ಜೋಯಿಡಾ – ಜೋಯಿಡಾ ತಾಲೂಕಿನ ರಾಮನಗರ ಗ್ರಾಮ ಪಂಚಾಯತಗೆ ಉತ್ತರಕನ್ನಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗಾ ಎಂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾಮನಗರದಲ್ಲಿನ ಘನತ್ಯಾಜ್ಯ ಘಟಕ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕ ,ಬುದು ನೀರು ನಿರ್ವಹಣಾ ಘಟಕದ ಸ್ಥಾಪನೆಗಾಗಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ರಾಮನಗರ ಆಸ್ಪತ್ರೆಗೆ ಹಾಗೂ ,ಅಸು ,ಜಗಲಬೇಟ ಗ್ರಾಮ ಪಂಚಾಯತಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ರಾಮನಗರ ಗ್ರಾ.ಪಂ.ಅಧ್ಯಕ್ಷೆ ರೋಹಿಣಿ ಬೋಸಲೆ, ಸದಸ್ಯ ಶಿವಾಜಿ ಗೋಸಾವಿ, ಪಿ.ಡಿ,ಓ ರಾಜು ತಳವಾರ,ಜಿಲ್ಲಾ ಪಂಚಾಯತ ಇಂಜಿನಿಯರ ಇಝಾನ್ ಮಹಮದ್ , ಜೂನಿಯರ್ ಇಂಜಿನಿಯರ ಪ್ರವೀಣ ಡಿ. ಮತ್ತು ಗ್ರಾ.ಪಂ.ಸದಸ್ಯರು ಉಪಸ್ಥಿತರಿದ್ದರು.
ಜೊಯಿಡಾ/ರಾಮನಗರದ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/FwQPbtH4lkpE71sGaWxRXj
