TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಅಯೋಧ್ಯಾ ರಾಮ ಮಂದಿರದ ಉದ್ಘಾಟನೆಯ ನಿಮಿತ್ತ ಮಂತ್ರಾಕ್ಷತೆ ಹಂಚಲು ಹೋದಾಗ ಧಾಂದಲೆ

Jan 6, 2024 | ವಿಶೇಷ |

ಅಯೋಧ್ಯಾ ರಾಮ ಮಂದಿರದ ಉದ್ಘಾಟನೆಯ ನಿಮಿತ್ತ ಮಂತ್ರಾಕ್ಷತೆ ಹಂಚಲು ಹೋದಾಗ ಧಾಂದಲೆ

ಅಂಕೋಲಾ : ಅಯೋಧ್ಯಾ ರಾಮ ಮಂದಿರದ ಉದ್ಘಾಟನೆಯ ನಿಮಿತ್ತ ಮಂತ್ರಾಕ್ಷತೆ ಹಂಚಲು ಹೋದಾಗ ವ್ಯಕ್ತಿಯೊಬ್ಬ ಧಾಂದಲೆ ನಡೆಸಿ, ಅವಾಚ್ಯ ಶಬ್ದದಿಂದ ಬೈದು, ಹಲ್ಲೆ ನಡೆಸಿರುವ ಘಟನೆ ಹಿಲ್ಲೂರಿನ ತಿಂಗಳಬೈಲನ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಎದುರು ನಡೆದಿದೆ. ಈ ಬಗ್ಗೆ ಅಂಕೊಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಹಿಲ್ಲೂರು ಗ್ರಾಮದ ತಿಂಗಳಬೈಲ್‌ನ ಮೂಲಿಗದ್ದೆಯ ಪ್ರದೀಪ ಮಾಣೇಶ್ವರ ನಾಯಕ ಪುಂಡಾಟ ಮೆರೆದ ಆರೋಪಿತನಾಗಿದ್ದಾನೆ.

ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಕಮಿಟಿ ಸದಸ್ಯ ಸಚಿತ ಗೋವಿಂದ್ರಾಯ ನಾಯಕ. ಹಿಲ್ಲೂರು ಹಾಗೂ ನಾಗರಾಜ ಗಣಪತಿ ಹೆಗಡೆ ಹಾಗೂ ದತ್ತಾತ್ರೇಯ ಗಣಪತಿ ಹೆಗಡೆ ಹಲ್ಲೆಗೊಳಗಾದವರಾಗಿದ್ದಾರೆ.

ಎಫ್‌ಐಆರ್ ನಲ್ಲಿ ಏನಿದೆ..?

ಹಿಲ್ಲೂರು ಗ್ರಾಮದ ತಿಂಗಳಬೈಲ್‌ನ ಮೂಲಿಗದ್ದೆಯ ಪ್ರದೀಪ ತಂದೆ ಮಾಣೇಶ್ವರ ನಾಯಕ ಇತನು ಮೊದಲಿನಿಂದಲೂ ತಿಂಗಳಬೈಲ್ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಪೂಜೆಗೆ ಬರುವ ಊರಿನ ಜನರೆಲ್ಲರಿಗೂ ಅವಾಚ್ಯ ಶಬ್ದಗಳಿಂದ ಬೈಯುವುದು ಮತ್ತು ಊರಿನವರೊಂದಿಗೆ ವಿನಾ ಕಾರಣ ಜಗಳ ಮಾಡುವುದು ಬೆದರಿಕೆ ಹಾಕುತ್ತಾ ತೊಂದರೆ ಕೊಡುತ್ತಾ ಬಂದಿದ್ದ.

ಹೀಗಿರುವಾಗ ರಾಮಲಿಂಗೇಶ್ವರ ದೇವಸ್ಥಾನದ ಕಮಿಟಿ ಸದಸ್ಯರು ಹಾಗೂ ಊರಿನವರೊಂದಿಗೆ ಸೇರಿಕೊಂಡು ಅಯೋಧ್ಯ ರಾಮ ಮಂದಿರದ ಉದ್ಘಾಟನೆ ಪ್ರಯುಕ್ತ ಮಂತ್ರಾಕ್ಷತೆ ಬಂದಿದ್ದನ್ನು ಊರಿನವರಿಗೆ ಹಂಚುವ ಸಲುವಾಗಿ ದೇವಸ್ಥಾನದ ಹೊರ ಆವರಣದಲ್ಲಿ ಸಿದ್ಧತೆ ಮಾಡುತ್ತಿದ್ದಾಗ ಪ್ರದೀಪ ಮಾಣೇಶ್ವರ ನಾಯಕ ಈತನು ರಾಮಲಿಂಗೇಶ್ವರ ದೇವಸ್ಥಾನದ ಆವರಣದೊಳಗೆ ಬಂದು, ದತ್ತಾತ್ರೇಯ ಗಣಪತಿ ಹೆಗಡೆ ಅವರಿಗೆ ಕೂಗಿ ಕರೆದು, ಯಾರನ್ನು ಕೇಳಿ ದೇವಸ್ಥಾನದೊಳಗೆ ಹೋಗಿದ್ದೀರಾ ಬೋಳಿಮಗನೇ, ಯಾರ ಪರ್ಮಿಶನ್ ಕೊಟ್ಟವರು ಬೋಳಿಮಕ್ಕಳಾ, ಸೂಳೆಮಕ್ಕಳಾ ನಿಮಗೆ ದೇವಸ್ಥಾನದೊಳಗೆ ಹೋಗಲು ಅಂತಾ ಹೇಳಿ, ತನ್ನ ಕೈಯಿಂದ ದತ್ತಾತ್ರೇಯ ಹೆಗಡೆ ಅವರ ಹೊಟ್ಟೆಯ ಮೇಲೆ ಬಲವಾಗಿ ಹೊಡೆದಿದ್ದಾನೆ.

 ದತ್ತಾತ್ರೇಯ ಹೆಗಡೆ ಅವರಿಗೆ ಪುನಃ ಹೊಡೆಯಲು ಬಂದಾಗ ತಪ್ಪಿಸಲು ಹೋದ ದೇವಸ್ಥಾನ ಕಮೀಟಿ ಸದಸ್ಯ ಹಿಲ್ಲೂರಿನ ಸಚಿತ ಗೋವಿಂದ್ರಾಯ ನಾಯಕ ಅಂಕೋಲಾ ಇವರಿಗೆ ಕಲ್ಲಿನಿಂದ ತಲೆಯ ಮೇಲೆ ಹೊಡೆದುದ್ದಲ್ಲದೇ, ಪುನಃ ಕತ್ತಿಯನ್ನು ಹಿಡಿದುಕೊಂಡು ಹೊಡೆಯಲು ಬಂದಾಗ ತಪ್ಪಿಸಲು ಹೋದ ನಾಗರಾಜ ಗಣಪತಿ ಹೆಗಡೆ ಅವರಿಗೂ ಸಹ ಕತ್ತಿಯಿಂದ ಬಲಬದಿಯ ಕಣ್ಣಿನ ಹತ್ತಿರ ಹೊಡೆದು ಗಾಯಗೊಳಿಸಿದ್ದಾನೆ.

ಇನ್ನೊಮ್ಮೆ ಪರ್ಮಿಶನ್ ಇಲ್ಲದೇ ದೇವಸ್ಥಾನಕ್ಕೆ ಬಂದರೇ ಸೂಳೆಮಕ್ಕಳಾ ನಿಮಗೆಲ್ಲರನ್ನು ಕೊಲೆ ಮಾಢುವುದಾಗಿ ಅಂತಾ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪಿಎಸೈ ಉದ್ದಪ್ಪ ಧರೆಪ್ಪನವರ್ ಪ್ರಕರಣ ದಾಖಲಿಕೊಂಡು ಆರೋಪಿ ಪ್ರದೀಪ ತಂದೆ ಮಾಣೇಶ್ವರ ನಾಯಕ ಅವರ ಮೇಲೆ ಐಪಿಸಿ ಕಲಂ ಅಡಿ 506,504,323,324 ಪ್ರಕರಣ ದಾಖಲಾಗಿದೆ.

Share:

Rate:

Previousಅಂಕೋಲಾದಲ್ಲಿ ಹೆಚ್ಚುತ್ತಿರುವ ವಿವಾಹ ವಿಚ್ಛೇಧನ ಪ್ರಕರಣ
Nextಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್‌ನಿಂದ ಅಮದಳ್ಳಿ ದೇವಸ್ಥಾನಕ್ಕೆ 3 ಲಕ್ಷ ರು. ನೆರವು

Related Posts

ಸರಕಾರಿ ಗೌರವದೊಂದಿಗೆ ಡಿವೈಎಸ್ಪಿ ಅರುಣ ನಾಯಕ ಅವರಿಗೆ ಅಂತಿಮ ವಿದಾಯ

ಸರಕಾರಿ ಗೌರವದೊಂದಿಗೆ ಡಿವೈಎಸ್ಪಿ ಅರುಣ ನಾಯಕ ಅವರಿಗೆ ಅಂತಿಮ ವಿದಾಯ

July 20, 2023

ಕೃಷಿ ಜಾಗೃತಿಯ ಆಂದೋಲನಕ್ಕೆ ಅಭಿಯಾನ ರೂಪಿಸಿದ ಬೆಳೆಗಾರರ ಸಮಿತಿ

ಕೃಷಿ ಜಾಗೃತಿಯ ಆಂದೋಲನಕ್ಕೆ ಅಭಿಯಾನ ರೂಪಿಸಿದ ಬೆಳೆಗಾರರ ಸಮಿತಿ

July 28, 2023

ಫೆ 10 ರಂದು ಅಂಕೋಲಾಕ್ಕೆ ಚಕ್ರವರ್ತಿ ಸೂಲಿಬೆಲೆ

ಫೆ 10 ರಂದು ಅಂಕೋಲಾಕ್ಕೆ ಚಕ್ರವರ್ತಿ ಸೂಲಿಬೆಲೆ

February 9, 2024

ಅಂಕೋಲಾದಲ್ಲಿ ನಾಗ ಮೂರ್ತಿಯೆ ನಾಪತ್ತೆ

ಅಂಕೋಲಾದಲ್ಲಿ ನಾಗ ಮೂರ್ತಿಯೆ ನಾಪತ್ತೆ

August 10, 2024

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಇಂದು ಅಂಕೋಲಾಕ್ಕೆ ಆಗಮಿಸಿ ಕಣಕಣೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿರುವ ಗೋಪಾಲಕೃಷ್ಣ ನಾಯಕ
    ಇಂದು ಅಂಕೋಲಾಕ್ಕೆ ಆಗಮಿಸಿ ಕಣಕಣೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿರುವ ಗೋಪಾಲಕೃಷ್ಣ ನಾಯಕ
  • ಹಾಡು ಹಗಲೇ ಕಾಂಗ್ರೆಸ್ ಮುಖಂಡ ಗೋಪಾಲ ಕೃಷ್ಣ ನಾಯಕ ಮೇಲೆ ಕೊಲೆ ಯತ್ನ: ಚಾಕುವಿನಿಂದ ಇರಿದು ಪರಾರಿಯಾದ ಗ್ಯಾಂಗ್
    ಹಾಡು ಹಗಲೇ ಕಾಂಗ್ರೆಸ್ ಮುಖಂಡ ಗೋಪಾಲ ಕೃಷ್ಣ ನಾಯಕ ಮೇಲೆ ಕೊಲೆ ಯತ್ನ: ಚಾಕುವಿನಿಂದ ಇರಿದು ಪರಾರಿಯಾದ ಗ್ಯಾಂಗ್
  • ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
    ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
  • ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
    ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
  • ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು
    ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy