TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಬಾಗಿಲು ತೆರೆದುಕೊಂಡೆ ಬೆತ್ತಲೆ ಸ್ನಾನ ಮಾಡುತ್ತಿದ್ದ ಭೂಪನಿಗೆ ಬಿತ್ತು ಎಫ್.ಐ.ಆರ್.

Feb 4, 2024 | ಅಪರಾಧ, ವಿಶೇಷ |

ಬಾಗಿಲು ತೆರೆದುಕೊಂಡೆ ಬೆತ್ತಲೆ ಸ್ನಾನ ಮಾಡುತ್ತಿದ್ದ ಭೂಪನಿಗೆ ಬಿತ್ತು ಎಫ್.ಐ.ಆರ್.

ವರದಿ : ದಿನಕರ ನಾಯ್ಕ. ಅಲಗೇರಿ.

ಅಂಕೋಲಾ: ಸಾಮಾನ್ಯವಾಗಿ ಹುಡುಗರಾಗಲಿ ಹುಡುಗಿಯರಾಗಲಿ ಬಾಗಿಲು ಹಾಕಿಕೊಂಡು ಕನಿಷ್ಟ ಉಡುಪನ್ನಾದರೂ ಧರಿಸಿ ಸ್ನಾನ ಮಾಡುವುದು ಮರ್ಯಾದೆ. ಅದರೆ ಇಲ್ಲೊಬ್ಬ ಅಂತರ ಪಿಶಾಚಿ ಅತ್ತ ಬಾಗಿಲನ್ನೂ ಹಾಕದೆ ಇತ್ತ ಬಟ್ಟೆಯನ್ನು ಹಾಕದೆ ಬೆತ್ತಲೆಯಾಗಿ ಸ್ನಾನ ಮಾಡುತ್ತಿದ್ದ. ಬಾಗಿಲು ಹಾಕಿ ಸ್ನಾನ ಮಾಡು ಎಂದು ಹೇಳಿದ್ದಕ್ಕೆ ತನ್ನ ತಮ್ಮನ ಹೆಂಡತಿಯನ್ನೇ ಬೈದು ಎಳೆದಾಡಿದ ಭಾವನ ಮೇಲೆ ಪೊಲೀಸರು ಎಫ್.ಐ.ಆರ್. ದಾಖಲಿಸಿದ್ದಾರೆ.

ತಾಲೂಕಿನ ಕಾಕರಮಠದ ಇಸಾಕ್ ಅಹಮ್ಮದ ಶೇಖ (45) ತನ್ನ ತಮ್ಮನ ಹೆಂಡತಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದು, ನೊಂದ ಮಹಿಳೆ ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಎಫ್.ಐ.ಆರ್. ನಲ್ಲಿ ಏನಿದೆ.. ?

38 ರ ಪ್ರಾಯದ ಈ ಮಹಿಳೆಯು ತಾಲೂಕಿನ ಕಾಕರಮಠದಲ್ಲಿ ಕುಟುಂಬದೊAದಿಗೆ ವಾಸವಾಗಿದ್ದು, ಕಳೆದ 29 ಜನವರಿ 2024 ರಂದು ಮದ್ಯಾಹ್ನ 1 ಗಂಟೆಗೆ ಗಂಡನ ಅಣ್ಣ ಇಸಾಕ್ ಅಹ್ಮದ ಶೇಖ ಈತ ತನ್ನ ತಮ್ಮನ ಹೆಂಡತಿ ಅಡಿಗೆ ಕೋಣೆಯಲ್ಲಿ ಅಡುಗೆ ಮಾಡುವಾಗ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಾತರೂಮಿನಲ್ಲಿ ಬಾಗಿಲು ಹಾಕದೆ ಬೆತ್ತಲೆಯಾಗಿ ಸ್ನಾನ ಮಾಡುತ್ತಿದ್ದ. ಇತನ ಕಾಣಬಾರದ ರೂಪ ಕಂಡ ಈಕೆ ಬಾಗಿಲು ಹಾಕಿಕೊಂಡು ಸ್ನಾನ ಮಾಡು ಎಂದು ಹೇಳಿದ್ದಾಳೆ.

 ಇಸಾಕ್ ಶೇಖ ಬಟ್ಟೆ ಹಾಕಿಕೊಂಡು ಬಾತರೂಮಿನಿಂದ ಹೊರ ಬಂದು, ನಾನು ಬೆತ್ತಲೆಯಾದರೂ ಸ್ನಾನ ಮಾಡುತ್ತೇನೆ, ಬಟ್ಟೆ ಹಾಕಿಕೊಂಡಾದರೂ ಸ್ನಾನ ಮಾಡುತ್ತೇನೆ ಅದನ್ನು ಕೇಳಲು ನೀನು ಯಾರು..? ಎಂದು ಅವಾಚ್ಯವಾಗಿ ಬೈದು ಕೈ ಹಿಡಿದು ತಿರುಗಿಸಿ, ಮೈ ಮೇಲಿದ್ದ ಚೂಡಿದಾರದ ವೇಲನ್ನು ಎಳೆದು ಅವಮಾನ ಪಡಿಸುತ್ತಿರುವಾಗ, ಗಂಡನ ತಮ್ಮ ಮೋಸಿನ ಶೇಖ ಬಂದು ಜಗಳ ಬಿಡಿಸಿದ್ದಾನೆ. ಆಗ ಈ ದಿವಸ ನೀನು ಬಚಾವಾದೆ ಇನ್ನೊಮ್ಮೆ ಸಿಕ್ಕರೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲ ಅಂತ ಜೀವ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.

 ಆರೋಪಿ ಇಸಾಕ್ ಅಹಮ್ಮದ ಶೇಖ ಅವರ ವಿರುದ್ಧ ಐಪಿಸಿ 506, 504, 323, 354 ಕಲಂ ಅಡಿಯಲ್ಲಿ ಪಿಎಸೈ ಉದ್ದಪ್ಪ ಧರೆಪ್ಪನವರ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.

Share:

Rate:

Previousಶಿಕ್ಷಣ ಪ್ರೇಮಿ ಜಗಧೀಶ ಮಾಸ್ತರ ಇನ್ನಿಲ್ಲ
Nextಕೇಣಿ ಕ್ರಾಸ್‌ನಲ್ಲಿ ಮಟ್ಕಾ ಆಡಿಸುತ್ತಿದ್ದವನ ಬಂಧನ

Related Posts

ಅಪಘಾತದಲ್ಲಿ ಕಾಲು ಕಳೆದುಕೊಂಡ ಚಾಲಕನಿಗೆ ನೆರವಾದ  ಸಹೃದಯಿಗಳು

ಅಪಘಾತದಲ್ಲಿ ಕಾಲು ಕಳೆದುಕೊಂಡ ಚಾಲಕನಿಗೆ ನೆರವಾದ ಸಹೃದಯಿಗಳು

August 16, 2023

ಹೆಗ್ಗಾರದಲ್ಲಿ  ಮುಕ್ತವಾಗಿ ತೆರೆದುಕೊಂಡ ಅಕ್ರಮವಾಗಿ ಡಿಸೈಲ ಹಾಗೂ ಪೆಟ್ರೋಲ ಇಳಿಸುವ ದಂಧೆ..?

ಹೆಗ್ಗಾರದಲ್ಲಿ ಮುಕ್ತವಾಗಿ ತೆರೆದುಕೊಂಡ ಅಕ್ರಮವಾಗಿ ಡಿಸೈಲ ಹಾಗೂ ಪೆಟ್ರೋಲ ಇಳಿಸುವ ದಂಧೆ..?

February 24, 2024

ನಿರ್ಗಮಿತ ಜಿಲ್ಲಾಧಿಕಾರಿಗೆ ಜನಶಕ್ತಿ ಸನ್ಮಾನ

ನಿರ್ಗಮಿತ ಜಿಲ್ಲಾಧಿಕಾರಿಗೆ ಜನಶಕ್ತಿ ಸನ್ಮಾನ

August 2, 2023

ಸಿಬಿಐ ಅಧಿಕಾರಿ ಎಂದು ಹೇಳಿ ತಮಾಷೆ ಮಾಡಲು ಹೋಗಿ ಇಕ್ಕಟ್ಟಿಗೆ ಸಿಲುಕಿಕೊಂಡನೆ ಹೊಸ್ಕೇರಿಯ ರಾಘವ ನಾಯಕ..?

ಸಿಬಿಐ ಅಧಿಕಾರಿ ಎಂದು ಹೇಳಿ ತಮಾಷೆ ಮಾಡಲು ಹೋಗಿ ಇಕ್ಕಟ್ಟಿಗೆ ಸಿಲುಕಿಕೊಂಡನೆ ಹೊಸ್ಕೇರಿಯ ರಾಘವ ನಾಯಕ..?

November 29, 2023

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಇಂದು ಅಂಕೋಲಾಕ್ಕೆ ಆಗಮಿಸಿ ಕಣಕಣೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿರುವ ಗೋಪಾಲಕೃಷ್ಣ ನಾಯಕ
    ಇಂದು ಅಂಕೋಲಾಕ್ಕೆ ಆಗಮಿಸಿ ಕಣಕಣೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿರುವ ಗೋಪಾಲಕೃಷ್ಣ ನಾಯಕ
  • ಹಾಡು ಹಗಲೇ ಕಾಂಗ್ರೆಸ್ ಮುಖಂಡ ಗೋಪಾಲ ಕೃಷ್ಣ ನಾಯಕ ಮೇಲೆ ಕೊಲೆ ಯತ್ನ: ಚಾಕುವಿನಿಂದ ಇರಿದು ಪರಾರಿಯಾದ ಗ್ಯಾಂಗ್
    ಹಾಡು ಹಗಲೇ ಕಾಂಗ್ರೆಸ್ ಮುಖಂಡ ಗೋಪಾಲ ಕೃಷ್ಣ ನಾಯಕ ಮೇಲೆ ಕೊಲೆ ಯತ್ನ: ಚಾಕುವಿನಿಂದ ಇರಿದು ಪರಾರಿಯಾದ ಗ್ಯಾಂಗ್
  • ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
    ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
  • ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
    ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
  • ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು
    ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy