ಅಂಕೋಲಾ : ತಾಲೂಕಿನ ಪ್ರತಿಷ್ಠಿತ ಅಲಗೇರಿಯ ಶ್ರೀ ಹೋಲೆವೆಟರ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಅಶೋಕ ರಾಮಚಂದ್ರ ನಾಯ್ಕ, ಮೇಲಿನಕೇರಿ ಹಾಗೂ ಕಾರ್ಯದರ್ಶಿಯಾಗಿ ಚಂದನ ಪಂತ, ಉಪಾಧ್ಯಕ್ಷರಾಗಿ ಮಹೇಶ ಜಿ ನಾಯ್ಕ ಆಯ್ಕೆಯಾಗಿದ್ದಾರೆವಿನೋದ ಆರ್. ಗಾಂವಕರ ಸಹ ಕಾರ್ಯದರ್ಶಿಯಾಗಿ, ರವಿ ಗಿರಿಯಾ ನಾಯ್ಕ ಖಜಾಂಚಿಯಾಗಿ ಅವಿರೋಧ ಆಯ್ಕೆಯಾದರು.ನಿಕಟಪೂರ್ವ ಅಧ್ಯಕ್ಷ ರಾಯಪ್ಪ ಜಿ. ನಾಯ್ಕ ರವರ ಅಧ್ಯಕ್ಷತೆಯ ಸಭೆಯಲ್ಲಿ, 31 ವರ್ಷಗಳ ಕಾಲ ಗಣೇಶೋತ್ಸವವನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಗಿದೆ. ಅದೇ ರೀತಿ ಪ್ರಸ್ತುತ 32 ನೇ ವರ್ಷದ ಆಚರಣೆಯು ಇದಕ್ಕಿಂತ ಹೆಚ್ಚಿನ ರೀತಿಯಲ್ಲಿ ಆಚರಿಸಿ ಸಮಿತಿಯ ಕೀರ್ತಿ ಹಾಗೂ ಘನತೆಯನ್ನು ಹೆಚ್ಚಿಸುವಂತಾಗಲಿ ಎಂದು ಹಾರೈಸಿದರು.10 ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಪೂಜಾ ಸಮಯದಲ್ಲಿ ಶ್ರೀ ಗಜಾನನ ಭಜನಾ ಮಂಡಳಿಯ ವತಿಯಿಂದ ಭಜನೆ ಕಾರ್ಯಕ್ರಮ, 9 ನೆಯ ದಿನ ಮಹಾಪೂಜೆಯ ನಂತರ ಸ್ಥಳಿಯ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ಹಾಗೂ ವಿಸರ್ಜನೆಯ ದಿನ ಶ್ರೀ ಸಣ್ಣಮ್ಮ ದೇವಿ ತರುಣ ಮಿತ್ರ ಮಂಡಳಿಯ ವತಿಯಿಂದ ಜಾಂಜ್ ನ ಮೂಲಕ ಮೆರವಣಿಗೆ ಇರುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಅನಂದು ಗಾಂವಕರ, ಶ್ರೀಕಾಂತ ನಾಯ್ಕ, ತಾಕು ನಾಯ್ಕ, ಬಾಬುರಾಯ ಗಾಂವಕರ, ಉಮೇಶ ಥಾಮಸೆ, ನಾಗೇಶ ಗಾಂವಕರ, ಅನಂದು ಎಸ್. ನಾಯ್ಕ, ಪ್ರಶಾಂತ್ ಆರ್. ನಾಯ್ಕ, ಶ್ರೀಕಾಂತ್ ಏಸ್. ನಾಯ್ಕ, ಶ್ರೀಕಾಂತ್ ಜೈನು ನಾಯ್ಕ, ಶಿವಾನಂದ ನಾಯ್ಕ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.ರವಿ ಗಿರಿಯಾ ನಾಯ್ಕ ಸ್ವಾಗತಿಸಿದರು, ದಿನೇಶ ದೇವಣ್ಣ ನಾಯ್ಕ ವಂದಿಸಿದರು.