ಅಂಕೋಲಾ : ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನಾಗರ ಹಾವು ಕಚ್ಚಿ ರೈತನೊರ್ವ ಮೃತಪಟ್ಟ ಘಟನೆ ತಾಲೂಕಿನ ಹೆಗ್ರೆಯಲ್ಲಿ ನಡೆದಿದೆ.
ಹೆಗ್ರೆಯ ಮಾದೇವ ನಾರಾಯಣ ಗೌಡ ( 47) ಮೃತಪಟ್ಟವ.
ಮೃತ ಮಾದೇವ ಗೌಡ ಅವರಿಗೆ ಭಾನುವಾರ ಸಂಜೆ ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ಹಾವು ಕಚ್ಚಿತ್ತು. ನಿತ್ರಾಣಗೊಂಡಿದ್ದ ಇತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕುಮಟಾದ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ರಾತ್ರಿ 10-30 ರ ಸುಮಾರಿಗೆ ದಾರಿ ಮದ್ಯೆ ಹಿತ್ತಲಮಕ್ಕಿ ಬಳಿ ಮೃತಪಟ್ಟಿದ್ದಾನೆ ಎಂದು ಮೃತನ ಅಣ್ಣ ವಿನಾಯಕ ನಾರಾಯಣ ಗೌಡ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾನೆ.
ಮೃತರು ಪತ್ನಿ ಮಹಾದೇವಿ ಗೌಡ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ತಾಪಂ ಮಾಜಿ ಅಧ್ಯಕ್ಷೆ ಸುಜಾತಾ ಗಾಂವಕರ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದು ಸಂತಾಪ ವ್ಯಕ್ತಪಡಿಸಿದ್ದಾರೆ.