ಅಂಕೋಲಾದ ಪ್ರಶಾಂತ ಕಿಶೋರ ನಾಯ್ಕ ಬಂಧನ

ಹೊನ್ನಾವರ : ತಾಲೂಕಿನ ಚಿಕ್ಕನಲೋಡ ವ್ಯವಸಾಯ ಸೇವಾ ಸಹಕಾರಿ ಸಂಘದ ಶೆರ‍್ಸ್ ಹಾಗೂ ಬಾಗಿಲಲ್ಲಿ ಅಳವಡಿಸಿದ್ದ ಬೀಗವನ್ನು ಮುರಿದು ಕಳ್ಳತನ ಮಾಡಿ ನಾಪತ್ತೆಯಾಗಲು ಯತ್ನಿಸಿದ್ದ ಅಂಕೋಲಾದ ಬೊಬ್ರವಾಡದ ಮೂಲದ ಆರೋಪಿಯನ್ನು ಗ್ರಾಮದ ನಾಗರಿಕರು ಹಿಡಿದು ಪೊಲೀಸರಿಗೆ ಒಪ್ಪಿದ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ.

 ಅಂಕೋಲಾದ ಬೊಬ್ರವಾಡದ ಪ್ರಶಾಂತ ಕಿಶೋರ ನಾಯ್ಕ (24) ಆರೋಪಿಯಾಗಿದ್ದು, ಯಲ್ಲಾಪುರದ ಪ್ರಸನ್ನ ಜಾಧವ ಗ್ರಾಮಸ್ಥರಿಂದ ತಪ್ಪಿಸಿಕೊಂಡ ಆರೋಪಿಯಾಗಿದ್ದಾನೆ.

 ನಡೆದದ್ದೇನು..?

ಹೊನ್ನಾವರದ ಚಿಕ್ಕನಲೋಡ ವ್ಯವಸಾಯ ಸೇವಾ ಸಹಕಾರಿ ಸಂಘದ ದಿನನಿತ್ಯದ ವ್ಯವಹಾರವನ್ನು ಮುಗಿಸಿ ಮುಖ್ಯ ಕಾರ್ಯನಿರ್ವಾಹಕ ವಸಂತ ನಾರಾಯಣ ನಾಯ್ಕ ಹಾಗೂ ಸಿಬ್ಬಂದಿಗಳು 26 ಸೆಷ್ಟಂಬರ್‌ನ ಶುಕ್ರವಾರ ಸಂಜೆ 6 ಗಂಟೆಗೆ ಸಹಕಾರಿ ಸಂಘಕ್ಕೆ ಬೀಗ ಹಾಕಿ ತೆರಳಿದ್ದರು.

 ಸೆ. 27 ರ ಶನಿವಾರ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ವ್ಯವಸಾಯ ಸೇವಾ ಸಹಕಾರಿ ಸಂಘ ಸಂಘದ ಶೆರ‍್ಸ್ ಹಾಗೂ ಬಾಗಿಲಲ್ಲಿ ಅಳವಡಿಸಿದ್ದ ಬೀಗವನ್ನು ಮುರಿದು ಒಳ ನುಗ್ಗಿನ ಆರೋಪಿತರಾದ ಅಂಕೋಲಾದ ಪ್ರಶಾಂತ ಕಿಶೋರ ನಾಯ್ಕ ಮತ್ತು ಯಲ್ಲಾಪುರದ ಪ್ರಸನ್ನ ಜಾಧವ ಕಛೇರಿಯೊಳಗಿದ್ದ ಕಪಾಟುಗಳ ಬೀಗ ಒಡೆದು, ಅವುಗಳಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಒಗೆದು, ವ್ಯವಸ್ಥಾಪಕರ ಕೋಣೆಯ ಡ್ರಾವರದಲ್ಲಿದ್ದ 5350 ರೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗುತ್ತಿರುವಾಗ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದರು.

 ಈ ವೇಳೆ ಪ್ರಶಾಂತ ಕಿಶೋರ ನಾಯ್ಕ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದರೆ, ಪ್ರಸನ್ನ ಜಾಧವ ಕೈಯಿಂದ ತಪ್ಪಿಸಿಕೊಂಡು ನಾಪತ್ತೆಯಾಗಿದ್ದಾನೆ.

ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ವಸಂತ ತಂದೆ ನಾರಾಯಣ ನಾಯ್ಕ ಪೊಲೀಸ್ ದೂರು ನೀಡಿದ್ದಾರೆ. ಹೊನ್ನಾವರ ಠಾಣೆಯ ಪಿಎಸೈ ಮಂಜೇಶ್ವರ ಚಂದಾವರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಪಿಐ ಶ್ರೀಧರ ಎಸ್.ಆರ್. ತನಿಖೆ ಕೈಗೊಂಡಿದ್ದಾರೆ.