ಕಾರವಾರ: ಇತ್ತೀಚಿಗೆ ಮುದಗಾದ ವೃದ್ಧ ದಂಪತಿಗೆ ಸೊಸೆಯಿಂದ ಜೀವನಾಂಶ ಕೊಡಿಸಿ ನೆರವಾದ ಉಪವಿಭಾಗಾಧಿಕಾರಿ ಜಯಲಕ್ಷಿö್ಮÃ ರಾಯಕೋಡ್ ಅವರಿಗೆ ಜನಶಕ್ತಿ ವೇದಿಕೆಯಿಂದ ಸನ್ಮಾನಿಸಿ ಗೌರವಿಸಲಾಯಿತು.

ನೌಕಾನೆಲೆಯಲ್ಲಿ ನೌಕರನಾಗಿದ್ದ ಮುದಗಾದ ಯುವಕನನ್ನ ಮದುವೆಯಾಗಿದ್ದ ಯುವತಿಯೋರ್ವಳು ಆತ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಅನುಕಂಪದ ಆಧಾರದ ಮೇಲೆ ಸಿಕ್ಕ ನೌಕರಿ ಅಲಂಕರಿಸಿ, ನಂತರ ವೃದ್ಧ ಅತ್ತೆ- ಮಾವನ ತೊರೆದು ತವರು ಮನೆ ಸೇರಿದ್ದಳು. ಅಲ್ಲದೇ ಆತನ ಪಿಂಚಣಿಯನ್ನೂ ತಾನೇ ಪಡೆದು, ಮಾವನ ಕುಟುಂಬಕ್ಕೆ ಯಾವುದೇ ಆರ್ಥಿಕ ನೆರವನ್ನೂ ನೀಡದಿದ್ದಾಗ ವೃದ್ಧ ದಂಪತಿ ಉಪವಿಭಾಗಾಧಿಕಾರಿ ನ್ಯಾಯಾಲಯದ ಮೊರೆ ಹೋಗಿದ್ದರು. ವಾದ- ಪ್ರತಿವಾದಗಳನ್ನ ಆಲಿಸಿ ಉಪವಿಭಾಗಾಧಿಕಾರಿ ಜಯಲಕ್ಷಿö್ಮÃಯವರು ದಂಪತಿಗೆ ಸೊಸೆಯಿಂದ ಜೀವನಾಂಶ ಕೊಡಿಸುವಲ್ಲಿ ನೆರವಾಗಿದ್ದರು.

ಈ ಬಗ್ಗೆ ಮಾಧ್ಯಮಗಳ ವರದಿ ಗಮನಿಸಿ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ನೇತೃತ್ವದಲ್ಲಿ ಮಂಗಳವಾರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ರಾಯಕೋಡ್ ಅವರಿಗೆ ಪೇಟ ತೊಡಿಸಿ, ಶಾಲು ಹೊದಿಸಿ, ಸಸಿ ನೀಡಿ ಸನ್ಮಾನಿಸಿದರು. ಅಧಿಕಾರಿಗಳು ಹೀಗೆ ಮಾನವೀಯವಾಗಿ ನಡೆದುಕೊಂಡಾಗಲೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಕೇವಲ ಸಂಬಳಕ್ಕಾಗಿ ಕೆಲಸ ಮಾಡುವ ಕೆಲ ಅಧಿಕಾರಿಗಳ ನಡುವೆ ಹೀಗೆ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ, ಅವರಿಗೆ ಮಾನವೀಯ ನೆಲಗಟ್ಟಿನಲ್ಲಿ ನೆರವಾಗುವ ಜಯಲಕ್ಷಿö್ಮÃ ರಾಯಕೋಡ್‌ರಂಥವರು ಇತರರಿಗೂ ಮಾದರಿ ಎಂದು ಮಾಧವ ನಾಯಕ ಇದೇ ವೇಳೆ ಉಪವಿಭಾಗಾಧಿಕಾರಿಗಳ ಕಾರ್ಯಕ್ಕೆ ಶ್ಲಾಘಿಸಿದರು.

ನನ್ನ ಕರ್ತವ್ಯವನ್ನ ನಾನು ಮಾಡಿದ್ದೇನೆ ಅಷ್ಟೇ. ಹಿರಿಯರು ನಮಗೆಲ್ಲ ಆದರ್ಶಪ್ರಾಯರಾಗಿರುತ್ತಾರೆ. ಅಂಥವರನ್ನ ಗೌರವಯುತವಾಗಿ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯೂ ಆಗಿರುತ್ತದೆ. ಸನ್ಮಾನ ನನಗೆ ಇನ್ನಷ್ಟು ಜವಾಬ್ದಾರಿಗಳನ್ನು ನೀಡಿದೆಯೆಂದು ಭಾವಿಸುತ್ತೇನೆ ಎಂದು ಉಪವಿಭಾಗಾಧಿಕಾರಿ ಅಭಿಪ್ರಾಯ ವ್ಯಕ್ತಪಡಿಸಿದರು.

ವೇಳೆ ವೇದಿಕೆಯ ಪ್ರಮುಖರಾದ ಶಿವಾನಂದ ನಾಯ್ಕ, ರಾಮಾ ನಾಯ್ಕ, ಸಂದೇಶ ನಾಯ್ಕ, ಚಂದ್ರಕಾA ನಾಯ್ಕ, ಸಿ.ಎನ್.ನಾಯ್ಕ, ಡಿ.ಕೆ.ನಾಯ್ಕ, ಸೂರಜ್ ಕುರೂಮಕರ್, ಕಾಶೀನಾಥ್ ನಾಯ್ಕ ಇದ್ದರು.