ಜೀವಜಲಕ್ಕಾಗಿ ಜೀವದ ಹಂಗು ತೊರದು ಬಾವಿನೀರು ಸೇದುವ ಜನರು
ಅಂಕೋಲಾ: ತಾಲೂಕಿನ ಅವರ್ಸಾ ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಹರಿಜನಕೇರಿಯಲ್ಲಿರುವ ಸಾರ್ವಜನಿಕ ಬಾವಿಯೊಂದು ತುಂಬಾ ಹಳೆಯದಾಗಿದ್ದು ಕುಸಿಯುವ ಸ್ಥಿತಿಯನ್ನು ತಲುಪಿದೆ. ಇಲ್ಲಿನ ಜನರಿಗೆ ಈ ಬಾವಿಯು ಪ್ರದಾನ ಜಲಮೂಲವಾಗಿದ್ದು, ಆಗೋ ಈಗೋ ಎಂಬ ಬಾವಿಯಲ್ಲಿಯೇ ಜನರು ಪ್ರಾಣಸಂಕಟದಲ್ಲಿ ನೀರು ಸೇದುವಂತಹ ಸನ್ನಿವೇಶ ಸೃಷ್ಟಿಯಾಗಿದೆ.
ಅವರ್ಸಾದ ಹರಿಜನಕೇರಿಯಲ್ಲಿರುವ ಸಾರ್ವಜನಿಕ ಬಾವಿಯೊಂದು ತುಂಬಾ ಹಳೆಯದಾಗಿದ್ದು ಕುಸಿಯುವ ಭೀತಿಯನ್ನು ಎದುರಿಸುತ್ತಿದೆ. ಕಲ್ಲಿನಿಂದ ಕಟ್ಟಲ್ಪಟ್ಟಿರುವ ಈ ಬಾವಿಯು ಜೀರ್ಣಾವಸ್ಥೆ ತಲುಪಿದ್ದು ಇಂದೋ ನಾಳೆಯೋ ಎಂಬ ಸ್ಥಿತಿಯಲ್ಲಿದೆ. ಪ್ರಸ್ತುತ ಬಾವಿಯ ಅಂತರ್ಜಲ ಮಟ್ಟವೂ ಕ್ಷೀಣಿಸಿದ್ದು ಮಳೆಯ ನೀರನ್ನೇ ಆಧಾರವಾಗಿ ಹೊಂದಿದೆ. ಆದರೆ ಉಳಿದ ದಿನಗಳಲ್ಲಿ ಬಾವಿಯ ನೀರು ಕಡಿಮೆಯಾಗುತ್ತಿದ್ದು ಬೇಸಿಗೆಯಲ್ಲಿ ನೀರು ಬಾವಿಯಿಂದ ಆವಿಯಾಗುತ್ತದೆ. ಸುಮಾರು ೫೦ ಕ್ಕೂ ಹೆಚ್ಚಿನ ಕುಟುಂಬಗಳಿಗೆ ಈ ಜಲಮೂಲವೇ ಪ್ರದಾನವಾಗಿದ್ದು ಸುಮಾರು ೧೦೦ ವರ್ಷಗಳಿಂದಲೂ ಈ ಭಾಗದ ಜನರಿಗೆ ನೀರಿನಾಸರೆಯನ್ನು ನೀಡುತ್ತಾ ಬಂದಿದೆ.
ಇಲ್ಲಿರುವ ನಾಲ್ಕೈದು ನಲ್ಲಿಗಳು ವಾರಕ್ಕೆ ಮೂರು ಬಾರಿ ನೀರು ಪೂರೈಸಿದರೂ ತದನಂತರದಲ್ಲಿ ಬೇಸಿಗೆಯ ಮುನ್ನವೇ ನೀರಿನ ಹಾಹಾಕಾರ ಶುರುವಾಗುತ್ತದೆ. ಕುಸಿಯುವ ಸ್ಥಿತಿಯಲ್ಲಿರುವ ಸಾರ್ವಜನಿಕ ಬಾವಿಯನ್ನು ಆದಷ್ಟು ಬೇಗ ಸರಿಪಡಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಬೇಕೆಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ
ಕಾರವಾರ ಟೈಮ್ಸ್ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/HyQE3CIKWEICSXQCoirwQE
