ಅಂಕೋಲಾ: ತಾಲೂಕಿನ  ಅವರ್ಸಾದ ಮೊಬೈಲ್ ಅಂಗಡಿಯೊಂದರಲ್ಲಿ ನಿನ್ನೆ ರಾತ್ರಿ ಸುಮಾರು 12 ಗಂಟೆಗೆ ಕಳ್ಳತನ ನಡೆದಿದ್ದು, ಕಳ್ಳರಿಬ್ಬರು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ.

ಸಿದ್ಧಾರ್ಥ ನಾಯ್ಕ ಹಾಗೂ ರಮಾಕಾಂತ ಘನಶ್ಯಾಮ ನಾಯ್ಕ ಅವರ್ಸಾ ಕಳ್ಳತನ ನಡೆಸಿದ ಆರೋಪಿಗಳಾಗಿದ್ದಾರೆ. 

ಹಾರವಾಡದ ಸಂಜೀವ ನಾಯ್ಕಗೆ ಸಂಬಂಧಿಸಿದ ಮೊಬೈಲ್ ಅಂಗಡಿ ಇದಾಗಿದ್ದು  ಸುಮಾರು 1000 ರೂಪಾಯಿ ಹಣ ಹಾಗೂ 2 ಸ್ಮಾರ್ಟ್ ಫೋನ್ ಕಳ್ಳತನ ಆಗಿದೆಯೆಂದು ಮಾಲಕರು ಪೊಲೀಸ್ ದೂರು ನೀಡಿದ್ದಾರೆ. 

ಸಿದ್ಧಾರ್ಥ ನಾಯ್ಕ ಮೇಲೆ ಈ ಹಿಂದೆ ಅವರ್ಸಾದಲ್ಲಿ ನಡೆದ  ಅನೇಕ ಕಳ್ಳತನದಲ್ಲಿ ಭಾಗಿಯಾಗಿದ್ದ ಕುರಿತು ಆರೋಪವಿದೆ.

ಆಗಿದ್ದೇನು

ನಿನ್ನೆ ರಾತ್ರಿ ಸುಮಾರು 12 ಗಂಟೆಗೆ ಮೊಬೈಲ್ ಅಂಗಡಿಯ ಮೇಲ್ಛಾವಣಿ ಹಾರಿ ಒಳಗೆ ಪ್ರವೇಶಿಸಿದ ಸಿದ್ಧಾರ್ಥ ನಾಯ್ಕ ಅಂಗಡಿಯಲ್ಲಿದ್ದ 1000 ರೂಪಾಯಿ ಹಣವನ್ನು ಹಾಗೂ 2 ಸ್ಮಾರ್ಟ್ ಫೋನ್ ಗಳನ್ನು ಕದ್ದಿದ್ದಾನೆ. ಈ ಕಳ್ಳತನಕ್ಕೆ ರಮಾಕಾಂತ ಘನಶ್ಯಾಮ ನಾಯ್ಕ ಈತನು ಹೊರಗಡೆ ನಿಂತು ಸಹಾಯ ಮಾಡಿದ್ದಾನೆ. ಕಳ್ಳತನ ಮಾಡುತ್ತಿರುವ ದ್ರಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಪೊಲೀಸ್ ಪ್ರಕರಣ ದಾಖಲಾಗಿದೆ.

ಕಾರವಾರ ಟೈಮ್ಸ್ ನ್ಯೂಸ್  updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…

https://chat.whatsapp.com/HyQE3CIKWEICSXQCoirwQE