*ರಾಘು ಕಾಕರಮಠ.
ಅಂಕೋಲಾ : ಪ್ರೀತಿಯ ಮಾಯೆಯಿಂದ ಮೋಸ ಹೋಗಿ, ಓರಿಸ್ಸಾ ಸೇರಿಕೊಂಡಿದ್ದ ಯುವತಿಯನ್ನು ತಮ್ಮ ಪ್ರಾಣದ ಹಂಗನ್ನು ತೊರೆದು ರಕ್ಷಿಸಿ ಕರೆ ತಂದ ಪಿಎಸೈ ಮಹಾಂತೇಶ ಹಾಗೂ ಸಿಬ್ಬಂದಿ ಶ್ರೀಕಾಂತ ಕಟಬರ ಅವರನ್ನು ಅಂಕೋಲಾದ ನಾಗರಿಕರು ಅಭಿನಂಧಿಸಿ, ಗೌರವಿಸಿದರು.
ಸಂಜಯ ನಾಯ್ಕ ಭಾವಿಕೇರಿ ಮಾತನಾಡಿ ಪಿಎಸೈ ಮಹಾಂತೇಶ ಹಾಗೂ ಸಿಬ್ಬಂದಿ ಶ್ರೀಕಾಂತ ಕಟಬರ ಅವರ ವಿಶೇಷ ಸೇವೆಯು ಅಂಕೋಲೆಯ ಒರ್ವ ಬಡ ಕುಟುಂಬದಿಂದ ಬಂದ ಯುವತಿಗೆ ಪುನಜನ್ಮ ನೀಡಿದಂತಾಗಿದೆ. ಸೀನಿಮೀಯ ರೀತಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ಪಿಎಸೈ ಮಹಾಂತೇಶ ಅವರ ತಂಡ ಯುವತಿಯನ್ನು ರಕ್ಷಣೆ ಮಾಡಿರುವದು ಹರ್ಷ ತಂದಿದೆ ಎಂದರು.
ಯುವ ಪ್ರಮುಖ ಸಂತೋಷ ಭಾಸ್ಕರ ನಾರ್ವೆಕರ ಮಾತನಾಡಿ, 3600 ಕೀಮೀ ಕ್ರಮಿಸಿ, ಕುಖ್ಯಾತ ಪ್ರದೇಶದಿಂದ ಯುವತಿಯನ್ನು ರಕ್ಷಣೆ ಮಾಡಿ ತಂದಿರುವದಕ್ಕೆ ವಿಶೇಷವಾಗಿ ಅಂಕೋಲಾ ಪೊಲೀಸ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವಿಶೇಷವಾಗಿ ಕತಜ್ಞತೆ ಸಮರ್ಪಿಸುತ್ತೇವೆ ಎಂದರು.
ಸಹಕಾರಿ ಧುರೀಣ ಪ್ರಶಾಂತ ನಾಯ್ಕ ಮಾತನಾಡಿ, ಅಂಕೋಲಾ ಪೊಲೀಸರ ಕಾರ್ಯದಕ್ಷತೆಯ ಫಲವಾಗಿ ಯುವತಿ ನಿರಾತಂಕವಾಗಿ ಮನೆಗೆ ಸೇರುವಂತಾಗಿದೆ. ಅಂಕೋಲಾದ ಎಲ್ಲಾ ಜನತೆಯ ಫಲವಾಘಿ ನಿಮಗೆ ಅಭಿನಂಧಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ನಿಲೇಶ ನಾಯ್ಕ, ನಾಗರಾಜ್ ಖಾರ್ವಿ, ಅನಿಲ ಮಹಾಲೆ. ಕನಸಿಗದ್ದೆ, ಧೀರಜ್ ಬಾನಾವಳಿಕರ. ಬೇಲೆಕೇರಿ, ಅನಿಲ ಮಹಾಲೆ ಕನಸಿಗದ್ದೆ, ಸಂದೀಪ ಗಾಂವಕರ, ಪ್ರವೀಣ ನಾಯ್ಕ, ನಾಗರಾಜ್ ಐಗಳ, ಹೂವಾ ಖಂಡೇಕರ, ಬಾಲಕೃಷ್ಣ ನಾಯ್ಕ. ಬೊಬ್ರವಾಡ, ಲಕ್ಷ್ಮೀಕಾಂತ ನಾಯ್ಕ, ದಾಮೋದರ ರಾಯ್ಕರ, ಸುಬ್ರಮಣ್ಯ ಗಾಂವಕರ, ಕಿಶೋರ ಕೆ. ದೇವಧರ, ಪ್ರಶಾಂತ ಪಟಗಾರ, ನರೇಶ ನಾಯ್ಕ. ಅವರ್ಸಾ, ನಿಶಾನ್ ಶೇಣ್ವಿ, ಶಾಂತಾ ಹರಿಕಂತ್ರ, ವೆಂಕಟೇಶ ದುರ್ಗೆಕರ, ರಜತ್ ನಾಯ್ಕ, ಗೌರೀಶ ನಾಯ್ಕ, ಮೂರ್ತಿ ಶಶಿಕಾಂತ ನಾಯ್ಕ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಕಾರವಾರ ಟೈಮ್ಸ್ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/HyQE3CIKWEICSXQCoirwQE