ಶಿರಸಿ: ಸೆಂಟ್ ಮಿಲಾಗ್ರಿಸ್ ಕ್ರೆಡಿಟ್ ಸೊಸೈಟಿಯಿಂದ 75 ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಶಿರಸಿಯ ಮರಾಠಿಕೊಪ್ಪದಲ್ಲಿರುವ ಅಜಿತ್ ಮನೋಚೇತನ ಶಾಲೆಯ ವಿಶೇಷ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ಸೊಲ್ಲಾಪುರ ಚಾದರ ನೀಡಲಾಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂತ ಡಾನ್ ಬಾಸ್ಕೋ ಚರ್ಚಿನ ಧರ್ಮ ಗುರುಗಳಾದ ಲೀನೊ ಲೊಪಿಸ್ ಇವರು ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಮಾಜದಿಂದ ಅನುಕಂಪ ಬೇಡ. ಅವರಿಗೆ ಮಾನವಿಯತೆಯ ಜೊತೆಗೆ ಸಹಾಯ ಹಸ್ತದ ಅಗತ್ಯವಿದೆ. ಇಂತಹ ವಿದ್ಯಾರ್ಥಿಗಳ ಸೇವೆ ಮಾಡುತ್ತಿರುವ ಈ ಶಾಲೆಯ ಶಿಕ್ಷಕರು ನಿಜಕ್ಕೂ ಅಭಿನಂದನಾರ್ಹರು. ಪಾಲಕರೂ ಕೂಡಾ ತಮಗೆ ಇಂತಹ ಮಕ್ಕಳು ಹುಟ್ಟಿದ್ದಾರೆನ್ನುವ ಬೇಸರ ಮಾಡಬಾರದು. ಆ ಮಕ್ಕಳ ಹಿಂದೆ ದೇವರ ಆಶಿರ್ವಾದಯಿದೆ ಎನ್ನುವದನ್ನು ಯಾವ ಪಾಲಕರೂ ಮರೆಯ ಬಾರದೆಂದು ಹೇಳಿದರು.
ಅಜಿತ ಮನೋಚೇತನ ಟ್ರಸ್ಟಿನ ಅಧ್ಯಕ್ಷ ಸುಧೀರ್ ಭಟ್ ಮಾತನಾಡಿ ನಮ್ಮ ಶಾಲೆಗೆ ಬರುವ ವಿಧ್ಯಾರ್ಥಿಗಳ ಭವಿಷ್ಯ ರೂಪಿಸಲು ನಾವು ನಮ್ಮ ಶಿಕ್ಷಕರು ಮತ್ತು ಸಂಸ್ಥೆ ಸದಾ ಸಿದ್ಧವಿದೆ ಎಂದರು. ಈದಿನ ಧರ್ಮಗುರುಗಳು ನಮ್ಮ ಶಾಲೆಗೆ ಬಂದು ಮಕ್ಕಳಿಗೆ ಚಾದರ್ ನೀಡಿ ಆಶೀರ್ವಾದ ಮಾಡಿದ್ದು ನಮಗೆ ಸಂತಸ ತಂದಿದೆ ಎಂದರು.
ವೇದಿಕೆಯಲ್ಲಿ ಶಾಲೆಯ ಮುಖ್ಯಾಧ್ಯಾಪಕಿ ನರ್ಮದಾ ಹೆಗಡೆ, ಕಾರವಾರದ ಸೆಂಟ್ ಮಿಲಾಗ್ರಿಸ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ಜಾರ್ಜ್ ಫರ್ನಾಂಡೀಸ್, ನಿರ್ದೇಶಕಿ ಅನೆಸ್ಟಿನ್ ಫರ್ನಾಂಡಿಸ್, ಶಿರಸಿ ಶಾಖೆಯ ವ್ಯವಸ್ಥಾಪಕಿ ತೇಜಸ್ವಿನಿ ನಾಯ್ಕ ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಿಬ್ಬಂದಿ ನಿಖಿಲ್ ಶಾನಭಾಗ ಕಾರ್ಯಕ್ರಮ ನಿರೂಪಿಸಿದರು.
ಶಿರಸಿ ತಾಲೂಕಿನ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7
