ಶಿರಸಿ: ಕನ್ನಡ ಸಾಹಿತ್ಯ ಪರಿಷತ್ ಶಿರಸಿ ತಾಲೂಕಾ ಘಟಕ ಉತ್ತರ ಕನ್ನಡ ಇವರ ಸಹಯೋಗದಲ್ಲಿ ನಗರದ ನೆಮ್ಮದಿ ಕಣಜದಲ್ಲಿ ದಿ ಶೇಷಗಿರಿ, ನಾರಾಯಣ ರಾವ್, ಕೇಶವೈನ್ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ ಗುರುವಾರ ನಡೆಯಿತು.
ಉಪನ್ಯಾಸ ನೀಡಿ ಮಾತನಾಡಿದ ಹಿರಿಯ ಲೇಖಕ ವಾಸುದೇವ ಶಾನಭಾಗರವರು ಅರ್ಬನ್ ಬ್ಯಾಂಕ್ ಬೆಳೆದು ಬಂದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತೆರಿಗೆ ಸಲಹೆಗಾರ ರಾಜೇಶ ದಾಖಪ್ಪ, ಕಸಾಪ ತಾಲೂಕಾ ಅದ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ, ತಾಲೂಕು ಕಸಾಪ ಪದಾಧಿಕಾರಿಗಳಾದ ವಿ.ಆರ್ ಹೆಗಡೆ ಮತ್ತಿಘಟ್ಟ, ಆರ್.ಡಿ ಹೆಗಡೆ ಆಲ್ಮನೆ, ಸದಸ್ಯರಾದ ಮಹಾದೇವ ಚಲವಾದಿ, ಕೃಷ್ಣ ಪದಕಿ, ಪುಷ್ಪಾ ನಾಯ್ಕ, ಡಿ ಬಂಗಾರಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
