿರ್ಬಂಧ ಹೇರಲಾಗಿದೆ ಎಂದರು. ನಮಗೆ ಸ್ವಾತಂತ್ರ್ಯ ಬಂದು 75 ವರ್ಷವಾದರೂ ಏಕೆ ನಾವು ಅಖಂಡ ಭಾರತ ಸಂಕಲ್ಪ ದಿನವನ್ನು ಆಚರಿಸಬೇಕೆಂದು ಯಾರಿಗೂ ಗೊತ್ತಿಲ್ಲ. ನಿಜವಾಗಿಯೂ ನಾವು ದೇಶ ವಿಭಜನೆಯಾದ ಸಂಧರ್ಭದಲ್ಲಿ ನಡೆದ ಕರಾಳತೆಯನ್ನು ನೆನೆಸಿಕೊಂಡು ದೇಶ ಕಟ್ಟಲು ಕಂಕಣ ತೊಡುವ ದಿನ ಇದಾಗಿದೆ ಎಂದರು.
ವೇದಿಕೆಯಲ್ಲಿ ಅಂಜನಾದ್ರಿ ದೇವಸ್ಥಾನದ ಅಧ್ಯಕ್ಷ ಕಿರಣ ಚಿತ್ರಗಾರ್ ನಿವೃತ್ತ ಸೈನಿಕ ಸುಭೆದಾರ್ ಈ ರಾಮು ಉಪಸ್ಥಿತರಿದ್ದರು. ಮಾಂತೇಶ ಹಾದಿಮನೆ ಕಾರ್ಯಕ್ರಮ ನಿರೂಪಿಸಿದರು.
ಶಿರಸಿ ತಾಲೂಕಿನ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7
