ಅಂಕೋಲಾ : ಮಾದನಗೇರಿಯಲ್ಲಿ ನಡೆದ ವಾಹನ ಅಪಘಾತದಲ್ಲಿ ಬಲಗಾಲನ್ನು ಕಳೆದುಕೊಂಡು ತೀವ್ರ ಸಂಕಷ್ಠದ ಜೀವನವನ್ನು ಕಳೆಯುತ್ತಿದ್ದ ಹಟ್ಟಿಕೇರಿಯ ಶ್ರೀಕಾಂತ ನಾಯ್ಕ ಅವರಿಗೆ ವಾಹನ ಚಾಲಕರು, ಮಾಲಕರು, ಕ್ಲಿನರ್, ಹಾಗೂ ಅಭಿ ಕುಮಟಾ ಮುರ್ಕುಂಡೇಶ್ವರ ಗೆಳೆಯರ ಬಳಗದವರು ಸಾಂತ್ವನ ಹೇಳಿ ಧನ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ತಮ್ಮ ಕುಟುಂಬದ ಸದಸ್ಯನಂತೆ ಮಾನವೀಯತೆಯನ್ನು ತೋರಿ ಸಹಾಯಕ್ಕೆ ಮುಂದಾದ ವಾಹನ ಚಾಲಕರು, ಮಾಲಕರು, ಕ್ಲಿನರ್, ಹಾಗೂ ಅಭಿ ಕುಮಟಾ ಮುರ್ಕುಂಡೇಶ್ವರ ಗೆಳೆಯರ ಬಳಗದವರು ಅಪಘಾತವಾದ ಸಂದರ್ಭದಲ್ಲಿ ಖಾಸಗಿ ಆಂಬುಲೆನ್ಸ್ ವ್ಯವಸ್ಥೆ ಮಾಡಿ 10500ರೂ ನೀಡಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲು ನೇರವಾದರು.
ವಾಹನ ಸಂಘಟನೆಯಕಿರವತ್ತಿ ಯಲ್ಲಾಪುರ, ಹುಬ್ಬಳ್ಳಿ, ಕುಮಟಾ. ಅಂಕೋಲಾ ಕಾರವಾರದ ಪ್ರತಿಯೊಬ್ಬರು ಕೂಡ ತಮ್ಮ ಕೈಲಾದ ಸಹಾಯವನ್ನು ಮಾಡಿ 56,100 ರೂ ಗಳನ್ನು ಕೂಡಿಸಿ ನೆರವಿಗೆ ನಿಂತು ಮಾನವೀಯತೆ ಮೆರೆದಿದ್ದಾರೆ.

