ಶಿರಸಿ: ತಾಲೂಕಿನ ಬಿಸ್ಲಕೊಪ್ಪ ಪಂಚಾಯ್ತಿಯ ಹಳ್ಳಿಗೊಪ್ಪ ಗ್ರಾಮದಲ್ಲಿ ಅಂಗನವಾಡಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಬಿಸ್ಲಕೊಪ್ಪ ಗ್ರಾ.ಪಂ ಅಧ್ಯಕ್ಷ ರಾಘು ನಾಯಕ್ ಅಂಗನವಾಡಿ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಕಟ್ಟಡ ನಿರ್ಮಿಸಿರುವ ಗುತ್ತಿಗೆದಾರ ಬಸ್ದೇವ ಲೋಪೀಸ್ ರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ. ಪಂ ಉಪಾಧ್ಯಕ್ಷ ನರೇಂದ್ರ ಶಾಸ್ತ್ರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯ ಅಧಿಕಾರಿ ದತ್ತಾತ್ರೇಯ ಭಟ್ ಹಾಗೂ ಗ್ರಾ.ಪಂ ಸದಸ್ಯರಾದ ನಾಗರಾಜ್ ನಾಯ್ಕ್, ಕರೆದೇವಿ ದೊಡ್ಡಮನೆ, ಶಶಿಕಲಾ ಬಿ ಹೆಚ್, ಎಸ್‌ಡಿಎಂಸಿ ಅಧ್ಯಕ್ಷರ ಪ್ರಶಾಂತ್ ಸೇರಿದಂತೆ ಮುಖ್ಯೋಪಾಧ್ಯಾಯರು, ಗ್ರಾಮಸ್ಥರು ಉಪಸ್ಥಿತರಿದ್ದರು
