ಅಂಕೋಲಾ: ತಾಲೂಕಿನ ಅವರ್ಸಾ ಗ್ರಾಮದ  ದಯಾನಂದ ಪುಂಡಲೀಕ ಪಾಲನಕರ್ (70) ರವಿವಾರ 4 ಸೆಪ್ಟೆಂಬರ್ 2022 ರಂದು ಹೃದಯಾಘಾತದಿಂದ  ತಮ್ಮ ಸ್ವ ಗೃಹದಲ್ಲಿ ನಿಧನರಾದರು. ಮೃತರು ಪತ್ನಿ,  ಇಬ್ಬರು ಪುತ್ರರು ಹಾಗೂ ಓರ್ವ  ಪುತ್ರಿ ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ. 

ಮೃತರ ನಿಧನಕ್ಕೆ ದೈವಜ್ಞ ಬ್ರಾಹ್ಮಣ  ಸಮಾಜದ ಗುರುಗಳಾದ ಶ್ರೀ ಶ್ರೀ  ಸಚ್ಚಿದಾನಂದ ಸ್ವಾಮೀಜಿ ಕರ್ಕಿಮಠ  ಕಂಬನಿ ಮಿಡಿದಿದ್ದಾರೆ. 

 ಶ್ರೀ ಕಾತ್ಯಾಯನಿ ಹೈಸ್ಕೂಲಿನ ಆಡಳಿತ ಮಂಡಳಿಯ ಮಾಜಿ ಸದಸ್ಯರಾಗಿದ್ದ ಇವರು ಅನೇಕ ಶೈಕ್ಷಣಿಕ ಸಲಹಾ ಸೂಚನೆಗಳನ್ನು ನೀಡಿ ಶಾಲೆಯ ಅಭಿವೃದ್ಧಿಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.  ಅನೇಕ ಸಂಘ ಸಂಸ್ಥೆಯ ಸದಸ್ಯರಾಗಿ ಸಾಂಸ್ಕೃತಿಕ ,  ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.  ಶ್ರೀ ಗಜಾನನ ವಿಠ್ಠಲ ಭಜನಾಮಂಡಳಿಯ ಹಿರಿಯಕಾರರಾದ  ಇವರು ಭಜನಾ ಕಲಾಕಾರರಾಗಿ ಹೆಸರುವಾಸಿಯಾಗಿದ್ದರು.  

 ಕ್ರಿಯಾಶೀಲ ವ್ಯಕ್ತಿತ್ವದ  ಪಾಲನಕರ್ ಸದಾ ಸಮಾಜಮುಖಿ ಕಾರ್ಯಗಳಲ್ಲಿ ಚಟುವಟಿಕೆಯಿಂದ ಕೂಡಿರುತ್ತಿದ್ದರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುತ್ತಿದ್ದ ಇವರು  ದೇವಸ್ಥಾನದ ಕಮಿಟಿಗೂ ಸಹ  ಅಪಾರ ಕೊಡುಗೆ ನೀಡಿದ್ದಾರೆ.

ಮೃತರ ನಿಧನಕ್ಕೆ ದೈವಜ್ಞ ಬ್ರಾಹ್ಮಣ ಸಮಾಜ ಅವರ್ಸಾ, ಶ್ರೀ ಗಜಾನನ ವಿಠ್ಠಲ ಭಜನಾ ಮಂಡಳಿ ಅಂಕೋಲಾ, ಶ್ರೀ ಗಣಪತಿ ಭಜನಾ ಮಂಡಳಿ ಹಾಗೂ ಊರಿನ ನಾಗರಿಕರು, ಬಂಧುಗಳು ಸಂತಾಪ ಸೂಚಿಸಿದ್ದಾರೆ.