TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಕೋಳಿ ಅಂಕದ ಮೇಲೆ ಪೊಲೀಸ್ ದಾಳಿ : ಐವರು ಆರೋಪಿಗಳ ಬಂಧನ

Nov 25, 2024 | ಅಪರಾಧ |

ಕೋಳಿ ಅಂಕದ ಮೇಲೆ ಪೊಲೀಸ್ ದಾಳಿ : ಐವರು ಆರೋಪಿಗಳ ಬಂಧನ

ಕೋಳಿ ಅಂಕದ ಮೇಲೆ ಪೊಲೀಸ್ ದಾಳಿ : ಐವರು ಆರೋಪಿಗಳ ಬಂಧನ

ಪ್ರಕರಣದಿಂದ ಸೇಫ್ ಕಮಲಣ್ಣ

ಗೋಕರ್ಣ : ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ವೇಳೆ ಗೋಕರ್ಣದ ಪೊಲೀಸರು ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿ, ಜೂಜಾಟಕ್ಕೆ ಬಳಸಿದ್ದ ಪರಿಕರ ಮತ್ತು ಬೈಕ್‌ಗಳನ್ನು ವಶ ಪಡಿಸಿಕೊಂಡಿರುವ ಘಟನೆ ಪತಂಗ್ ಬೀಚ್ ರೆಸಾರ್ಟ ಹಿಂಬದಿಯ ಸಮುದ್ರದ ದಡದ ಪ್ರದೇಶದಲ್ಲಿ ನಡೆದಿದೆ.

 ಹೊನ್ನಾವರ ಕೋಳಿಗದ್ದೆಯ ಕವಲಕ್ಕಿಯ ನಿವಾಸಿ ವಿನಾಯಕ ರಾಮಾ ನಾಯ್ಕ, ಪ್ರಾಯ:- 38 ವರ್ಷ, ಕುಮಟಾದ ಶಶಿಹಿತ್ತಲಿನ ಕೋಳಿಗದ್ದೆಯ ನಿವಾಸಿ ಈಶ್ವರ ಸುಬ್ರಾಯ ಭಂಡಾರಿ, ಅಂಕೋಲಾದ ಹೊನ್ನೇಕೇರಿಯ ಸಂಜಯ ರಾಕು ನಾಯ್ಕ, ಅಂಕೋಲಾದ ಕೇಣಿಯ ಪ್ರಮೋದ ಗಣಪತಿ ಬಂಟ, ಅಂಕೋಲಾದ ಹೊನ್ನೇಕೇರಿಯ ಗೌರೀಶ ಸುರೇಶ ನಾಯ್ಕ ಘಟನಾ ಸ್ಥಳದಲ್ಲಿ ಸಿಕ್ಕ ಬಂಧಿತ ಆರೋಪಿಗಳಾಗಿದ್ದಾರೆ.

 ಪೊಲೀಸರು 8 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣದಲ್ಲಿ ಬಾಗಿಯಾದ ಇನ್ನಿತರ ಆರೋಪಿಗಳ ಪತ್ತಗೆ ಬಲೆ ಬೀಸಿದ್ದಾರೆ. 9940 ರೂ ನಗದು ಹಾಗೂ 3 ಅಂಕಕ್ಕೆ ಬಳಸಿದ ಹುಂಜಗಳು, 2 ಕೋಳಿ ಕತ್ತಿಯನ್ನು ವಶಪಡಿಸಿಕೊಂಡಿದ್ದಾರೆ.

ಕೋಳಿ ಅಂಕ ನಡೆಸುತ್ತಿದ್ದ ಮೂಲ ಆರೋಪಿ ಕಮಲಣ್ಣನನ್ನು ಪ್ರಕರಣದಿಂದ ಕೈ ಬಿಟ್ಟು ಬಲಿ ಬಕ್ರಾ ಅಂಕೋಲಾ ಹಾಗೂ ಕುಮಟಾ, ಹೊನ್ನಾವರಕಾ ಚೊಕ್ರಾ ಎನ್ನುವಂತೆ ಇತರೆ ಆರೋಪಿಗಳನ್ನು ಬಂಧಿಸಿ ಕಾನೂನಿನ ಕುಣಿಕೆಗೆ ಸೇರಿಸಿರುವದು ಕೂಡ ಆರೋಪಗಳು ಕೂಡ ಕೇಳಿ ಬಂದಿದೆ.

 ಸಿಪಿಐ ವಸಂತ ಆಚಾರಿ ನೇತ್ರತ್ವದಲ್ಲಿ ದಾಳಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.

Share:

Rate:

Previousಶಾಸಕ ಸತೀಶ ಸೈಲಗೆ ಬಿಗ್  ರಿಲೀಫ್ : ಮುಡಿ ನೀಡಿ ಹರಕೆ ಒಪ್ಪಿಸಿದ ಅಭಿಮಾನಿ
Next32 ವರ್ಷದ ನಂತರ ವಿಚ್ಛೇಧನ ಕೇಳಲು ಮುಂದಾದ ಪತ್ನಿ

Related Posts

ಹೊಸಕಂಬಿ  ಬಳಿ ಅಕ್ರಮವಾಗಿ ಡಿಸೈಲ ಇಳಿಸುವ ವಿಚಾರದಲ್ಲಿ ದಿನಕ್ಕೊಂದು ಗಲಾಟೆ

ಹೊಸಕಂಬಿ ಬಳಿ ಅಕ್ರಮವಾಗಿ ಡಿಸೈಲ ಇಳಿಸುವ ವಿಚಾರದಲ್ಲಿ ದಿನಕ್ಕೊಂದು ಗಲಾಟೆ

December 18, 2024

ದೇವರ ಬೃಹತ ಮೂರ್ತಿಯನ್ನೆ ಕಯ್ದೊಯ್ದ ಭೂಪ್:

ದೇವರ ಬೃಹತ ಮೂರ್ತಿಯನ್ನೆ ಕಯ್ದೊಯ್ದ ಭೂಪ್:

February 1, 2024

ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿದ ಯುವಕರ ತಂಡ

ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿದ ಯುವಕರ ತಂಡ

May 30, 2024

ಮಾನಭಂಗಕ್ಕೆ ಪ್ರಯತ್ನ ಪ್ರಕರಣಕ್ಕೆತಿರವು : ಬಿಸಿಯೂಟದ ಅಡುಗೆಯವರ ನೇಮಕಾತಿ ವಿಚಾರಕ್ಕೆ ನನ್ನ ಮೇಲೆ ಮಾರಣಾಂತಿಕ ಹಲ್ಲೆ : ದೂರುದಾಖಲು

ಮಾನಭಂಗಕ್ಕೆ ಪ್ರಯತ್ನ ಪ್ರಕರಣಕ್ಕೆತಿರವು : ಬಿಸಿಯೂಟದ ಅಡುಗೆಯವರ ನೇಮಕಾತಿ ವಿಚಾರಕ್ಕೆ ನನ್ನ ಮೇಲೆ ಮಾರಣಾಂತಿಕ ಹಲ್ಲೆ : ದೂರುದಾಖಲು

July 1, 2022

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಇಂದು ಅಂಕೋಲಾಕ್ಕೆ ಆಗಮಿಸಿ ಕಣಕಣೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿರುವ ಗೋಪಾಲಕೃಷ್ಣ ನಾಯಕ
    ಇಂದು ಅಂಕೋಲಾಕ್ಕೆ ಆಗಮಿಸಿ ಕಣಕಣೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿರುವ ಗೋಪಾಲಕೃಷ್ಣ ನಾಯಕ
  • ಹಾಡು ಹಗಲೇ ಕಾಂಗ್ರೆಸ್ ಮುಖಂಡ ಗೋಪಾಲ ಕೃಷ್ಣ ನಾಯಕ ಮೇಲೆ ಕೊಲೆ ಯತ್ನ: ಚಾಕುವಿನಿಂದ ಇರಿದು ಪರಾರಿಯಾದ ಗ್ಯಾಂಗ್
    ಹಾಡು ಹಗಲೇ ಕಾಂಗ್ರೆಸ್ ಮುಖಂಡ ಗೋಪಾಲ ಕೃಷ್ಣ ನಾಯಕ ಮೇಲೆ ಕೊಲೆ ಯತ್ನ: ಚಾಕುವಿನಿಂದ ಇರಿದು ಪರಾರಿಯಾದ ಗ್ಯಾಂಗ್
  • ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
    ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
  • ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
    ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
  • ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು
    ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy