ಜೋಯಿಡಾ -ತಾಲೂಕಿನ ನಂದಿಗದ್ದಾದಲ್ಲಿ ನೂತನ ಪಶು ಆಸ್ಪತ್ರೆಯನ್ನು ಜೋಯಿಡಾ – ಹಳಿಯಾಳ‌ ಶಾಸಕ ಆರ್.ವಿ.ದೇಶಪಾಂಡೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ‌ಮಾತನಾಡಿದ ಅವರು ತಾಲೂಕಿನಲ್ಲಿ ಸಾಕಷ್ಟು ಆಸ್ಪತ್ರೆಗಳನ್ನು ನೂತನವಾಗಿ‌ ಕಟ್ಟಲಾಗಿದೆ. ಆದರೆ ಇಲ್ಲಿನ ಕೆಲ ಆಸ್ಪತ್ರೆಗಳಿಗೆ ವೈದ್ಯರು ಇಲ್ಲದೆ ಸಮಸ್ಯೆ ಆಗಿದೆ. ತಾಲೂಕು ಅಷ್ಟೇ ಅಲ್ಲದೇ ಜಿಲ್ಲೆಯಲ್ಲಿಯೂ ವೈದ್ಯರ ಕೊರತೆ ಇದೆ. ಈ ಹಿಂದೆ ಇದ್ದ ಪಶು ಆಸ್ಪತ್ರೆ ‌ಕಟ್ಟಡ ಹಾಳಾಗಿದ್ದು ನೂತನ ಆಸ್ಪತ್ರೆಯಿಂದ ಇಲ್ಲಿನ ಜನರಿಗೆ ಅನುಕೂಲವಾಗಲಿದೆ ಎಂದರು. 

ಪೋಟೋಲಿ – ಉಳವಿ ,ಗುಂದ ರಸ್ತೆ ಹಾಳಾಗಿದ್ದು ಸರಿಪಡಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಈ ಹಿಂದೆ ಗುಂದ ,ಯರಮುಖ ಭಾಗಕ್ಕೆ ನಾನು ಬಂದಾಗ ಉತ್ತಮ ಸತ್ಕಾರ ನೀಡಿದ್ದನ್ನು ನೆನಪಿಸಿಕೊಂಡರು‌.

ಈ ಸಂದರ್ಭದಲ್ಲಿ ನಂದಿಗದ್ದಾ ಗ್ರಾ.ಪಂ.ಉಪಾಧ್ಯಕ್ಷ ಅರುಣ ದೇಸಾಯಿ, ಸದಸ್ಯೆ ದಾಕ್ಷಾಯಿಣಿ ದಾನಶೂರ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಸದಾನಂದ ದಬ್ಗಾರ, ಮಾಜಿ.ಜಿ.ಪಂ.ಸದಸ್ಯ ರಮೇಶ ನಾಯ್ಕ, ಪಶು ವೈದ್ಯಾಧಿಕಾರಿ ಡಾ ಪ್ರದೀಪ್, ಆರ್.ಎ.ಭಟ್ಟ ಇತರರು ಉಪಸ್ಥಿತರಿದ್ದರು