ಜೋಯಿಡಾ – ತಾಲೂಕಿನ ಯರಮುಖ ಸೋಮೇಶ್ವರ ಸಭಾ ಭವನದಲ್ಲಿ ಗಣೇಶ ಚತುರ್ಥಿ ನಿಮಿತ್ತ ಕನ್ನಡ ಸಂಸ್ಕೃತಿ ಇಲಾಖೆ ಕಾರವಾರ, ಕೀರ್ತಿ ಮಹಿಳಾ ಮಂಡಳಿ ಗುಂದ, ಗಜಾನೋತ್ಸವ ಸಮಿತಿ ಯರಮುಖ ಇವರ ಆಶ್ರಯದಲ್ಲಿ ಯಕ್ಷಗಾನ ಮತ್ತು ಸಂಗೀತ ಭಜನಾ ಕಾರ್ಯಕ್ರಮ ನಡೆಯಿತು.
ಸ್ವಾತಿ ದೇಸಾಯಿ ನೇತೃತ್ವದಲ್ಲಿ ರಾಣಿ ಶಶಿಪ್ರಭೆ ಯಕ್ಷಗಾನ ಮತ್ತು ಸುಮಂಗಲಾ ದೇಸಾಯಿ ನೇತೃತ್ವದಲ್ಲಿ ಸಂಗೀತ ಭಜನಾ ಕಾರ್ಯಕ್ರಮ ನಡೆಯಿತು.
ಕಳೆದ ಹಲವಾರು ವರ್ಷಗಳಿಂದ ಊರಿನ ಹೆಣ್ಣು ಮಕ್ಕಳು ಸೇರಿ ಯಕ್ಷಗಾನ ಕಲೆ ಬೆಳೆಸಿಕೊಂಡು ಬರುತ್ತಿದ್ದು ಇಲ್ಲಿನ ಚಿಕ್ಕ ಮಕ್ಕಳಿಗೂ ಉತ್ತಮ ಯಕ್ಷಗಾನ ಕಲೆ ಅಭ್ಯಾಸ ಮಾಡಿಸಿದ ಯಕ್ಷಗಾನ ಭಾಗವತರಾದ ಆನಂದು ಆಗೇರ ಅಂಕೋಲಾ ಅವರಿಗೆ ಇಲ್ಲಿನ ಸಾರ್ವಜನಿಕರು ಅಭಿನಂದಿಸಿದರು. ಊರಿನ ಹೆಣ್ಣು ಮಕ್ಕಳು ಯಕ್ಷಗಾನ ಮಾಡುತ್ತಿರುವುದು ತಾಲೂಕಿಗೆ ಕೀರ್ತಿ ತಂದಿದೆ ಎಂಬುದು ಸಾರ್ವಜನಿಕರ ಮಾತಾಗಿದೆ.
