ವರದಿ : ಅಣ್ಣಪ್ಪ ನಾಯ್ಕ. ಬಗ್ಗೋಣ.

ಕುಮಟಾ : ಪಟ್ಟಣದಲ್ಲಿ ನಮೋ ಬ್ರಿಗೇಡ್ 2.0 ಪೂರ್ವಬಾವಿ ಸಭೆಯು ಯಶಸ್ವಿಯಾಗಿ ಸಂಪನ್ನಗೊಂಡಿತು.

ಮೋದಿಯವರನ್ನು ಇನ್ನೊಮ್ಮೆ ಪ್ರಧಾನ ಮಂತ್ರಿಯಾಗಿ ನೋಡುವ ಕನಸನ್ನು ಹೊತ್ತ ನಮೋ ಬ್ರಿಗೇಡ್ 2.0 ಸಂಘಟನೆಯ ರೂಪರೇಷೆಯನ್ನು ಹಾಗೂ ಕಾರ್ಯ ಚಟುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ಚಕ್ರವರ್ತಿ ಸೂಲಿಬೆಲೆಯವರು ಹಂಚಿಕೊಂಡರು.

ಉತ್ತರಕನ್ನಡದ ಬೇರೆ ಬೇರೆ ತಾಲೂಕಿನಿಂದ ಬಂದಂತಹ ಮೋದಿಯವರ ಅಭಿಮಾನಿಗಳು ಅತಿ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡರು. 

ಮುಂದಿನ ದಿನದಲ್ಲಿ ಎಲ್ಲಾ ತಾಲೂಕು ಹಾಗೂ ಹಳ್ಳಿಗಳಲ್ಲಿ ನಮೋ ಬ್ರಿಗೇಡ್ ಕಾರ್ಯಕರ್ತರನ್ನು ಜೋಡಿಸಿ ಮನೆ ಮನೆಗೆ ಮೋದಿಯವರ ಬಗ್ಗೆ ತಿಳಿಸುವ ಕೆಲಸ ಮಾಡಲು ನಿರ್ಧರಿಸಲಾಯಿತು.

ನಮೋ ಬ್ರಿಗೇಡ್ 2.0 ಸಂಘಟನೆಯ ಸೇರಿಕೊಳ್ಳಲು ಉತ್ಸುಕರಾಗಿದ್ದರೆ ಮೋ: 7975160668 ಅಥವಾ 9900979537  ಈ ನಂಬರಗಳಿಗೆ ಸಂಪರ್ಕಿಸಬಹುದಾಗಿದೆ.