ಶಿರಸಿ: ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಪ್ರಿಯಾಂಕ ಖರ್ಗೆಯವರು ಮಹಿಳೆಯರ ಮೇಲೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಪಕ್ಷಾತೀತವಾಗಿ ಖಂಡಿಸಬೇಕೆಂದು ಬಿಜೆಪಿ ಮಹಿಳಾ ಮೊರ್ಚಾ ಜಿಲ್ಲಾದ್ಯಕ್ಷೆ ಶ್ರೀಮತಿ ಶೋಭಾ ನಾಯ್ಕ ತಿಳಿಸಿದರು

ಅವರು ಶುಕ್ರವಾರ ದೀನ ದಯಾಳ ಉಪಾದ್ಯಾಯ ಸಭಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಪ್ರಿಯಾಂಕ ಅವರ ಹೇಳಿಕೆ ಮಾನವ ಕುಲಕ್ಕೆ ಶೋಭೆ ತರುವಂತದಲ್ಲ. ಅವರ ಹೇಳಿಕೆಯನ್ನು ಬಿಜೆಪಿ ಮಹಿಳಾ ಮೋರ್ಚಾ ಉಘ್ರವಾಗಿ ಖಂಡಿಸುತ್ತದೆ ಎಂದರು. 

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಶರ್ಮಿಳಾ ಮಾದನಗೇರಿ, ಪ್ರಮುಖರಾದ ಉಷಾ ಹೆಗಡೆ, ದೀಪಾ ಮಹಾಲಿಂಗಣ್ಣನವರ್, ಉಷಾ ನಾಯ್ಕ, ನಿರ್ಮಲಾ ಶೆಟ್ಟಿ ಉಪಸ್ಥಿತರಿದ್ದರು.

Attachments area